Karnataka: ಕರ್ನಾಟಕದ ಈ ಜಿಲ್ಲೆಗಳಲ್ಲಿ `ಪ್ರಧಾನಿ ಧನಧಾನ್ಯ’ ಯೋಜನೆ ಜಾರಿ

Share the Article

Karnataka: ಕೃಷಿಯಲ್ಲಿ ಹಿಂದುಳಿದಿರುವ ಕರ್ನಾಟಕದ (Karnataka) 6 ಸೇರಿದಂತೆ 100 ಜಿಲ್ಲೆಗಳಲ್ಲಿ ಕೃಷಿ ಉತ್ತೇಜನ ಮತ್ತು ಕಾಳು ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸುವ 35,440 ಕೋಟಿ ರೂ. ವೆಚ್ಚದ ಎರಡು ಮಹತ್ವಕಾಂಕ್ಷಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ.

ಹಾವೇರಿ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಕೃಷಿ ಉತ್ಪಾದಕತೆಯಲ್ಲಿ ಹಿಂದುಳಿ ದಿರುವ ವಿವಿಧ ರಾಜ್ಯಗಳ 100 ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ಗುರುತಿಸಿ ಅಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸುವ, ಕೃಷಿ ವೈವಿಧ್ಯಕರಣಕ್ಕೆ ಒತ್ತು ನೀಡು ವ, ನೀರಾವರಿ ಸವಲತ್ತು ಹೆಚ್ಚಿಸುವ, ಸಂಗ್ರಹಾಗಾರಗಳನ್ನು ಅಭಿವೃದ್ಧಿಪಡಿ ಸುವ ಮತ್ತು ಆಯ್ದ ಜಿಲ್ಲೆಗಳಲ್ಲಿ ಸಾಲ ಖಾತರಿಪಡಿಸುವ ಅಂಶ ಗಳನ್ನು ಧನ ಧಾನ್ಯ ಯೋಜನೆ ಹೊಂದಿದೆ.

ಇದನ್ನೂ ಓದಿ;Karnataka: ರಾಜ್ಯದಲ್ಲಿ ದುಡಿಯುವ ಮಹಿಳೆಯರಿಗೆ ಋತುಚಕ್ರ ರಜೆ ಕಡ್ಡಾಯ: ನಿಯಮ ಪಾಲಿಸದ ಕಂಪನಿಗಳ ವಿರುದ್ಧ ಕ್ರಮ

ಪ್ರಧಾನ ಮಂತ್ರಿ ಕೃಷಿ ಕ್ಷೇತ್ರದಲ್ಲಿ ಎರಡು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದರ ವೆಚ್ಚ 35,440 ಕೋಟಿ ರೂ.ಗಳು. ಅವರು ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಪ್ರಾರಂಭಿಸಲಿದ್ದಾರೆ, ಇದು ರೂ.24,000 ಕೋಟಿ ವೆಚ್ಚವನ್ನು ಹೊಂದಿದೆ. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆ ಹೆಚ್ಚಿಸುವುದು, ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಕೊಯ್ಲಿನ ನಂತರದ ಸಂಗ್ರಹಣೆಯನ್ನು ಹೆಚ್ಚಿಸುವುದು, ನೀರಾವರಿ ಸೌಲಭ್ಯಗಳನ್ನು ಸುಧಾರಿಸುವುದು ಮತ್ತು ಆಯ್ದ 100 ಜಿಲ್ಲೆಗಳಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿಯ ಸಾಲದ ಲಭ್ಯತೆಯನ್ನು ಸುಗಮಗೊಳಿಸುವ ಉದ್ದೇಶವನ್ನು ಇದು ಹೊಂದಿದೆ.

Comments are closed.