Sharan Pumpwell: ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ VHP ಮುಖಂಡ ಶರಣ್ ಪಂಪ್ವೆಲ್: 2 ಲಕ್ಷ ರೂ. ದಂಡ

Chitradurga: ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್‌ಗೆ ಹೈಕೋರ್ಟ್ 2 ಲಕ್ಷ ರೂ ದಂಡ ವಿಧಿಸಿದೆ.

ರಾಜ್ಯ ಲೀಗಲ್ ಸರ್ವಿಸ್ ಅಥಾರಿಟಿಗೆ ಒಂದು ಲಕ್ಷ ರೂಪಾಯಿ, ಪೊಲೀಸ್ ಕ್ಷೇಮಾಭಿವೃದ್ಧಿ ನಿಧಿಗೆ ಒಂದು ಲಕ್ಷ ರೂಪಾಯಿ ನೀಡಲು ಹೈಕೋರ್ಟ್ ಬುಧವಾರ ಆದೇಶ ಹೊರಡಿಸಿದೆ.
ಚಿತ್ರದುರ್ಗದಲ್ಲಿ ನಡೆದ ಹಿಂದೂ ಮಹಾಗಣಪತಿ ಶೋಭಾ ಯಾತ್ರೆಯಲ್ಲಿ ಜಿಲ್ಲೆಗೆ ಪ್ರವೇಶ ಮಾಡದಂತೆ ಶರಣ್ ಪಂಪ್‌ವೆಲ್‌ಗೆ ಜಿಲ್ಲಾಡಳಿತೆ ನಿರ್ಬಂಧ ವಿಧಿಸಿತ್ತು. ಇದನ್ನು ಪ್ರಶ್ನೆ ಮಾಡಿ ಶರಣ್ ಹೈಕೋರ್ಟ್ ಮೊರೆ ಹೋಗಿದ್ದರು. ನಂತರ ಕೆಲವು ಷರತ್ತು ವಿಧಿಸಿ ಹೈಕೋರ್ಟ್ ಜಿಲ್ಲಾಡಳಿತದ ನಿರ್ಬಂಧ ತೆರವು ಮಾಡಿತ್ತು.
ಶೋಭಾ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಭಾಷಣ ಮಾಡದಂತೆ ಹೇಳಿತ್ತು. ಆದರೆ ಶೋಭಾ ಯಾತ್ರೆಯಲ್ಲಿ ಶರಣ್ ಭಾಷಣ ಮಾಡಿದ್ದರು. ಆದೇಶ ಉಲ್ಲಂಘನೆಯ ಕುರಿತು ಪೊಲೀಸರು ಹೈಕೋರ್ಟ್ ಗಮನಕ್ಕೆ ತಂದಿದ್ದು, ಇದನ್ನು ಪರಿಗಣಿಸಿದ ಹೈಕೋರ್ಟ್ 2 ಲಕ್ ರೂ ದಂಡ ವಿಧಿಸಿದೆ.
Comments are closed.