BBK-12 : ಬಿಗ್ ಬಾಸ್ ನಲ್ಲಿ ವಾರದ ಮಧ್ಯೆ ಎಲಿಮಿನೇಷನ್ – ಈ ಇಬ್ಬರು ಮನೆಯಿಂದ ಔಟ್!!

Share the Article

BBK-12 : ಕನ್ನಡ ಕಿರುತೆರೆಯ ಜನಪ್ರಿಯ ಶುರುವಾಗಿರುವ ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು ಕನ್ನಡಿಗರ ಮನ ಗೆದ್ದಿದೆ. ಇದೀಗ ಬಿಗ್ ಬಾಸ್ ಅಭಿಮಾನಿಗಳಿಗೆ ಒಂದು ಬೇಸರದ ಸಂಗತಿ ಎದುರಾಗಿದ್ದು ಈ ವಾರ ಬಿಗ್ ಬಾಸ್ ಮನೆಯಲ್ಲಿ ವೀಕ್ ಮಿಡಲ್ ಎಲಿಮಿನೇಷನ್ ನಡೆಯಲಿದೆ. ಇದರ ಫಲವಾಗಿ ಈ ಇಬ್ಬರು ಸ್ಪರ್ದಿಗಳು ಮನೆಯಿಂದ ಹೊರ ನಡೆಯಲಿದ್ದಾರೆ ಎಂಬ ಮಾಹಿತಿ ಬಂದೊದಗಿದೆ.

ಹೌದು, ಸರಣಿ ಟಾಸ್ಕ್‌ಗಳನ್ನು ನೀಡುತ್ತಾ ಮಿನಿ ಫಿನಾಲೆಗೆ ಸ್ಪರ್ಧಿಗಳ ಆಯ್ಕೆ ನಡೆಯುತ್ತಿದೆ. ಈ ನಡುವೆ ವಾರದ ಮಧ್ಯದಲ್ಲೇ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಎಲಿನೇಟ್ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.

ಇಬ್ಬರು ಸ್ಪರ್ಧಿಗಳನ್ನು ಮಿನಿ ಫಿನಾಲೆಗೂ ಮುನ್ನವೇ ಹೊರಗಡೆ ಕಳುಹಿಸಲಾಗುತ್ತಿದೆ ಎನ್ನಲಾಗುತ್ತಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಬಿಗ್‌ ಬಾಸ್‌ ಮನೆಯಿಂದ ವಾರದ ಮಧ್ಯದಲ್ಲೇ ಡಾಗ್‌ ಸತೀಶ್‌ (Dog Sathish) ಹಾಗೂ ಮಂಜು ಭಾಷಿಣಿ (Manju Bhashini) ಇಬ್ಬರು ಎಲಿಮಿನೇಟ್‌ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Comments are closed.