Gujarat : ಗುಜರಾತ್ ರಾಜಕೀಯದಲ್ಲಿ ಮಹಾ ಬೆಳವಣಿಗೆ – ಸಿಎಂ ಬಿಟ್ಟು 16 ಬಿಜೆಪಿ ಸಚಿವರು ದಿಢೀರ್ ರಾಜೀನಾಮೆ !!

Share the Article

Gujarat : ಗುಜರಾತ್ ನಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಹೊರತುಪಡಿಸಿ ಇಡಿ ಸಚಿವ ಸಂಪುಟ ಖಾಲಿಯಾಗಿದ್ದು, ಮುಖ್ಯಮಂತ್ರಿಯನ್ನು ಹೊರತುಪಡಿಸಿ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಆದರೆ ಇದಕ್ಕೆ ಕಾರಣವೂ ಇದೆ.

ಹೌದು, ಗುಜರಾತ್ ರಾಜಕೀಯದಿಂದ ದೊಡ್ಡ ಸುದ್ದಿ ಹೊರಬಿದ್ದಿದ್ದು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೊರತುಪಡಿಸಿ ರಾಜ್ಯದ ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಸರ್ಕಾರದಲ್ಲಿರುವ ಎಲ್ಲಾ 16 ಸಚಿವರು ರಾಜೀನಾಮೆ ನೀಡಿದ್ದಾರೆ. ಏಕೆಂದರೆ ಗುಜರಾತ್‌ನ ಬಿಜೆಪಿ ಸರ್ಕಾರ ತನ್ನ ಸಚಿವ ಸಂಪುಟವನ್ನು ವಿಸ್ತರಿಸಲು ಯೋಜಿಸುತ್ತಿದೆ. ಹೀಗಾಗಿ ಸಚಿವ ಸಂಪುಟವನ್ನು ಪುನರ್ ರಚಿಸುವ ಕಾರಣ ಸಚಿವರು ರಾಜೀನಾಮೆ ನೀಡಿದ್ದಾರೆ.

ವರದಿಗಳ ಪ್ರಕಾರ, ಗುಜರಾತ್‌ನಲ್ಲಿನ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಸರಿಸುಮಾರು ಐದು ಸಚಿವರನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಆದರೆ ಹಲವಾರು ಹಳೆಯ ಮುಖಗಳನ್ನು ಕೈಬಿಡಬಹುದು. ಅದೇ ಸಮಯದಲ್ಲಿ, 16 ಹೊಸ ಮುಖಗಳನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬಹುದು. ಇಬ್ಬರು ಮಹಿಳಾ ನಾಯಕಿಯರನ್ನು ಸಚಿವರನ್ನಾಗಿ ನೇಮಿಸುವ ಸಾಧ್ಯತೆಯಿದೆ. ಹೊಸ ಸಂಪುಟದಲ್ಲಿ ಸರಿಸುಮಾರು 20 ರಿಂದ 23 ಸದಸ್ಯರಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 12:39ಕ್ಕೆ ಹೊಸ ಗುಜರಾತ್ ಸಚಿವ ಸಂಪುಟದ ಪ್ರಮಾಣವಚನ ಸಮಾರಂಭ ನಡೆಯಲಿದೆ.

Comments are closed.