‘KGF-3’ ಡ್ರಾಫ್ಟ್ ರೆಡಿ – ಪೋಸ್ಟ್ ಹಂಚಿಕೊಂಡ ಪ್ರಶಾಂತ್ ನೀಲ್!!

Share the Article

KGF-3: ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಕೆಜಿಎಫ್ ನಿರ್ಮಿಸಿದ ದಾಖಲೆಯನ್ನು ಎಂದೂ ಮರೆಯುವಂತಿಲ್ಲ. ಸೊರಗಿ ಹೋಗುತ್ತಿದ್ದ ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಇದು. ಈಗಾಗಲೇ ಕೆಜಿಎಫ್ ಹಾಗೂ ಕೆಜಿಎಫ್ 2 ಚಿತ್ರಗಳು  ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. ಇದರ ಬೆನ್ನಲ್ಲೇ ಹಲವು ಕನ್ನಡಿಗರ ಪ್ರಶ್ನೆ ಏನೆಂದರೆ ಕೆಜಿಎಫ್ 3 ಬರುತ್ತದೆಯೇ ಎಂಬುದು. ಪ್ರತಿದಿನವೂ ಕೂಡ ಈ ಪ್ರಶ್ನೆ ಕನ್ನಡಿಗರ ಮನದಲ್ಲಿ ಕಾಡುತ್ತಲೇ ಇದೆ. ಈ ಕುರಿತಂತೆ ಕೆಲವು ದಿನಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ 3 ಮಾಡೇ ಮಾಡ್ತೇವೆ ಎಂದು ಹೊಸ ಅಪ್ಡೇಟ್ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಪ್ರಶಾಂತ್ ನೀಲ್ ಕನ್ನಡಿಗರಿಗೆಲ್ಲ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ.

 

ಹೌದು, ಹೌದು.. ಕನ್ನಡ ಸಿನಿಮಾರಂಗವನ್ನು.ಭಾರತೀಯ ಸಿನಿರಂಗದಲ್ಲಿ ಮತ್ತೊಂದು ಹಂತಕ್ಕೇರಿಸಿದ್ದ ಕೆಜಿಎಫ್ ಚಿತ್ರದ ಮೂರನೇ ಭಾಗದ ಕುರಿತು ಮಹತ್ವದ ಮಾಹಿತಿ ದೊರೆತಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಕೊನೆಗೂ ಕೆಜಿಎಫ್ ಭಾಗ 3ರ ಕುರಿತು ದೊಡ್ಡ ಸುಳಿವು ನೀಡಿದ್ದಾರೆ ಎನ್ನಲಾಗಿದೆ.

 

ಆದ್ರೆ ಇದರ ಅಸಲಿಯತ್ತೆ ಬೇರೆ ಇದೆ. ನಿರ್ದೇಶಕ ಪ್ರಶಾಂತ್ ನೀಲ್ ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದರು. ಸಿನಿಮಾ ಬಗ್ಗೆ ಅಪ್​​ಡೇಟ್​​ಗಳನ್ನು ನೀಡುತ್ತಿದ್ದರು. ಆದರೆ, ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ನಕಾರಾತ್ಮಕ ಕಮೆಂಟ್ ಗಳು ಬಂದ ಬಳಿಕ ಅವರು ಸೋಶಿಯಲ್ ಮೀಡಿಯಾಗೆ ಗುಡ್​ಬೈ ಹೇಳಿದ್ದರು. ಈಗ ಪ್ರಶಾಂತ್ ನೀಲ್ ಹೆಸರಲ್ಲಿ ಸಾಕಷ್ಟು ಫೇಕ್ ಖಾತೆಗಳು ಸೃಷ್ಟಿ ಆಗಿವೆ. ಈಗ ‘ಕೆಜಿಎಫ್ 3 ಫೈನಲ್ ಡ್ರಾಫ್ಟ್​’ ಎಂದು ಪೋಸ್ಟ್ ಆಗಿರೋದು ಕೂಡ ಫೇಕ್ ಖಾತೆಯಿಂದಲೇ ಎಂದು ಹೇಳಲಾಗಿದೆ.

Comments are closed.