Petrol Bunk : ಮೀಟರ್ ನಲ್ಲಿ ಝೀರೋ ಇದ್ರೂ ನಿಮ್ಮ ಟ್ಯಾಂಕ್ ಗೆ ಬೀಳುತ್ತೆ ಕಮ್ಮಿ ಪೆಟ್ರೋಲ್ – ಬಂಕ್ ಗಳ ಹೊಸ ವಂಚನೆ ಬಯಲು

Petrol Bunk : ಒಂದು ಕಾಲದಲ್ಲಿ ಪೆಟ್ರೋಲ್ ಬಂಕುಗಳ ವಂಚನೆ ವಿಪರೀತವಾಗಿತ್ತು. ಗ್ರಾಹಕರಿಗೆ ಕಾಣದಂತೆ ನಾನಾ ರೀತಿಯ ಟ್ರಿಕ್ಸ್ ಯೂಸ್ ಮಾಡಿ ಕಡಿಮೆ ಪೆಟ್ರೋಲ್ ಹಾಕಿ ಜನರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದರು. ಆದರೆ ನಂತರ ಬಂದಂತಹ ಕಾನೂನುಗಳಿಂದ ಹಾಗೂ ಗ್ರಾಹಕರು ಎಚ್ಚೆತ್ತುಕೊಂಡ ಕಾರಣ ವಂಚನೆ ಇಂದು ಸುಧಾರಿಸಿದೆ. ಆದರೆ ಇಂದಿಗೂ ಕೂಡ ಕೆಲವು ಪೆಟ್ರೋಲ್ ಬಂಕುಗಳಲ್ಲಿ ಗ್ರಾಹಕರ ಕಣ್ಣಿಗೆ ಮಣ್ಣೆರಚಿ ವಂಚನೆಯನ್ನು ನಡೆಸುತ್ತಿದ್ದಾರೆ.

ಹೌದು, ನೀವು ಪೆಟ್ರೋಲ್ ಬಂಕ್ ಗೆ ಪೆಟ್ರೋಲ್ ಹಾಕಿಸುವಾಗ ಅಲ್ಲಿ ಕೆಲಸದವರು ‘ಸರ್ ಝೀರೋ ಇದೆ ನೋಡಿಕೊಳ್ಳಿ’ ಎಂದು ಹೇಳಿ ಪೆಟ್ರೋಲನ್ನು ಹಾಕಲು ಶುರು ಮಾಡುತ್ತಾರೆ. ನಾವು ಮಾನಿಟರ್ ಮೇಲೆ ಒಮ್ಮೆ ಕಣ್ಣಾಡಿಸಿ ಜೀರೋ ಇರುವುದನ್ನು ಕನ್ಫರ್ಮ್ ಮಾಡಿಕೊಂಡು ಸುಮ್ಮನಾಗಿ ಬಿಡುತ್ತೇವೆ. ಆದರೆ ಮೀಟರ್ ನಲ್ಲಿ ಜೀರೋ ಇದ್ದರೂ ಕೂಡ ನಿಮ್ಮ ಟ್ಯಾಂಕಿಗೆ ಪೆಟ್ರೋಲ್ ಕಮ್ಮಿ ಬೀಳುತ್ತದೆ ಎಂಬುದು ನಿಮಗೆ ಗೊತ್ತೇ? ಈ ರೀತಿಯ ಹೊಸ ವಂಚನೆಯ ಜಾಲ ಇದೀಗ ಬಯಲಾಗಿದೆ. ಇದನ್ನು ‘ಜಂಪ್ ಟ್ರಿಕ್’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಏನಿದು ‘ಜಂಪ್ ಟ್ರಿಕ್’ ಎಂಬ ಮಾಯಾಜಾಲ?
ಇದು ಪೆಟ್ರೋಲ್ ಪಂಪ್‌ಗಳಲ್ಲಿ ನಡೆಯುತ್ತಿರುವ ಒಂದು ಅತ್ಯಂತ ಸೂಕ್ಷ್ಮವಾದ ವಂಚನೆಯಾಗಿದೆ. ಇದರ ಮುಖ್ಯ ಉದ್ದೇಶವೇ ಗ್ರಾಹಕರು ಪಾವತಿಸಿದ ಹಣಕ್ಕಿಂತ ಕಡಿಮೆ ಇಂಧನವನ್ನು ನೀಡಿ, ಲಾಭ ಗಳಿಸುವುದು. ಸಾಮಾನ್ಯವಾಗಿ, ನೀವು ಇಂಧನ ತುಂಬಿಸಲು ಆರಂಭಿಸಿದಾಗ, ಮೀಟರ್ ನಿಧಾನವಾಗಿ 1, 2, 3, 4 ಎಂದು ಏರಬೇಕು. ಆದರೆ, ಈ ‘ಜಂಪ್ ಟ್ರಿಕ್’ ವಂಚನೆಯಲ್ಲಿ ಹಾಗಾಗುವುದಿಲ್ಲ.
ವಂಚನೆ ನಡೆಯುವುದು ಹೇಗೆ?
ಪಂಪ್ ನೌಕರ ಇಂಧನ ತುಂಬಿಸಲು ಆರಂಭಿಸಿದಾಗ, ಡಿಸ್ಪೆನ್ಸರ್ ಮೀಟರ್ ಸೊನ್ನೆಯಿಂದ (0) ನೇರವಾಗಿ 10, 15, ಅಥವಾ 20 ರೂಪಾಯಿಯ ಅಂಕಕ್ಕೆ ಜಿಗಿಯುತ್ತದೆ (Jump). ಇದನ್ನು ಗಮನಿಸದ ಗ್ರಾಹಕರು, ಮೀಟರ್ ಓಡುತ್ತಿದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ, ಮೀಟರ್ ಸೊನ್ನೆಯಿಂದ 10 ರೂಪಾಯಿಗೆ ಜಿಗಿದಾಗ, ಆ ಮೊದಲ 10 ರೂಪಾಯಿಗೆ ಬರಬೇಕಾದ ಇಂಧನ ನಿಮ್ಮ ವಾಹನದ ಟ್ಯಾಂಕ್‌ಗೆ ಬಿದ್ದಿರುವುದೇ ಇಲ್ಲ. ಯಂತ್ರದಲ್ಲಿ ಎಲೆಕ್ಟ್ರಾನಿಕ್ ಚಿಪ್ ಅಥವಾ ಸಾಫ್ಟ್‌ವೇರ್ ಮಾರ್ಪಡಿಸಿ, ಈ ರೀತಿ ಮೀಟರ್ ಜಿಗಿಯುವಂತೆ ಮೊದಲೇ ಸೆಟ್ ಮಾಡಿರುತ್ತಾರೆ. ಇದರಿಂದ ಪ್ರತಿ ಗ್ರಾಹಕನಿಗೆ 50 ಮಿಲಿಯಿಂದ 100 ಮಿಲಿಯಷ್ಟು ಇಂಧನ ಕಡಿಮೆ ಹೋಗುತ್ತದೆ. ಇದು ಸಣ್ಣ ಪ್ರಮಾಣದಂತೆ ಕಂಡರೂ, ದಿನಕ್ಕೆ ಸಾವಿರಾರು ವಾಹನಗಳಿಗೆ ಇಂಧನ ತುಂಬುವ ಬಂಕ್‌ಗಳಿಗೆ ಸಾವಿರಾರು ರೂಪಾಯಿಗಳ ಅಕ್ರಮ ಲಾಭ ತಂದುಕೊಡುತ್ತದೆ.
ಈ ವಂಚನೆಯನ್ನು ತಪ್ಪಿಸಬೇಕೆಂದಾದರೆ ನೀವು ಪೆಟ್ರೋಲ್ ಹಾಕಿಸುವಾಗ ಮೀಟರ್ ಮೇಲೆ ಹದ್ದಿನ ಕಣ್ಣು ಇಡಿ. ರೌಂಡ್ ಫಿಗರ್ ನಂಬರ್ ನ ಹಣಕ್ಕೆ ಪೆಟ್ರೋಲ್ ಹಾಕಿಸಬೇಡಿ. ಅಂದರೆ 100, 500, 1000, 1500 ಈ ರೀತಿ ಪೆಟ್ರೋಲ್ ಹಾಕಿಸದೆ 110, 510, 1010 ಈ ರೀತಿಯಾಗಿ ಪೆಟ್ರೋಲ್ ಹಾಕಿಸಿ. ಪೆಟ್ರೋಲ್ ಹಾಕಿಸಿಕೊಂಡ ಬಳಿಕ ಮರೆಯದೆ ಬಿಲ್ ಪಡೆಯಿರಿ. ಯಾವಾಗಲೂ ನೀವು ಪೆಟ್ರೋಲ್ ಹಾಕಿಸುವ ಬಂಕ್ಗಳನ್ನೇ ಹೆಚ್ಚು ರೆಫರ್ ಮಾಡಿ.
Comments are closed.