Raj B Shetty: ‘ಕಾಂತಾರ-1’ ಗೆ ರಾಜ್ ಬಿ ಶೆಟ್ಟಿ ಯಾಕೆ ಕೈ ಜೋಡಿಸಲಿಲ್ಲ? ಕೊನೆಗೂ ರಿವಿಲ್ ಆಯ್ತು ಸೀಕ್ರೆಟ್

Share the Article

Raj B Shetty: ಕಾಂತಾರ ಚಿತ್ರದ ಮುಖಾಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರೂಪುಗೊಂಡಿರುವ ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್ 1 ಇದೀಗ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು ಹಲವು ಚಿತ್ರಗಳ ದಾಖಲೆಯನ್ನು ಮುರಿದು ಜನರ ಮೆಚ್ಚುಗೆ ಪಡೆಯುತ್ತಿದೆ. ಇದರ ಬೆನ್ನಲ್ಲೇ ಕಾಂತಾರಾ ನಟ ಮತ್ತು ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ಅವರ ದೋಸ್ತ ರಾಜ್ ಬಿ ಶೆಟ್ಟಿ ಅವರು ಕಾಂತಾರಾ ಚಾಪ್ಟರ್ 1 ನಲ್ಲಿ ಯಾಕೆ ಕೈಜೋಡಿಸಲಿಲ್ಲ ಎನ್ನುವ ಚರ್ಚೆ ಗರಿಗೆದರಿದೆ. ಇದರ ಬೆನ್ನಲ್ಲೇ ಇದಕ್ಕೆ ಕಾರಣವೂ ಕೂಡ ರಿವಿಲ್ ಆಗಿದೆ.

ಹೌದು, ಕಾಂತಾರ ಚಾಪ್ಟರ್ 1′ (Kantara Cahpter 1) ಸಿನಿಮಾಗೆ ರಾಜ್‌ ಬಿ ಶೆಟ್ಟಿ ವರ್ಕ್ ಮಾಡಿಲ್ಲ ಅನ್ನೋದು ಕನ್ಫರ್ಮ್‌ ಆಗಿದೆ. ಆದರೆ, ಯಾಕೆ ಅವರು ರಿಷಬ್ ಜೊತೆಯಾಗಿಲ್ಲ? ಈ ಪ್ರಶ್ನೆ ಈಗಲೂ ಹಲವರನ್ನು ಕಾಡುತ್ತಿದೆ. ಅದಕ್ಕೆ ಉತ್ತರವನ್ನು ಸ್ವತಃ ರಾಜ್‌ ಬಿ ಶೆಟ್ಟಯವರೇ ಸ್ವಲ್ಪ ಕಾಲದ ಹಿಂದೆ, ಅಂದರೆ ಇಂಟರ್‌ವ್ಯೂ ಒಂದರಲ್ಲಿ ಈ ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಿಡುಗಡೆಗೂ ಮೊದಲೇ ಹೇಳಿದ್ದಾರೆ. ಅದು ಈಗ ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗ್ತಿದೆ.

ಮೊದಲ ‘ಕಾಂತಾರ’ ಸಿನಿಮಾ ಆದಾಗ, ಸಂಬಂಧಪಟ್ಟ ಜನರಿಂದ ‘ಮತ್ತೆ ಮಾಡ್ಬೆಡಿ’ ಅನ್ನೋ ಅಭಿಪ್ರಾಯ ಬಂತು. ನಾನು ಆವಾಗ ‘ಆಯ್ತು, ಮಾಡೋದು ಬೇಡ ಅಂದ್ಕೊಂಡೆ. ಒಂದು ಸಾರಿ ಅಂದ್ಕೊಂಡ್ಮೇಲೆ ನಂಗೆ ಮತ್ತೆ ಈ ಸಿನಿಮಾದ ಕೆಲಸದಲ್ಲಿ ಹೋಗೋದಕ್ಕೆ ಆಗಿಲ್ಲ. ಹೀಗಾಗಿ ನಂಗೆ ಈಗಿನ ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ದೈವ ಇದೆಯಾ ಇಲ್ಲವಾ ಅಂತೇನೂ ಗೊತ್ತಿಲ್ಲ. ಜೊತೆಗೆ, ನಾನು ನನ್ನ ಸಿನಿಮಾದ ಪ್ರೊಡಕ್ಷನ್‌ನಲ್ಲಿ, ನಟನೆಯಲ್ಲಿ ಹಾಗೂ ಬೇರೆ ಕೆಲಸಗಳಲ್ಲಿ ತುಂಬಾ ಬ್ಯುಸಿ ಆಗಿರೋದ್ರಿಂದನೂ ನಂಗೆ ಈ ಕಾಂತಾರ-1 ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ಆಗಲಿಲ್ಲ.

‘ಮಾಡ್ಬೇಡಿ ಅಂತ ಯಾರು ಹೇಳಿದ್ದು’ ಎಂಬ ಪ್ರಶ್ನೆಗೆ ಕೂಡ ರಾಜ್‌ ಬಿ ಶೆಟ್ಟಿಯವರು ಉತ್ತರ ಕೊಟ್ಟಿದ್ದಾರೆ. ಅದು ಬೇರೆ ಯಾರೂ ಅಲ್ಲ, ಜನಗಳು.. ಜನಗಳು ಅಂದ್ರೆ ಅಲ್ಲಿನ, ಅದಕ್ಕೆ ಸಂಬಂಧಪಟ್ಟ ಜನರಿಗೆ ಧಕ್ಕೆ ಆಗಿದೆ ಅಂತ ಹೇಳಿಕೆ ಬಂದಾಗ, ಇಶ್ಯೂ ಆದಾಗ, ಅವರ ಕಾಮೆಂಟ್ಸ್, ಟ್ಯಾಗ್ ಬಂದಾಗ.. ಈ ಥರ ಮಾಡ್ಬಾರ್ದಿತ್ತು ಅನ್ನೋ ಮಾತು ಬಂದಾಗ.. ನಾನು ಹಿಂದೆ ಸರಿದೆ. ಆದ್ರೆ, ಕಾಂತಾರ ಸಿನಿಮಾ ಮಾಡಿದಾಗ ನಮ್ಮ ಇಂಟೆನ್‌ಶನ್ ಅದು ಆಗಿರಲಿಲ್ಲ, ಫಸ್ಟ್ ನಾನು ಆ ಸಿನಿಮಾದಲ್ಲಿ ಇನ್‌ವಾಲ್ವ್ ಆಗಿರುವಾಗ ನನ್ನ ನನಗಂತೂ ಆ ತರಹದ ಯಾವುದೇ ಉದ್ದೇಶ ಇರಲಿಲ್ಲ. ಆದರೆ, ಆಮೇಲೆ ‘ದೈವದ ಸಿನಿಮಾ ಮಾಡಬಾರದಿತ್ತು’ ಅನ್ನೋ ಅಭಿಪ್ರಾಯ ಜನರಿಂದ ಬಂತು.

ಇದನ್ನೂ ಓದಿ:Vidyasiri: ‘ವಿದ್ಯಾಸಿರಿ’ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ – ಅರ್ಹತೆ, ಕೊನೆಯ ದಿನಾಂಕ ಕುರಿತು ಇಲ್ಲಿದೆ ಅಪ್ಡೇಟ್

ಅದು ನನ್ನ ಮನಸ್ಸಿಗೆ ಹೇಗೆ ಅನ್ನಿಸ್ತು ಅಂದ್ರೆ, ‘ಇದು ಯಾವ್ ಥರ ಅಂದ್ರೆ, ನಾನು ನಡೆದುಕೊಂಡು ಎಲ್ಲೋ ಹೋಗ್ತಾ ಇರ್ತೀನಿ, ಏನೋ ಒಂದು ಏಟ್ ಆಯ್ತು.. ಅದಕ್ಕೆ, ನನಗೆ ಯಾರಾದ್ರೂ ನೀನು ನಡೆದುಕೊಂಡು ಹೋಗಿದ್ರಿಂದ ಹೀಗಾಯ್ತು ಅಂತ ಹೇಳಿದ್ರೆ, ಓ ಹೌದಾ, ನನ್ ಇನ್‌ಟೆನ್‌ಶನ್ ಅದಲ್ಲ, ಆದ್ರೆ ನಾನು ಆ ದಾರಿಯಲ್ಲಿ ನಡೆದುಕೊಂಡು ಹೋಗಿದ್ರಿಂದ ಹೀಗಾಯ್ತು ಅಂತ ಹೇಳ್ತಿದಾರೆ ಅಂದ್ರೆ, ಹೌದಾ, ಹಾಗಿದ್ರೆ ನಾನು ಇನ್ಮೇಲೆ ಆ ದಾರಿಯಲ್ಲಿ ನಡೆದುಕೊಂಡು ಹೋಗಲ್ಲ ಅಂತ ನಾನು ಡಿಸಿಜನ್ (ನಿರ್ಧಾರ) ತಗೊಂಡೆ ಎಂದು ಹೇಳಿದ್ದಾರೆ.

Comments are closed.