Puttur: ಪುತ್ತೂರು ನಗರ ಪೊಲೀಸರಿಂದ ಮನೆ ಕಳ್ಳತನ ಆರೋಪಿಯ ಬಂಧನ

Share the Article

Puttur: ಪುತ್ತೂರು ತಾಲೂಕಿನಲ್ಲಿ ಮನೆಯಿಂದ ಕಳ್ಳನೋರ್ವ ಚಿನ್ನದಾಭರಣಗಳನ್ನು ಕದ್ದ ಘಟನೆಯ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಕುರಿತು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ನಡೆಸಿದ್ದು ಆರೋಪಿ ಪ್ರವೀಣ್‌ (27) ಎಂಬಾತನನ್ನು ವಶಕ್ಕೆ ಪಡೆದು ಕಳವು ಮಾಡಿದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಯನ್ನು ನ್ಯಾಯಾಯಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತನ ವಿರುದ್ಧ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ.89/2025 ಕಲಂ:331 (3),305 ಬಿ.ಎನ್‌.ಎಸ್‌ ರಂತೆ ಪ್ರಕರಣ ದಾಖಲು ಮಾಡಲಾಗಿದೆ.

Comments are closed.