Number Plate: ನಂಬರ್‌ ಪ್ಲೇಟ್‌ ಮರೆಮಾಚಿದರೆ ಇನ್ನು ಮುಂದೆ ಬೀಳುತ್ತೆ ಕ್ರಿಮಿನಲ್‌ ಕೇಸ್‌: ಎಚ್ಚರ ಬೈಕ್‌ ಸವಾರರೇ!

Share the Article

Number Plate: ಬೈಕ್‌ ನಂಬರ್‌ ಪ್ಲೇಟ್‌ ಸರಿಯಾಗಿ ಕಾಣಿಸದಿದ್ದರೆ ಕ್ರಿಮಿನಲ್‌ ಕೇಸ್‌ ದಾಖಲಾಗುವುದಾಗಿ ವರದಿಯಾಗಿದೆ. ಟ್ರಾಫಿಕ್‌ ಪೊಲೀಸರು, ಎಐ ಕ್ಯಾಮೆರಾ ಮತ್ತು ಸಿಗ್ನಲ್‌ಗಳನ್ನು ಕಣ್ತಪ್ಪಿಸಲು ಬೈಕ್‌ ಸವಾರರು ನಂಬರ್‌ ಪ್ಲೇಟ್‌ ಕಾಣದ ರೀತಿ ನಾನಾ ಕಸರತ್ತು ಮಾಡುತ್ತಾರೆ. ಹೀಗೆ ಮಾಡುವ ಸವಾರರಿಗೆ ಬಿಸಿ ಮುಟ್ಟಿಸಿಲು ಪೊಲೀಸರು ಕ್ರಿಮಿನಲ್‌ ಕೇಸು ದಾಖಲು ಮಾಡುತ್ತಿದ್ದಾರೆ.

ಇದನ್ನೂ ಓದಿ;Mallikarjuna Kharge: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು, ಬೆಂಗಳೂರಿನಲ್ಲಿ ಚಿಕಿತ್ಸೆ

ನಕಲಿ ನಂಬರ್‌ ಪ್ಲೇಟ್‌ ಬಳಸಿ ವಾಹನ ಚಲಾಯಿಸುತ್ತಿದ್ದ 1200 ಬೈಕ್‌ಗಳನ್ನು ಕಳೆದ ಒಂದು ವಾರದಲ್ಲಿ ಪೊಲೀಸರು ಸೀಜ್‌ ಮಾಡಿದ್ದಾರೆ. ನಗರದಲ್ಲಿ ರಾತ್ರಿ ವೇಳೆ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಈ ವೇಳೆ ನಕಲಿ ನಂಬರ್‌ ಪ್ಲೇಟ್‌ಗಳು, ನಂಬರ್‌ ಪ್ಲೇಟ್‌ ಮಡಚಿರುವುದು ತಿಳಿದು ಬಂದಿದೆ. ಈ ರೀತಿ ಮಾಡಿದರೆ ವಂಚನೆ ಕೇಸು ದಾಖಲಾಗುವುದು ಖಂಡಿತ.

Comments are closed.