NHAI: ಗಲೀಜಾದ ಶೌಚಾಲಯದ ಫೋಟೋ ತೆಗೆದು ಅಪ್ಲೋಡ್ ಮಾಡಿ – ಫಾಸ್ಟ್ ಟ್ಯಾಗ್ ಖಾತೆಗೆ 1,000 ಪಡೆಯಿರಿ !!

NHAI: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವಾಗ ಟೋಲ್ ಪ್ಲಾಜಾಗಳು ಎದುರಾಗುವುದು ಸಾಮಾನ್ಯ. ಈ ರೀತಿ ಟೋಲ್ ಗಳು ಎದುರಾದಾಗ ಅನೇಕ ವಾಹನ ಸವಾರರು ಜಾಗವಿರುವ ಕಡೆ ಅಲ್ಲಿ ವಿಶ್ರಮಿಸಿ ಮತ್ತೆ ಮುಂದೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಟೋಲ್ ನವರು ನಿರ್ಮಿಸಿರುವ ಶೌಚಾಲಯಗಳನ್ನು ಕೆಲವರು ಬಳಸುವುದುಂಟು ಪ್ರಯಾಣಿಕರಿಗ್ ಎಂದೆ ಇದನ್ನು ನಿರ್ಮಿಸಲಾಗಿರುತ್ತದೆ. ಈ ಶೌಚಾಲಯಗಳು ಏನಾದರೂ ಸ್ವಚ್ಛವಿಲ್ಲದೆ ಹೋದರೆ ನೀವು ಇದರ ಕುರಿತು ಕಂಪ್ಲೇಂಟ್ ಮಾಡಿ ಒಂದು ಸಾವಿರ ಹಣವನ್ನು ಪಡೆದುಕೊಳ್ಳಬಹುದು.

ಹೌದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತನ್ನ “ವಿಶೇಷ ಅಭಿಯಾನ 5.0” ದ ಭಾಗವಾಗಿ ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್ ಅನ್ನು ಪ್ರಾರಂಭಿಸಿದೆ. ಈ ಅಭಿಯಾನದ ಅಡಿಯಲ್ಲಿ, ಗ್ರಾಹಕರು ಯಾವುದೇ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಪ್ಲಾಜಾಗಳ ಬಳಿ ಇರುವ ಕೊಳಕು ಶೌಚಾಲಯಗಳ ಬಗ್ಗೆ NHAI ವೆಬ್ಸೈಟ್ನಲ್ಲಿ ವರದಿ ಮಾಡಬಹುದು. ನೀವು ಹೇಳುತ್ತಿರುವುದು ನಿಜವೆಂದು ತಿಳಿದರೆ ದೂರುದಾರರ ಕಾರಿನಲ್ಲಿ ಅಳವಡಿಸಲಾದ FASTag ಗೆ ₹1,000 ಜಮಾ ಮಾಡುತ್ತದೆ. ಈ ಅಭಿಯಾನವು ಅಕ್ಟೋಬರ್ 31, 2025 ರವರೆಗೆ ನಡೆಯಲಿದೆ.
ಯೋಜನೆಯ ಅವಧಿಯಲ್ಲಿ ಪ್ರತಿ VRN ಒಂದು ಬಹುಮಾನವನ್ನು ಮಾತ್ರ ಗಳಿಸಬಹುದು. ಬಹು ವರದಿಗಳನ್ನು ಲೆಕ್ಕಿಸದೆ ಶೌಚಾಲಯ ಸೌಲಭ್ಯವು ದಿನಕ್ಕೆ ಒಮ್ಮೆ ಬಹುಮಾನವನ್ನು ಪಡೆಯಬಹುದು. ಒಂದೇ ದಿನದಲ್ಲಿ ಹಲವಾರು ಬಳಕೆದಾರರು ಒಂದೇ ಶೌಚಾಲಯವನ್ನು ವರದಿ ಮಾಡಿದರೆ, ಮೊದಲ ಮಾನ್ಯ ಚಿತ್ರವನ್ನು ಮಾತ್ರ ಪರಿಗಣಿಸಲಾಗುತ್ತದೆ.
ಬಹುಮಾನ ಪಡೆಯಲು ಈ ಹಂತ ಫಾಲೋ ಮಾಡಿ:
ಹಂತ 1: ರಾಜ್ಮಾರ್ಗ್ ಯಾತ್ರಾ ಅಪ್ಲಿಕೇಶನ್ ಓಪನ್ ಮಾಡಿ ಮತ್ತು “Report Dirty Toilet” ಆಯ್ಕೆಯನ್ನು ಸರ್ಚ್ ಮಾಡಿ.
ಹಂತ 2: NHAI ಟೋಲ್ ಪ್ಲಾಜಾದಲ್ಲಿನ ಕೊಳಕು ಅಥವಾ ಸ್ವಚ್ಛತೆಯಿಲ್ಲದ ಶೌಚಾಲಯದ ಸ್ಪಷ್ಟ, ಸಮಯದ ಅಂಚೆಚೀಟಿ (time-stamped) ಇರುವ ಫೋಟೋಗಳನ್ನು ತೆಗೆಯಿರಿ.
ಹಂತ 3: ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ವಾಹನ ನೋಂದಣಿ ಸಂಖ್ಯೆ (VRN), ಮತ್ತು ಲೊಕೇಶನ್ ವಿವರಗಳೊಂದಿಗೆ ಫೋಟೋವನ್ನು ಅಪ್ಲೋಡ್ ಮಾಡಿ.
ಹಂತ 4: ನಿಮ್ಮ ವರದಿ ಪರಿಶೀಲಿಸಲ್ಪಟ್ಟರೆ, 1,000 ರೂಪಾಯಿಗಳ FASTag ರೀಚಾರ್ಜ್ ನಿಮ್ಮ ಲಿಂಕ್ ಮಾಡಲಾದ ಅಕೌಂಟ್ಗೆ ಜಮಾ ಮಾಡಲಾಗುತ್ತದೆ.
ಈ ನಿಯಮಗಳನ್ನು ಫಾಲೋ ಮಾಡಿ:
ಫೋಟೋ ಅಪ್ಲೋಡ್ ಮಾಡುವ ಮೊದಲು NHAI ನಿಗದಿಪಡಿಸಿದ ಕೆಲವು ನಿಯಮಗಳ ಬಗ್ಗೆ ತಿಳಿದಿರಬೇಕು:
ಈ ಬಹುಮಾನವು NHAI ನಿರ್ಮಿಸಿದ ಅಥವಾ ನಿರ್ವಹಿಸುವ ಶೌಚಾಲಯಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ ರೆಸ್ಟೋರೆಂಟ್ಗಳು, ಇಂಧನ ಪಂಪ್ಗಳು ಅಥವಾ ಧಾಬಾಗಳಲ್ಲಿನ ಶೌಚಾಲಯಗಳಿಗೆ ಅನ್ವಯಿಸುವುದಿಲ್ಲ.
ಒಂದೇ ದಿನ ಅನೇಕ ಪ್ರಯಾಣಿಕರು ಒಂದೇ ಶೌಚಾಲಯದ ಬಗ್ಗೆ ವರದಿ ಮಾಡಿದರೆ, ಮೊದಲು ಯಾರು ನೀಡಿರುತ್ತಾರೋ ಅವರಿಗೆ ಮಾತ್ರ ಬಹುಮಾನ ಸಿಗುತ್ತದೆ.
ಫೋಟೋಗಳು ನೀವೇ ಸ್ವತಃ ಕ್ಲಿಕ್ ಮಾಡಿರಬೇಕು, ಯಾವುದೇ ಎಡಿಟ್ ಮಾಡಿರಬಾರದು ಮತ್ತು ಜಿಯೋಟ್ಯಾಗ್ ಮಾಡಿರಬೇಕು. ಫೇಕ್ ಫೋಟೋಗಳು ಗಣನೆಗೆ ಬರುವುದಿಲ್ಲ.
ಪ್ರತಿ ವಾಹನ ನೋಂದಣಿ ಸಂಖ್ಯೆಗೆ (VRN) ಒಮ್ಮೆ ಮಾತ್ರ ಬಹುಮಾನ ಪಡೆಯಲು ಸಾಧ್ಯ.
Comments are closed.