Shivamogga: ದೇವಸ್ಥಾನ ದೀಪಾಲಂಕಾರದ ವಿದ್ಯುತ್ ಶಾಕ್: ಬಾಲಕ ಸಾವು

Shivamogga: ತಾಲೂಕಿನ ಹಾಡೋನನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಶಾಕ್‌ನಿಂದ ಬಾಲಕನೋರ್ವ ಶನಿವಾರ ಮೃತಪಟ್ಟ ಘಟನೆ ನಡೆದಿದೆ.

ಮಹೇಶ್ ಮತ್ತು ಆಶಾ ದಂಪತಿಯ ಪುತ್ರ ಸಮರ್ಥ್ (14) ಮೃತಪಟ್ಟ ಬಾಲಕ. ಶಿವಮೊಗ್ಗದ ಬಸವೇಶ್ವನಗರ ಆಕ್ಸ್‌ಫರ್ಡ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಸಮರ್ಥ್ ನವರಾತ್ರಿ ಹಬ್ಬದ ಕಾರಣ ಅಂಬಾಭವಾನಿ ದೇವಾಲಯಕ್ಕೆ ಹೋಗಿದ್ದಾನೆ. ನವರಾತ್ರಿ ಅಂಗವಾಗಿ ದೇವಾಲಯಕ್ಕೆ ದೀಪಾಲಂಕಾರ ಮಾಡಿದ್ದು, ದೇವಾಲಯದ ಗೇಟ್ ಮುಟ್ಟಿದಾಗ ವಿದ್ಯುತ್ ಶಾಕ್‌ನಿಂದ ಸಮರ್ಥ್ ಕುಸಿದು ಬಿದ್ದಿದ್ದು, ಕೂಡಲೇ ಆತನ ಮನೆಯವರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ನಂತರ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಈ ವೇಳೆ ಬಾಲಕ ಸಮರ್ಥ್ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ಮಾಡಿದ್ದಾರೆ.
Comments are closed.