Mumbai: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಗೆ ಹೆರಿಗೆ ನೋವು- ಸೀದಾ ಬಂದು ಹೆರಿಗೆ ಮಾಡಿಸಿ ಹೋದ ಯುವಕ!!

Share the Article

Mumbai: ಮುಂಬೈ ರೈಲ್ವೆ ನಿಲ್ದಾಣದಲ್ಲಿ (delivery Mumbai) ಮಂಗಳವಾರ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ನರಳುತ್ತಿದ್ದ ವೇಳೆ ಯುವಕನೊಬ್ಬ ಬಂದು ಹೆರಿಗೆ ಮಾಡಿಸಿದ್ದಾನೆ. ಈ ವಿಚಾರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

 

ಹೌದು, ಯುವಕನೋರ್ವನ ಸಮಯಪ್ರಜ್ಞೆ ಎರಡು ಅಮೂಲ್ಯ ಜೀವಗಳನ್ನು ಉಳಿಸಿದೆ. ಮುಂಬೈನ ರಾಮ ಮಂದಿರ್ ರೈಲ್ವೆ ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾನೆ. ಈ ಘಟನೆ ನಡೆಯುವ ವೇಳೆ ಅಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದವರು ಈ ವಿಚಾರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡು ವೀಡಿಯೋ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.

 

ಮಂಜಿತ್ ಧಿಲ್ಲನ್ ಎಂಬುವವರೇ ಮಹಿಳೆಯೊಬ್ಬರಿಗೆ ಸಹಜ ಹೆರಿಗೆಯಾಗುವುದಕ್ಕೆ ಸಹಾಯ ಮಾಡಿದ ಯುವಕ. ಮಂಜಿತ್ ಧಿಲ್ಲನ್ ಅವರು ಆ ಮಹಿಳೆ ಹೆರಿಗೆ ನೋವಿನಿಂದ ಕಷ್ಟಪಡುತ್ತಿರುವುದನ್ನು ಗಮನಿಸಿ ಕೂಡಲೇ ರೈಲಿನ ಎಮರ್ಜೆನ್ಸಿ ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ. ವೈರಲ್ ಆದ ಪೋಸ್ಟ್ ಪ್ರಕಾರ ವೈದ್ಯರೊಬ್ಬರ ಮಾರ್ಗದರ್ಶನವನ್ನೂ ವೀಡಿಯೋ ಕಾಲ್ ಮೂಲಕ ಪಡೆದು ಈ ಯುವಕ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಮಾಡಿದ್ದಾರೆ.

 

ಇದೀಗ ಮಗು ಮತ್ತು ಮಹಿಳೆ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಈ ವಿಡಿಯೋ ಎಲ್ಲ ಕಡೆ ಸಖತ್​​ ವೈರಲ್​ ಆಗಿದ್ದು, ಪ್ರಶಂಸೆಗೂ ಕಾರಣವಾಗಿದೆ. ಸಂಬಂಧಗಳೇ ಇಲ್ಲದ ವ್ಯಕ್ತಿಗೆ ಬಂದು ಹೇರಿಗೆ ಮಾಡುವುದೆಂದರೆ ಸುಲಭವೇ? ಇಲ್ಲ ಆ ವ್ಯಕ್ತಿಯನ್ನು ದೇವರೇ ಕಳಿಸಿರಬೇಕು ಅಲ್ವಾ? ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾರೆ. ಇನ್ನು ಈ ವಿಡಿಯೋವನ್ನು ಸಂಗೀತಗಾರ ಮಂಜೀತ್ ಧಿಲ್ಲೋನ್ ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ.

Comments are closed.