KSRTC Bus: ದೀಪಾವಳಿಗೆ ಊರಿಗೆ ಹೋಗಿ ಬರಲು 2500 ಹೆಚ್ಚು ಬಸ್‌; ಕೆಎಸ್‌ಆರ್‌ಟಿಸಿಯಿಂದ ಡಿಸ್ಕೌಂಟ್‌ ಆಫರ್‌

Share the Article

KSRTC Bus: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಇರುವ ಕಾರಣ ಸಾರ್ವಜನಿಕರ ಅನುಕೂಲಕ್ಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ರಾಜ್ಯಾದ್ಯಂತ ಹಾಗೂ ಅಂತರರಾಜ್ಯಕ್ಕೆ ಒಟ್ಟು 2500 ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ಕಲ್ಪಿಸಿದೆ.

ನರಕ ಚತುರ್ದಶಿ (ಅ.20) ಮತ್ತು ಬಲಿಪಾಡ್ಯಮಿ (ಅ.22) ಹಬ್ಬವಿರುವುದರಿಂದ ಈ ವಿಶೇಷ ಸಾರಿಗೆಗಳನ್ನು ಅ.17 ರಿಂದ 20, 2025 ರವರೆಗೆ ಬೆಂಗಳೂರಿನಿಂದ ಹೊರಡಲಿದೆ.

ಮೂರು ಪ್ರಮುಖ ಬಸ್‌ ನಿಲ್ದಾಣಗಳಿಂದ ವಿವಿಧ ಸ್ಥಳಗಳಿಗೆ ಕರಾರಸಾ ನಿಗಮವು ಬೆಂಗಳೂರಿನಲ್ಲಿ ನಿರ್ವಹಣೆ ಮಾಡಲಿದೆ.

ಮೆಜೆಸ್ಟಿಕ್‌ (ಕೆಂಪೇಗೌಡ ಬಸ್‌ ನಿಲ್ದಾಣ): ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ.

ಮೈಸೂರು ರಸ್ತೆ ಬಸ್ ನಿಲ್ದಾಣ: ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿ ಮಾರ್ಗಗಳ ಕಡೆಗೆ.

ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ: ತಮಿಳುನಾಡು (ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ) ಮತ್ತು ಕೇರಳ (ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್, ಕ್ಯಾಲಿಕಟ್) ಕಡೆಗೆ ಪ್ರತಿಷ್ಠಿತ ಸಾರಿಗೆಗಳ ಕಾರ್ಯಾಚರಣೆ.

ಹಬ್ಬ ಮುಗಿದ ನಂತರ, ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಾಪಾಸುವ ಬರುವ ಪ್ರಯಾಣಿಕರಿಗೆ ಅ.22 ಮತ್ತು 26,2025 ರಂದು ಕೂಡಾ ವಿಶೇಷ ಬಸ್‌ಗಳು ಇರಲಿದೆ. ಎಲ್ಲಾ ತಾಲ್ಲೂಕು, ಜಿಲ್ಲಾ ಬಸ್‌ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕೆ ಅನುಗುಣವಾಗಿ ಸ್ಥಳೀಯ ವಿಶೇಷ ಸಾರಿಗೆಗಳನ್ನು ಓಡಿಸಲಾಗುತ್ತದೆ.

ಟಿಕೆಟ್‌ಗಳನ್ನು www.ksrtc.karnataka.gov.in ವೆಬ್‌ಸೈಟ್‌ ಮೂಲಕ ಬುಕ್‌ ಮಾಡಬಹುದು.

ರಿಯಾಯಿತಿ ಈ ರೀತಿ ಇರಲಿದೆ;

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಟಿಕೆಟ್‌ ಕಾಯ್ದಿರಿಸಿದಲ್ಲಿ ಶೇ.5 ರಷ್ಟು ರಿಯಾಯಿತಿ ಲಭ್ಯ.

ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್‌ ಮಾಡಿದರೆ, ಹಿಂದಿರುಗುವ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯಿತಿ ಸಿಗಲಿದೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿರುವ ಪ್ರಮುಖ ನಗರಗಳಲ್ಲಿ ನಿಗಮದ ಕೌಂಟರ್‌ಗಳ ಮೂಲಕ ಮುಂಗಡ ಟಿಕೆಟ್‌ ಕಾಯ್ದಿರಿಸಬಹುದಾಗಿದೆ.

ಇದನ್ನೂ ಓದಿ:Health tips: ಅಂದೊಂದಿತ್ತು ಕಾಲ : ಜೀವನ – ಅಂದು ಮತ್ತು ಇಂದು! : ಸುಮಾರು 40-50 ವರ್ಷಗಳ ಹಿಂದಕ್ಕೆ ಇಣುಕಿ ನೋಡಿದಾಗ

Comments are closed.