Rishab Shetty : ಕಾಂತಾರ ಚಿತ್ರಕ್ಕೆ ದೈವಾರಾಧಕರ ವಿರೋಧ – ರಿಷಬ್ ಶೆಟ್ಟಿ ಹೇಳಿದ್ದೇನು?

Share the Article

 

Rishab Shetty:  ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿರುವ ಕಾಂತರಾ ಚಾಪ್ಟರ್ 1 ಸಿನಿಮಾ ಅಬ್ಬರದ ಪ್ರದರ್ಶನ ಕಾಣುತ್ತಿದೆ. ಭಾರತ ಚಿತ್ರರಂಗದ ಹಲವು ಚಿತ್ರಗಳ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ದಿನದಿನವೂ ಚಿತ್ರದ ಕಲೆಕ್ಷನ್ ಹೆಚ್ಚಾಗುತ್ತಿದೆ. ಆದರೆ ಇದರ ನಡುವೆ ಕಾಂತಾರ ಚಿತ್ರದಲ್ಲಿ ದೈವದ ಹಿನ್ನೆಲೆಗಳನ್ನು ತಿರುಚಲಾಗಿದೆ, ಸಂಪ್ರದಾಯಕ್ಕೆ ಧಕ್ಕೆಯಾಗಿದೆ ಎಂದು ಕೆಲವು ದೈವರಾದಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಈ ಕುರಿತಾಗಿ ಕಾಂತಾರ ಚಿತ್ರದ ನಟ ಮತ್ತು ನಿರ್ದೇಶಕರಿಸಪ್ ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

 

 ಇಂದು ಚಾಮುಂಡಿ ಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿಯ ದರ್ಶನ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ ಅವರು ದೈವಾರಾಧಕರ ವಿರೋಧದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು “ನಾನು ಕೂಡ ದೈವವನ್ನು ನಂಬುವಂತವನು. ನಾನು ದೈವವನ್ನು ಆರಾಧನೆ ಮಾಡುತ್ತೇನೆ. ಹೀಗಾಗಿ ನಾವು ಪ್ರತಿಯೊಂದು ಹಂತದಲ್ಲಿ ದೈವದ ಅಪ್ಪಣೆಯನ್ನು ಪಡೆದು ಸಿನಿಮಾವನ್ನು ಮಾಡಿದ್ದೇವೆ’ ಎಂದು ಹೇಳಿದ್ದಾರೆ.

 

 ಬಳಿಕ ಮಾತನಾಡಿದ ಅವರು ಅಲ್ಲದೆ ಸಿನಿಮಾದಲ್ಲಿ ದೈವವನ್ನು ತೋರಿಸುವಾಗ ಯಾವುದೇ ರೀತಿಯ ತಪ್ಪುಗಳು ಆಗಬಾರದೆಂಬುದನ್ನು ಗಮನದಲ್ಲಿಟ್ಟುಕೊಂಡು ನಾವು ಸಿನಿಮಾವನ್ನು ಚಿತ್ರಿಸಿದ್ದೇವೆ. ಎಲ್ಲ ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಂಡು ಸಿನಿಮಾ ಮಾಡಿದ್ದೇವೆ. ಪ್ರತಿಯೊಬ್ಬರಿಗೂ ಕೂಡ ಅವರದೇ ಆದ ಆಲೋಚನೆಗಳಿದ್ದು ಅದನ್ನು ವ್ಯಕ್ತಪಡಿಸುವ ಹಕ್ಕು ಅವರಿಗಿದೆ. ಹಾಗಾಗಿ ಅವರು ಹೇಳಿದ್ದಾರೆ ಅಷ್ಟೇ. ಅಲ್ಲದೆ ನಾನು ನನ್ನ ಕಲ್ಪನೆಯಲ್ಲಿ ದೈವದ ಆಲೋಚನೆ ಹೇಗಿದೆ, ದೈವವನ್ನು ಹೇಗೆ ತೋರಿಸಬೇಕು ಎಂಬ ಚಿಂತನೆಯನ್ನು ನಡೆಸಿದೆ ಆ ರೀತಿಯಾಗಿ ನಾನು ಯಾವುದೇ ಲೋಪದೋಷಗಳಿಲ್ಲದೆ ತೋರಿಸಿದ್ದೇನೆ ಎಂದು ಹೇಳಿದ್ದಾರೆ.

Comments are closed.