PM Mahila Samman: ಮಹಿಳೆಯರೇ ಗಮನಿಸಿ- ಬ್ಯಾಂಕ್ ಗಿಂತಲೂ ಹೆಚ್ಚು ಬಡ್ಡಿ ಕೊಡೋ ಯೋಜನೆ ಇದು !!

PM Mahila Samman: ಮಹಿಳೆಯರೇ ನೀವು ಬ್ಯಾಂಕ್ ನಲ್ಲಿ ಹಣವಿಟ್ಟು ಹೆಚ್ಚು ಬಡ್ಡಿಯನ್ನು ಪಡೆಯುವ ಯೋಜನೆ ಹೊಂದಿದ್ದರೆ ಅದನ್ನು ಸದ್ಯ ಬದಿಗಿರಿಸಿ. ಯಾಕೆಂದರೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಹಿಳಾ ಸಮ್ಮಾನ್ ಯೋಜನೆ ಅಡಿ ನಿಮಗೆ ಬ್ಯಾಂಕ್ ಗಿಂತಲೂ ಅಧಿಕ ಬಡ್ಡಿ ದೊರೆಯುತ್ತದೆ. ಯೋಜನೆಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಹೌದು, ಪ್ರಧಾನಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯಡಿ ಗರಿಷ್ಠ 2 ಲಕ್ಷ ರೂಪಾಯಿ ಠೇವಣಿ ಇಟ್ಟರೆ, ಎರಡು ವರ್ಷಗಳ ನಂತರ ₹2,32,044 ಹಿಂಪಡೆಯಬಹುದು. ಈ ಖಾತೆಯನ್ನು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತೆರೆಯಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರು ಅಥವಾ ಅವರ ಹೆಸರಿನಲ್ಲಿ ಖಾತೆ ತೆರೆದರೆ, ಶೇಕಡಾ 7.5 ಬಡ್ಡಿ ಹಣ ಸಿಗುತ್ತದೆ.
ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು 2023 ರಲ್ಲಿ ಜಾರಿಗೆ ತಂದಿದೆ. ಆದರೆ ಈ ಬಗ್ಗೆ ಹಲವರಿಗೆ ಇದರ ಅರಿವು ಇಲ್ಲ. ಈ ಯೋಜನೆಯು 2 ವರ್ಷಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಆದಾಗ್ಯೂ, ಖಾತೆ ತೆರೆದ ದಿನಾಂಕದಿಂದ ಒಂದು ವರ್ಷದ ನಂತರ ನೀವು ಅರ್ಹ ಬ್ಯಾಲೆನ್ಸ್ನ 40 ಪ್ರತಿಶತವನ್ನು ಹಿಂಪಡೆಯಬಹುದು.
ಇನ್ನು ಎರಡು ಲಕ್ಷ ರೂಪಾಯಿ ಇಡುವುದು ಹಲವರಿಗೆ ಸಾಧ್ಯವಾಗದ ಮಾತು. ಆದ್ದರಿಂದ ಈ ಯೋಜನೆಗೆ ಕನಿಷ್ಠ 1 ಸಾವಿರ ರೂಪಾಯಿ ಫಿಕ್ಸ್ ಮಾಡಲಾಗಿದೆ. ಗರಿಷ್ಠ 2 ಲಕ್ಷ ರೂಪಾಯಿಗಳನ್ನು ಠೇವಣಿ ಇಡಬಹುದು. ಈ ಯೋಜನೆಯಡಿಯಲ್ಲಿ, ನೀವು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಮಹಿಳೆಯರ ಹೆಸರಿನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಖಾತೆಯನ್ನು ತೆರೆಯಬಹುದು.
ಇದನ್ನೂ ಓದಿ:Viral Post : ಪ್ರವಾಸ ಹೊರಟ ಗೆಳತಿಗೆ ವಿಚಿತ್ರ ಬೇಡಿಕೆ ಇಟ್ಟ ಬಾಯ್ ಫ್ರೆಂಡ್ !! ಹೌಹಾರಿದ ಯುವತಿ
ಇದಕ್ಕಾಗಿ ಮೊದಲು ನೀವು ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆಯಬೇಕು. ಅರ್ಜಿ ನಮೂನೆ, KYC ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಅಥವಾ ಪ್ಯಾನ್ ಕಾರ್ಡ್ನಂತಹ KYC ದಾಖಲೆಯನ್ನು ಒದಗಿಸಬೇಕಾಗುತ್ತದೆ
Comments are closed.