KBC: ‘ಕೌನ್ ಬನೇಗಾ ಕರೋಡ್ ಪತಿ’ಯಲ್ಲಿ ಪುಟ್ಟ ಬಾಲಕನಿಂದ ಅಮಿತಾಬ್ ಗೆ ಭಾರೀ ಅವಮಾನ – 5ನೇ ರೌಂಡ್ ಗೆ ಔಟ್ ಆಗಿ ಬರಿಗೈಯಲ್ಲಿ ಹೊರಗೆ

KBC: ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಶೋನ ಎಪಿಸೋಡ್ ನಲ್ಲಿ ಬಾಲಕನೊಬ್ಬ ಹಿರಿಯ ನಟ ಅಮಿತಾ ಬಚ್ಚನ್ ಕೆ ಬಾರಿ ಅಗೋರವ ತೋರಿದ್ದು, ಈತನ ವರ್ತನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚಗೆ ಕಾರಣವಾಗಿದೆ. ಈತನ ವಿಡಿಯೋ ಈಗ ವೈರಲ್ ಆಗಿದೆ.

‘Overconfident’ child challenges Amitabh Bachchan, refuses rule explanation, leaves with zero prize money.#IshitBhatt #AmitabBachchan #KBC #KaunBanegaCrorepati pic.twitter.com/yG1pBXX1fG
— The Tatva (@thetatvaindia) October 13, 2025
ಅಮಿತಾಭ್ ಬಚ್ಚನ್ ಅವರು ಹಲವು ವರ್ಷಗಳಿಂದ ಸೋನಿ ಟಿವಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರು ಕಾರ್ಯಕ್ರಮ ನಡೆಸುವ ರೀತಿ ನಟನೆಯಾಚೆಗೆ ಅವರಿಗೆ ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿದೆ. ಆದರೆ ಇತ್ತೀಚೆಗೆ ನಡೆದ ಕೆಬಿಸಿ ಜೂನಿಯರ್ ಶೋದಲ್ಲಿ ಅತೀ ಉತ್ಸಾಹಿ ಬಾಲಕನೋರ್ವ ಅಮಿತಾಭ್ ಬಚ್ಚನ್ ಅವರೊಂದಿಗೆ ಉದ್ಧಟತನದಿಂದ ವರ್ತಿಸಿ ಅವಮಾನಿಸಿದ್ದಾನೆ. ಈ ಕಾರ್ಯಕ್ರಮದ ತುಣುಕೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಾಲಕನ ಸಹನೆ ಇಲ್ಲದ ದೊಡ್ಡವರೆಂಬ ಗೌರವ ಇಲ್ಲದ ವರ್ತನೆಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಶಿತ್ ಭಟ್ ಎಂಬ ಬಾಲಕ ಹಾಟ್ ಸೀಟ್ ನಲ್ಲಿ ಕೂತಿದ್ದ. ಈತ ಕೇವಲ 10 ವರ್ಷದ ಪುಟ್ಟ ಬಾಲಕ. ಆದರೆ ಆತನ ದುರಹಂಕಾರ ಮಾತ್ರ ಮೇರೆ ಮೀರಿತ್ತು. ಸಾಮಾನ್ಯವಾಗಿ ಎಲ್ಲಾ ಸ್ಪರ್ಧಿಗಳಿಗೂ ಹಾಟ್ ಸೀಟ್ ಗೆ ಬಂದಾಗ ನಿಯಮಗಳನ್ನು ವಿವರಿಸಲಾಗುತ್ತದೆ. ಆದರೆ ಈ ಬಾಲಕ ನನಗೆ ನಿಯಮ ಎಲ್ಲಾ ಏನೂ ಹೇಳಬೇಡಿ, ಎಲ್ಲಾ ಗೊತ್ತು. ಮೊದಲು ಪ್ರಶ್ನೆ ಕೇಳಿ ಎಂದು ಅಮಿತಾಭ್ ಗೇ ಕೇಳಿದ್ದಾರೆ.
ಅಮಿತಾಭ್ ಬಚ್ಚನ್ ಪ್ರಶ್ನೆ ಕೇಳುವಾಗ ಆಯ್ಕೆಗಳು ಬರುವ ಮೊದಲೇ ಮೊದಲ ಪ್ರಶ್ನೆಗೆ ನನಗೆ ಉತ್ತರ ಗೊತ್ತು, ಆಯ್ಕೆ ಏನೂ ಬೇಡ ಎಂದು ಉದ್ಧಟತನದಿಂದ ಹೇಳಿದ್ದಾನೆ. ವಿಚಿತ್ರವೆಂದರೆ ಆತ ಬಿಗ್ ಬಿಗೆ ಸ್ವಲ್ಪವೂ ಗೌರವವಿಲ್ಲದೇ ಹೀಗೆ ಮಾತನಾಡುವಾಗ ಗ್ಯಾಲರಿಯಲ್ಲಿದ್ದ ಆತನ ಪೋಷಕರು ನಗು ನಗುತ್ತಾ ಕೂತಿದ್ದರು. ಆದರೆ ಕೊನೆಗೆ ರಾಮಾಯಣದಲ್ಲಿ ಮೊದಲ ಕಾಂಡ ಯಾವುದು ಎಂಬ ಪ್ರಶ್ನೆ ಕೇಳಿದಾಗ ಉದ್ಘಟತನದಿಂದ ಅಯೋಧ್ಯಾ ಕಾಂಡ ಎಂದು ಹೇಳಿ ಒಂದೇ ಒಂದು ರೂಪಾಯಿಯೂ ಗೆಲ್ಲದೇ ಹೊರಬಿದ್ದಿದ್ದಾನೆ.
5 ನೇ ಪ್ರಶ್ನೆ ವೇಳೆ ಆಯ್ಕೆಗಳು ಬಂದ ಬಳಿಕ ಅಯೋಧ್ಯ ಖಂಡ ಎಂಬ ಆಯ್ಕೆಯನ್ನು ಆರಿಸಿದ ಈತ ಅಮಿತಾಬ್ ಬಚ್ಚನ್ ಪಕ್ಕಾ ಅದನ್ನೇ ಲಾಕ್ ಮಾಡುವುದಾ ಎಂದು ಮರು ಪ್ರಶ್ನೆ ಕೇಳಿದಾಗಲೂ ಅರೇ ಲಾಕ್ ಮಾಡು ಎಂದು ಹೇಳುವ ಮೂಲಕ ಮತ್ತೊಮ್ಮೆ ತನ್ನ ಅವಿವೇಕತನ ಮೆರೆದಿದ್ದಾನೆ. ಆದರೆ ಈ ಉತ್ತರ ತಪ್ಪಾಗಿದ್ದು, ಬಾಲ ಖಂಡ ಸರಿಯಾದ ಉತ್ತರವಾಗಿತ್ತು.
ಹೀಗೆ ಅತಿಯಾದ ವಿಶ್ವಾಸದಿಂದ ಇದ್ದ ಇತಿಶ್ ಭಟ್ ಕೊಬ್ಬನ್ನು ರಾಮಾಯಣದ ಪ್ರಶ್ನೆ ನೆಲ ಕಚ್ಚಿಸಿತು. ಮೊದಲ 4 ಪ್ರಶ್ನೆಗಳಿಗೆ ಉತ್ತರಿಸುವಾಗ ಅಮಿತಾಬ್ ರೀತಿಯ ಹಿರಿಯರಿಗೆ ಗೌರವವನ್ನೂ ನೀಡದೇ ಉದ್ಧಟತನ ಮೆರೆದಿದ್ದ ಈತ ಐದನೇ ಪ್ರಶ್ನೆಗೆ ಮಕಾಡೆ ಮಲಗಿ ಒಂದು ರೂಪಾಯಿಯನ್ನೂ ಗೆಲ್ಲದೇ ಸೋತು ಬರಿಗೈನಲ್ಲಿ ಹೊರಬಿದ್ದಿದ್ದಾನೆ.
ಇದನ್ನೂ ಓದಿ:Bengaluru : ಬೆಂಗಳೂರಿನ ಟ್ರಾಫಿಕ್ ನಿಂದ ಪರಾಗಲು ಹೊಸ ಆಪ್ ಬಿಡುಗಡೆ!!
ಇದೀಗ ಈ ಬಾಲಕನ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಈತ ಇನ್ನೂ ಬಾಲಕ ಆತನ ಪೋಷಕರು ಆತನ ನಡತೆಯನ್ನು ಈಗಲೇ ತಿದ್ದದೇ ಇದ್ದರೆ ಈತ ಯಾವ ರೀತಿ ಬೆಳೆಯಬಹುದು ಎಂದು ಪ್ರಶ್ನೆ ಮಾಡಿದ್ದಾರೆ. ಹಿರಿಯರಿಗೆ ಗೌರವ ಕೊಡುವುದನ್ನು ಪೋಷಕರು ಕಲಿಸಬೇಕು ಎಂದಿದ್ದಾರೆ.
Comments are closed.