Viral Video : ಖರೀದಿಸಿದ ಕಾರಿನ ಪಬ್ಲಿಸಿಟಿಗೆ ದೈವದ ಬಳಕೆ – ಎತ್ತ ಸಾಗುತ್ತಿದೆ ನಮ್ಮ ಕರಾವಳಿ ಸಂಸ್ಕೃತಿ?


Viral Video : ಕಾಂತಾರ ಚಿತ್ರ ಬಿಡುಗಡೆಯಾದ ಆಗಿನಿಂದಲೂ ಕೂಡ ಕರಾವಳಿ ದೈವದ ರೀತಿ ಅನೇಕರು ವಿವಿಧ ರೀತಿಯಲ್ಲಿ ವೇಷಭೂಷಣಗಳನ್ನು ತೊಟ್ಟು ಹುಚ್ಚಾಟ ಮೆರೆಯುತ್ತಿದ್ದಾರೆ. ದೈವದ ರೀತಿ ಕೂಗುವುದು ಅರಚ್ಚುವುದು ಮಾಡಿ ಕರಾವಳಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಈ ಕುರಿತಾಗಿ ಅನೇಕ ದೈವ ನರ್ತಕರು ಹಾಗೂ ದೈವಾರಾಧಕರು ಈಗಾಗಲೇ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂತಾರ ಚಿತ್ರದ ಕುರಿತು ಕೂಡ ಕೆಲವರು ವಿರೋಧ ಮಾಡಿದ್ದಾರೆ. ಇದರ ನಡುವೆಯೇ ಇಲ್ಲೊಬ್ಬ ಭೂಪ ತಾನು ಖರೀದಿಸಿದ ಹೊಸ ಕಾರಿನ ಪ್ರಮೋಷನ್ ಗೆ ದೈವವನ್ನು ಬಳಕೆ ಮಾಡಿಕೊಂಡು ಮೂರ್ಖತನದ ಪರಮಾವಧಿಯನ್ನು ಮೆರೆದಿದ್ದಾನೆ.
ಹೌದು, ತಮಿಳುನಾಡಿನಲ್ಲಿ ವ್ಯಕ್ತಿ ಒಬ್ಬ ತಾನು ಖರೀದಿಸಿದ ಹೊಸ ಆಡಿ ಕಾರಿನ ಪಬ್ಲಿಸಿಟಿಗಾಗಿ ದೈವವನ್ನು ಬಳಕೆ ಮಾಡಿ ಕೊಂಡಿದ್ದಾನೆ. ಈತ ಮತ್ತೊಬ್ಬ ವ್ಯಕ್ತಿಗೆ ಪಂಜುರ್ಲಿ ದೈವದ ರೀತಿ ವೇಷವನ್ನು ತೊಟ್ಟು, ಹಿನ್ನೆಲೆಯಾಗಿ ಕಾಣ್ತಾರ ಚಿತ್ರದ ಸಂಗೀತವನ್ನು ಬಳಸಿ ಹುಚ್ಚಾಟ ತೋರಿದ್ದಾನೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ದೈವದ ವೇಷ ತೊಟ್ಟವನ್ನು ಅರಚುತ್ತ, ಕಿರುಚುತ್ತಾ, ಕೂಗುತ್ತಾ ಕಾರಿನ ಸುತ್ತ ಬೇಕಾಬಿಟ್ಟಿ ಕುಣಿದಾಡುತ್ತಿರುವುದನ್ನು ಕಾಣಬಹುದು. ನಂತರ ಕಾರಿನ ಡಾಕ್ಯುಮೆಂಟ್ಗಳನ್ನು ದೈವವೇ ಕಾರಿನ ಓನರ್ ಗೆ ನೀಡಿ ಹರಸುವುದನ್ನು ಕೂಡ ಇದರಲ್ಲಿ ಕಾಣಬಹುದು.
https://www.instagram.com/reel/DP1Y6jGkiup/?igsh=cmduNWNzdzhhZmo1
pratipan _rkp ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕರಾವಳಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕರಾವಳಿಗರ ನಂಬಿಕೆ, ಆಚರಣೆ, ಸಂಪ್ರದಾಯ, ಸಂಸ್ಕೃತಿಯನ್ನು ಈ ರೀತಿಯಾಗಿ ಬೇಕಾಬಿಟ್ಟಿ ಬಳಸಿಕೊಳ್ಳುವುದು ನಿಜಕ್ಕೂ ಖಂಡನೀಯ. ಅನೇಕ ತುಳುನಾಡಿನವರು ಈ ವಿಡಿಯೋಗೆ ಕಾಮೆಂಟ್ ಮಾಡಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments are closed.