Fraud: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ ನಕಲಿ ಚಿನ್ನಾಭರಣ ಕೊಟ್ಟು, ಲಕ್ಷಾಂತರ ರೂಪಾಯಿ ವಂಚನೆ-ಕೇಸು ದಾಖಲು

Share the Article

Puttur: ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಸಹಕಾರಿ ಸಂಘಕ್ಕೆ 9ಲಕ್ಷ ರೂ. ಹೆಚ್ಚು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ), ಪುತ್ತೂರು ಶಾಖೆಯಲ್ಲಿ ಈ ವಂಚನೆ ನಡೆದಿದೆ. ಆರೋಪಿ ಅಬ್ದುಲ್‌ ರಮೀಜ್‌ ವಿರುದ್ಧ ಪ್ರಜಾ ಭದ್ರತಾ ಸಂಹಿತೆ (BNS) 2023 ರ ಕಲಂ 318 (4) ಮತ್ತು 316(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರಿನ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕಿ ಪವಿತ್ರಾ ಎನ್‌ ಅವರು ದೂರು ನೀಡಿರುವ ಕುರಿತು ವರದಿಯಾಗಿದೆ.

Comments are closed.