Health Tips: ಗುಲಾಬಿ ಉಪ್ಪು ಮತ್ತು ಸಾಮಾನ್ಯ ಉಪ್ಪಿನ ವ್ಯತ್ಯಾಸವೇನು?

Health Tips: ಆಹಾರದಲ್ಲಿ ರುಚಿ ಹೆಚ್ಚಿಸಲು ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗಲಾರದು. ಹಾಗಂತ ಉಪ್ಪನ್ನು ಮಿತಿ ಮೀರಿ ಬಳಸುವ ಹಾಗಿಲ್ಲ. ಯಾಕೆಂದರೆ ಹೆಚ್ಚು ಸೋಡಿಯಂ ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಇನ್ನು ಉಪ್ಪಿನಲ್ಲಿ ಎರಡು ಬಣ್ಣದ ಉಪ್ಪಿದೆ. ಅಂದರೆ ಗುಲಾಬಿ ಉಪ್ಪು ಇನ್ನೊಂದು ಸಾಮಾನ್ಯ ಉಪ್ಪು. ಇವುಗಳ ನಡುವಿನ ವ್ಯತ್ಯಾಸ ಏನು ಅನ್ನೋದು ಇಲ್ಲಿ ತಿಳಿಸಲಾಗಿದೆ.


ಗುಲಾಬಿ ಉಪ್ಪು(pink salt) ಎಂದರೇನು?
ಗುಲಾಬಿ ಉಪ್ಪನ್ನು ಹಿಮಾಲಯನ್ ಉಪ್ಪು ಎಂದೂ ಕರೆಯುತ್ತಾರೆ. ಗುಲಾಬಿ ಉಪ್ಪು 84-98 ಪ್ರತಿಶತವನ್ನು ಹೊಂದಿದೆ. ಗುಲಾಬಿ ಉಪ್ಪು ನೈಸರ್ಗಿಕವಾಗಿದೆ. ಇದನ್ನು ಸಂಸ್ಕರಿಸಲಾಗುವುದಿಲ್ಲ. ಗುಲಾಬಿ ಉಪ್ಪಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ 84 ಕ್ಕೂ ಹೆಚ್ಚು ಖನಿಜಗಳಿವೆ.ಗುಲಾಬಿ ಉಪ್ಪು ಸೌಮ್ಯವಾದ, ಖನಿಜ ರುಚಿಯನ್ನು ಹೊಂದಿರುತ್ತದೆ. ಗುಲಾಬಿ ಉಪ್ಪು ಜಲಸಂಚಯನ ಮತ್ತು ಎಲೆಕ್ಟ್ರೋಲೈಟ್ ಸಮತೋಲನಕ್ಕೆ ಸಹಾಯ ಮಾಡುತ್ತದೆ.
ಸಾಮಾನ್ಯ ಉಪ್ಪು(White salt) ಎಂದರೇನು?
ಸಾಮಾನ್ಯ ಉಪ್ಪು ಇದನ್ನು ಸಂಸ್ಕರಣೆಯ ಮೂಲಕ ತಯಾರಿಸಲಾಗುತ್ತದೆ. ಇದರಿಂದ ಅನೇಕ ಖನಿಜಗಳನ್ನು ತೆಗೆದುಹಾಕಲಾಗುತ್ತದೆ. ಒಂದು ಟೀಚಮಚ ಸಾಮಾನ್ಯ ಉಪ್ಪಿನಲ್ಲಿ ಸುಮಾರು 2400 ಮಿಗ್ರಾಂ ಸೋಡಿಯಂ ಇರುತ್ತದೆ. ಸಾಮಾನ್ಯ ಉಪ್ಪು ಶೇ 97-99 ರಷ್ಟು ಹೊಂದಿರುತ್ತದೆ. ಈ ಉಪ್ಪನ್ನು ಸಮುದ್ರದ ನೀರು ಅಥವಾ ಭೂ ಗಣಿಗಳನ್ನು ಸಂಸ್ಕರಿಸುವ ಮೂಲಕ ತಯಾರಿಸಲಾಗುತ್ತದೆ. ಇದಕ್ಕೆ ಅಯೋಡಿನ್ ಸೇರಿಸಲಾಗುತ್ತದೆ. ಸಾಮಾನ್ಯ ಉಪ್ಪು ಹೆಚ್ಚು ಖಾರವಾಗಿರುತ್ತದೆ. ಈ ಉಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅಯೋಡಿನ್ ಕೊರತೆಯನ್ನು ತಡೆಯಬಹುದು.
ಇದನ್ನೂ ಓದಿ;Karnataka: ಪೊಲೀಸ್ ಎಸ್‌ಐ, ಕಾನ್‌ಸ್ಟೆಬಲ್ ನೇಮಕಾತಿ ವಯೋಮಿತಿ ಸಡಿಲಿಕೆ
ಒಟ್ಟಿನಲ್ಲಿ ಆಹಾರದ (food) ರುಚಿಯನ್ನು ಹೆಚ್ಚಿಸಲು ಮತ್ತು ಆಹಾರವನ್ನು ಸಂರಕ್ಷಿಸಲು ಎರಡನ್ನೂ ಬಳಸಲಾಗುತ್ತದೆ. ಆದ್ರೆ ಎರಡರ ಅತಿಯಾದ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು. ಎರಡಕ್ಕೂ ಅವುಗಳದ್ದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳಿವೆ. ನೀವು ಅಯೋಡಿನ್ ಬಯಸಿದರೆ, ಸಾಮಾನ್ಯ ಉಪ್ಪು ಸರಿಯಾದ ಆಯ್ಕೆಯಾಗಿದೆ. ನೀವು ನೈಸರ್ಗಿಕ ಖನಿಜಗಳು ಮತ್ತು ವಿಭಿನ್ನ ರುಚಿಯನ್ನು ಬಯಸಿದರೆ, ನೀವು ಗುಲಾಬಿ ಉಪ್ಪನ್ನು ಆಯ್ಕೆ ಮಾಡಬಹುದು.
Comments are closed.