ಐ ಲವ್‌ ಮಹಮ್ಮದ್‌ V/S ಐ ಲವ್ ಮಹಾದೇವ; ದೇವರ ಮೇಲೆಯೇ ಶುರುವಾಯ್ತು ಹೊಸ ಪ್ರೀತಿ!

Share the Article

ನವದೆಹಲಿ: ಕರ್ನಾಟಕ ಸೇರಿದಂತೆ ದೇವರ ಮೇಲೆಯೇ ಲವ್ ಶುರುವಾಗಿದೆ. ಐ ಲವ್ ಯು ಸಾನಿಯಾ, ಐ ಲವ್ ಯು ದೀಪಿಕಾ ಅಂತಿದ್ದವರು, ಇದೀಗ ಐ ಲವ್‌ ಮಹಮ್ಮದ್‌, ಐ ಲವ್ ಮಹಾದೇವ ಅನ್ನುತ್ತಿದ್ದಾರೆ. ಲವ್ ಯು ಪೋಸ್ಟರ್ ವಾರ್ ಜೋರಾಗಿದೆ. ಉತ್ತರಪ್ರದೇಶದಲ್ಲಿ ಇಸ್ಲಾಮಿಕ ಧಾರ್ಮಿಕ ಕಾರ್ಯಕ್ರಮವೊಂದರ ವೇಳೆ ಹುಟ್ಟಿಕೊಂಡ ಐ ಲವ್‌ ಮೊಹಮ್ಮದ್‌ ಪೋಸ್ಟರ್‌ ಮತ್ತು ಅದಕ್ಕೆ ಪ್ರತಿಯಾಗಿ ಐ ಲವ್‌ ಮಹಾದೇವ್‌ ಪೋಸ್ಟರ್‌ ಇದೀಗ ದೇಶದಲ್ಲಿ ಭಾರೀ ಟ್ರೆಂಡ್ ಸೃಷ್ಟಿಸುತ್ತಿವೆ. ಹಲವು ರಾಜ್ಯಗಳಲ್ಲಿ ಈ ವಿಷಯ ಹಿಂದೂ- ಮುಸ್ಲಿಂ ಅಶಾಂತಿಗೆ ಕಾರಣವಾಗಿದೆ.

ಈದ್‌ ವೇಳೆ ಹುಟ್ಟಿದ ಲವ್!

ಉತ್ತರಪ್ರದೇಶದ ಕಾನ್ಪುರದಲ್ಲಿ ಸೆಪ್ಟೆಂಬರ್ 4ನೆಯ ತಾರೀಕು ನಡೆದ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಕೆಲ ಯುವಕರು ‘ ಐ ಲವ್‌ ಮಹಮ್ಮದ್‌’ ಎಂದು ಬರೆದಿದ್ದ ಪೋಸ್ಟರ್‌ಗಳನ್ನು ಟ್ರಾಫಿಕ್‌ ಮತ್ತು ಕೆಲ ಅಂಗಡಿಗಳ ಮುಂಭಾಗದಲ್ಲಿ ಪ್ರದರ್ಶಿಸಿದ್ದರು. ಅವತ್ತಿಗೆ ಇದು ಹೊಸ ಸಂಪ್ರದಾಯ, ಬೆಳವಣಿಗೆ. ಮೆರವಣಿಗೆ ಹೋಗುವ ಮಾರ್ಗದಲ್ಲಿ ಇಂಥಹಾ ಪೋಸ್ಟರ್‌ ಪ್ರದರ್ಶನ ಕೋಮು ಸಾಮರಸ್ಯಕ್ಕೆ ಧಕ್ಕೆ ತರಬಹುದು ಎಂದು ಹಿಂದೂ ಯುವಕರು ವಿರೋಧ ವ್ಯಕ್ತಪಡಿಸಿದರು. ಜತೆಗೆ ಇವೆಲ್ಲದ್ದಕ್ಕೆ ಅನುಮತಿ ಪಡೆಯದ್ದಕ್ಕೆ ಪೊಲೀಸರು ಪೋಸ್ಟರ್‌ ಕಿತ್ತೆಸೆದರು. ಅಲ್ಲಿಂದ ಲವ್ ಜಗಳ ಶುರು. ಜಾಲತಾಣದಲ್ಲಿ ಲವ್ ಯು ಅಭಿಯಾನ ಆರಂಭ.

ಮುಸ್ಲಿಮರು ಬೀದಿಗಿಳಿದು ಪೋಸ್ಟರ್‌ಗಳನ್ನು ಮತ್ತೆ ಹಾಕಬೇಕೆಂದು ಪಟ್ಟು ಹಿಡಿದರು. ಲಾಠಿ ಜಾರ್ಜ್‌ ಆಯ್ತು, ಕೆಲವರ ಮೇಲೆ ಕೇಸ್‌ ಬಿತ್ತು. ಬಳಿಕ ಕಾನ್ಪುರದಿಂದ, ರಾಯ್‌ಬರೇಲಿ, ಸಂಭಲ್‌ನಂತಹ ಇತರ ಜಿಲ್ಲೆಗಳಿಗೂ ‘ಲವ್ ‘ ಶಿಫ್ಟ್ ಆಯಿತು.

ಈ ನಡುವೆ ಅಸಾದುದ್ದೀನ್‌ ಒವೈಸಿ ಐ ಲವ್‌ ಮಹಮ್ಮದ್‌ ಅನ್ನೋದು ಅಪರಾಧವಲ್ಲ ಎಂದರು. ಇದು ಅಭಿಯಾನಕ್ಕೆ ರಾಜಕೀಯ ಬಲ ತಂದು ಕೊಟ್ಟಿತು. ಅದರ ಕಾರಣ ದೇಶದ ಇತರ ರಾಜ್ಯಗಳಿಗೂ ಲವ್ ಸಂಘರ್ಷ ಹಬ್ಬಿ ತೆಲಂಗಾಣದ ಹೈದರಾಬಾದ್‌, ಮಹಾರಾಷ್ಟ್ರದ ನಾಗ್ಪುರ, ಮುಂಬೈ, ಉತ್ತರಾಖಂಡ್‌, ಗುಜರಾತ್‌, ಕರ್ನಾಟಕ ಬಿಹಾರ ಸೇರಿ ಹಲವೆಡೆ ಐ ಲವ್‌ ಮಹಮ್ಮದ್‌ ಬ್ಯಾನರ್‌ ಪ್ರತ್ಯಕ್ಷವಾದವು.

ಶುರುವಾದ ಮಹಾದೇವನ ಮೇಲೆ ಲವ್!

ಐ ಲವ್‌ ಮಹಮ್ಮದ್‌ ಎಂದು ಆಂದೋಲನಕ್ಕೆ ಕೌಂಟರ್ ಆಗಿ ಹಿಂದೂಗಳು ಆಗಿ ಐ ಲವ್ ಮಹಾದೇವ ಅಭಿಯಾನ ಆರಂಭಿಸಿದ್ದಾರೆ. ಜಾಲತಾಣದಲ್ಲಿ ‘ಲವ್ vs ಲವ್ ‘ ಭಾರೀ ಟ್ರೆಂಡ್‌ ಸೃಷ್ಟಿಸಿದ್ದು, ಲವ್ ಯು ಮಹದೇವ್ ಕೂಡಾ ಆರಂಭವಾಗಿದ್ದು ಉತ್ತರ ಪ್ರದೇಶದಲ್ಲಿ. ವಾರಣಾಸಿಯ ಧಾರ್ಮಿಕ ನೇತಾರರೊಬ್ಬರು ‘ಐ ಲವ್ ಮಹಾದೇವ್’ ಎಂದು ಬರೆದು ಬೀದಿಗಿಳಿದಿದ್ದರು.

ಇದನ್ನೂ ಓದಿ;SL Bhyrappa: ಕುಟುಂಬ ಕಲಹಕ್ಕೆ ಬೇಸತ್ತಿದ್ದ ಭೈರಪ್ಪ? ಪುತ್ರರು ಅಂತ್ಯಸಂಸ್ಕಾರ ಮಾಡಕೂಡದು ಅಂದದ್ದು ಅದಕ್ಕಾ?

ಈಗ ಕರ್ನಾಟಕದ ದಾವಣಗೆರೆಗೂ ಐ ಲವ್‌ ಮೊಹಮ್ಮದ್‌ ಪೋಸ್ಟರ್‌ ವಾರ್‌ ಕಾಲಿಟ್ಟಿದೆ. ಬುಧವಾರ ರಾತ್ರೋರಾತ್ರಿ ಈ ಬರಹಗಳಿದ್ದ ಬ್ಯಾನರ್‌ಗಳನ್ನು ನಗರದಲ್ಲಿ ಹಾಕಲಾಗಿ, ಇದು ಹಿಂದೂಗಳ ಆಕ್ರೋಶಕ್ಕೂ ಕಾರಣವಾಗಿ ಪ್ರತಿಭಟನೆ ನಡೆಯಿತು. ಎರಡು ಗುಂಪಿನ ನಡುವೆ ಘರ್ಷಣೆ ನಡೆದು, ನಾಲ್ವರು ಗಾಯಗೊಂಡಿದ್ದರು ಅನ್ನುವ ಮಾಹಿತಿ ಕೂಡಾ ಇದೆ.

Comments are closed.