ವಿಕಿಪೀಡಿಯಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಎಲಾನ್ ಮಸ್ಕ್’ನ ಗ್ರೋಕಿಪೀಡಿಯಾ!

Share the Article

ನವದೆಹಲಿ: ಎಲಾನ್ ಮಸ್ಕ್ (Elon Musk) ರವರ AI ಕಂಪನಿ ವಿಕಿಪೀಡಿಯಾಗೆ ಪರ್ಯಾಯ ಗ್ರೋಕಿಪೀಡಿಯಾವನ್ನು (Grokipedia) ನಿರ್ಮಿಸುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ. ಇದನ್ನು ಅವರು ಮಹತ್ವದ ಹೆಜ್ಜೆ ಎಂದು ಕರೆದಿದ್ದಾರೆ.

ಈ ವಿಚಾರವಾಗಿ ಮಸ್ಕ್ ತಮ್ಮ X ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನಾವು ಗ್ರೋಕಿಪೀಡಿಯಾ @xAI ಅನ್ನು ಸಿದ್ದಪಡಿಸುತ್ತಿದ್ದೇವೆ. ವಿಕಿಪೀಡಿಯಾಕ್ಕಿಂತ ಇದು ಭಾರಿ ಸುಧಾರಣೆಯುತವಾಗಿ ಇರುತ್ತದೆ. ಸ್ಪಷ್ಟವಾಗಿ ಹೇಳುವುದಾದರೆ, ಇದು ಬ್ರಹ್ಮಾಂಡವನ್ನು ಅರ್ಥಮಾಡಿಕೊಳ್ಳುವ xAI ಗುರಿಯತ್ತ ಅಗತ್ಯ ಹಾಗೂ ಮಹತ್ವದ ಹೆಜ್ಜೆಯಾಗಿದೆ’ ಎಂದು ತಮ್ಮ X ನಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆ ಮಸ್ಕ್ ವಿಕಿಪೀಡಿಯಾದ ವಿರುದ್ಧ ಅನೇಕ ಟೀಕೆಗಳನ್ನ ಮಾಡಿದ್ದು, ತದನಂತರ ಇದೀಗ ಈ ಘೋಷಣೆ ಮಾಡಿದ್ದಾರೆ. ವಿಕಿಪೀಡಿಯಾ ಪಕ್ಷಪಾತದ ಮತ್ತು ಸೈದ್ಧಾಂತಿಕವಾಗಿ ಓರೆಯಾದ ಮಾಧ್ಯಮ ಎಂದೆಲ್ಲಾ ಅವರು ಬಣ್ಣಿಸಿದ್ದು, ಅನೇಕ ರೀತಿಯ ಆರೋಪಗಳನ್ನ ಮಾಡಿದ್ದಾರೆ. ಅಲ್ಲದೇ, ವಿಕಿಪೀಡಿಯಾವನ್ನು ಎಡಪಂಥೀಯ ಕಾರ್ಯಕರ್ತರು ನಿಯಂತ್ರಿಸುತ್ತಿದ್ದಾರೆ. ಅದಕ್ಕೆ ದೇಣಿಗೆ ನೀಡಬೇಡಿ ಎಂದು ಸಹ ಹೇಳಿದ್ದರು. ವಿಕಿಪೀಡಿಯಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಹಾಗೂ ತೀವ್ರ ಎಡಪಂಥೀಯ ಕಾರ್ಯಕರ್ತರು ಇದರ ಇದ್ದೆ ಇದ್ದಾರೆ ಎಂದು ಅವರು ವಾಗ್ದಾಳಿ ಮಾಡಿದ್ದರು. ಅಲ್ಲದೆ ವಿಕಿಪೀಡಿಯವು ತನ್ನ ಹೆಸರನ್ನು ಡಿಕಿಪೀಡಿಯ ಎಂದು ಬದಲಿಸಿಕೊಂಡಲ್ಲಿ ತಾವು ಒಂದು ಬಿಲಿಯನ್ ಮೊತ್ತವನ್ನು ಅದಕ್ಕೆ ನೀಡುವುದಾಗಿ ಘೋಷಿಸಿದ್ದರು.

ಏನಿದು ಗೋಕಿಪೀಡಿಯಾ?

ಎಲಾನ್ ಮಸ್ಕ್ ಅವರ ಈ ಪ್ರೋಕಿಪೀಡಿಯಾವು ಪ್ರೋಕ್ ನಿಂದ ನಡೆಸಲಾಗುವ xAI ನ ಸಂವಾದಾತ್ಮಕ AI ಆಗಿದೆ. ಈದು ಈಗಾಗಲೇ ಸಾರ್ವಜನಿಕವಾಗಿ ಇರುವ ಮಾಹಿತಿಗಳನ್ನ ಪಡೆಯುತ್ತದೆ. ಮಸ್ಕ್ ಗ್ರೋಕಿಪೀಡಿಯಾವನ್ನು ತಾಂತ್ರಿಕ ಮತ್ತು ತಾತ್ವಿಕ ಪ್ರತಿರೂಪವಾಗಿ ರೂಪಿಸುತ್ತಾರೆ ಎಂದು ಸಂಸ್ಥೆ ಹೇಳಿಕೊಂಡಿದ್ದು, ಸುಳ್ಳುಗಳನ್ನ ಸರಿ ಮಾಡಿ ಜನರಿಗೆ ನೀಡಲಾಗುತ್ತದೆ. ಅಲ್ಲದೆ ಕಾಣೆಯಾದ ವಿಚಾರಗಳನ್ನ ಕೊಟ್ಟು ವಿಕಿಪೀಡಿಯಾದಲ್ಲಿ ಮಾಡಲಾದ ಪಕ್ಷಪಾತವನ್ನು ನಿವಾರಿಸಲು ಕೆಲಸ ಮಾಡಲಾಗುತ್ತದೆ ಎಂದು ಸಂಸ್ಥೆ ವಿವರಿಸಿದೆ.

ಏತನ್ಮಧ್ಯೆ, X ನಲ್ಲಿನ ಮತ್ತೊಂದು ಪೋಸ್ಟ್‌ನಲ್ಲಿ ಜನರು ಬಂದು ಗ್ರೊಕಿಪೀಡಿಯಾವನ್ನು ನಿರ್ಮಿಸಲು ಸಹಾಯ ಮಾಡಬೇಕೆಂದು ಮಸ್ಕ್ ಮನವಿ ಮಾಡಿದ್ದಾರೆ. xAI ಗೆ ಸೇರಿ ಮತ್ತು ವಿಕಿಪೀಡಿಯಾಕ್ಕಿಂತ ಉತ್ತಮವಾದ ಜ್ಞಾನ ಭಂಡಾರವಾದ ಗ್ರೊಕಿಪೀಡಿಯಾವನ್ನು ನಿರ್ಮಿಸಲು ಸಹಾಯ ಮಾಡಿ. ಇದರ ಬಳಕೆಗೆ ಯಾವುದೇ ಮಿತಿ ಇಲ್ಲ ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಿರುತ್ತದೆ ಎಂದವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಡಿಜಿಟಲ್ ಯುಗದಲ್ಲಿ ಸತ್ಯ, ಪಕ್ಷಪಾತ ಮತ್ತು ಮಾಹಿತಿಯ ನಿಯಂತ್ರಣದ ಕುರಿತಾದ ಚರ್ಚೆಗಳಿಗೆ ಗ್ರೋಕಿಪೀಡಿಯಾ ತಾತ್ವಿಕ ಕಲಹಕ್ಕೆ ಜಾಗತಿಕ ವೇದಿಕೆಯಾಗಬಹುದು ಎನ್ನುವ ಅಭಿಪ್ರಾಯ ಕೇಳಿಬಂದಿದೆ.

Comments are closed.