Caste Survey : ಇನ್ನೂ ಮುಗಿಯದ ಜಾತಿ ಸಮೀಕ್ಷೆ – ವಿಸ್ತರಣೆಯಾಗುತ್ತ ದಸರಾ ರಜೆ?

Share the Article

Caste Survey : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅವಧಿ ಮುಗಿಯುತ್ತಾ ಬಂದರೂ ಕೂಡ ರಾಜ್ಯದಲ್ಲಿ ಸಮೀಕ್ಷೆಗಳು ಸಂಪೂರ್ಣವಾಗಿ ಮುಗಿದಿಲ್ಲ. ಶಿಕ್ಷಕರೇ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ದಸರಾ ರಜೆಯು ಮತ್ತೆ ವಿಸ್ತರಣೆ ಯಾಗುತ್ತದೆಯಾ? ಎಂಬ ಪ್ರಶ್ನೆ ಪೋಷಕರಲ್ಲಿ ಕಾಡುತ್ತಿದೆ.

ಪ್ರಾರಂಭದ ದಿನಗಳ ನಿಧಾನಗತಿ ಹಾಗೂ ತಂತ್ರಜ್ಞಾನದ ಸಮಸ್ಯೆ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ಗಡುವು ವಿಸ್ತರಿಸುವುದು ಅನಿವಾರ್ಯವಾಗಿದೆ. ಸೆಪ್ಟೆಂಬರ್‌ 22 ಕ್ಕೆ ಚಾಲನೆ ಪಡೆದುಕೊಂಡಿರುವ ಸಮೀಕ್ಷೆ ಅಕ್ಟೋಬರ್‌ 7ಕ್ಕೆ ಮುಕ್ತಾಯಗೊಳ್ಳಬೇಕಿದೆ. ಆದರೆ, ನಿರೀಕ್ಷಿತ ಪ್ರಗತಿಯಾಗದೆ ಇರುವುದರಿಂದ ಈ ಗಡುವಿನ ಒಳಗೆ ಸಮೀಕ್ಷೆ ಸಮಾಪ್ತಿಗೊಳಿಸುವುದು ಸವಾಲಾಗಲಿದೆ. ಹೀಗಾಗಿ ಶಾಲೆಗಳು ಪುನರಾರಂಭವಾಗುವುದು ತಡವಾಗುತ್ತದೆಯೋ? ಎಂಬ ಗುಮಾನಿ ಹಲವರಲ್ಲಿ ಮೂಡಿದೆ.

ಇದರ ನಡುವೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿ ಸಮೀಕ್ಷಾ ಕಾರ್ಯ ಚುರುಕುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ.

Comments are closed.