Fire Accident: ಬಾಗಿಲ ಬಳಿ ಹಚ್ಚಿದ ದೀಪದ ಭಾರೀ ಬೆಂಕಿ ಅವಘಡ, 7 ಜನರಿಗೆ ಗಂಭೀರ ಗಾಯ

Fire Accident: ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಈ ಹಬ್ಬದ ಸಂದರ್ಭದಲ್ಲಿ ದೀಪಗಳನ್ನು ಮನೆಯಲ್ಲಿ ಬಾಗಿಲಿನಲ್ಲಿ ಹಚ್ಚಲಾಗಿದೆ. ಮನೆಯ ಬಾಗಿಲಿನಲ್ಲಿ ಹಚ್ಚಿದ ದೀಪದಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್‌ನಲ್ಲಿರುವ ಮನೆಯೊಂದರ ಬಾಗಿಲಿನಲ್ಲಿ ಹಚ್ಚಿದ ದೀಪದಿಂದ ಬೆಂಕಿ ಅವಘಡ ಉಂಟಾಗಿ 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಬಾಗಲಕೋಟೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಮೇಶ್ ಮೇಟಿ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಉಮೇಶ್ ಮೇಟಿ ಮನೆಯಲ್ಲಿ ಬಾಡಿಗೆಗೆ ಇದ್ದ ರಾಜೇಂದ್ರ ತಪಶೆಟ್ಟಿ ಕುಟುಂಬದವರು ಮನೆಯ ಮುಂದೆ ದೀಪ ಹಚ್ಚಿದ್ದು, ದೀಪ ಅಲ್ಲಿಯೇ ಬಿದ್ದಿದ್ದ ಆಯಿಲ್‌ಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಈ ಅವಘಡದಿಂದ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಬೈಕ್‌ಗಳು ಕೂಡಾ ಬೆಂಕಿಗಾಹುತಿಯಾಗಿದೆ. ಮನೆಗೂ ಬೆಂಕಿ ತಗುಲಿ ಮನೆ ಸುಟ್ಟು ಕರಕಲಾಗಿದೆ.
Comments are closed.