States CAG Report : ದೇಶದಲ್ಲಿ ಹೆಚ್ಚು ಆದಾಯ ಗಳಿಸೋ ರಾಜ್ಯಗಳು ಯಾವುವು? ಕರ್ನಾಟಕ್ಕೆ ಎಷ್ಟನೇ ಸ್ಥಾನ?

States CAG Report: ದೇಶದ ಹಣಕಾಸು ನಿರ್ವಹಣೆಯಲ್ಲಿ ರಾಜ್ಯಗಳ ಪಾತ್ರವೂ ಕೂಡ ಅತಿ ಪ್ರಮುಖವಾಗಿದೆ. ಹಾಗಿದ್ದರೆ ಭಾರತದಲ್ಲಿ ಅತಿ ಹೆಚ್ಚು ಆದಾಯವನ್ನು ಪಡೆಯುವ ರಾಜ್ಯ ಯಾವುದು? ದೇಶದ ಆರ್ಥಿಕತೆಗೆ ಹೆಚ್ಚು ಯಾವ ರಾಜ್ಯ ಕೊಡುಗೆ ನೀಡುತ್ತದೆ?

ಇದೇ ಮೊದಲ ಬಾರಿಗೆ ರಾಜ್ಯಗಳ ಆರ್ಥಿಕ ಸ್ಥಿತಿಗತಿಯ ಕುರಿತು ವರದಿ ಬಿಡುಗಡೆ ಮಾಡಿರುವ ಸಿಎಜಿ, ದೇಶದ ಒಟ್ಟು 16 ರಾಜ್ಯಗಳು ಆದಾಯ ಹೆಚ್ಚಳವನ್ನು (Revenue Surplus) ದಾಖಲಿಸಿವೆ ಎಂದು ಬಹಿರಂಗಪಡಿಸಿದೆ. ಯೋಗಿ ಆಡಳಿತದ ಉತ್ತರ ಪ್ರದೇಶಕ್ಕೆ ಅಗ್ರಸ್ಥಾನ
ಈ ಪಟ್ಟಿಯಲ್ಲಿ ಉತ್ತರ ಪ್ರದೇಶವು ಅತ್ಯಂತ ದೊಡ್ಡ ಮಟ್ಟದ ಆರ್ಥಿಕ ಯಶಸ್ಸು ಕಂಡಿದೆ. ₹37,000 ಕೋಟಿ ರೂಪಾಯಿಗಳ ಬೃಹತ್ ಹೆಚ್ಚುವರಿ ಆದಾಯವನ್ನು ಗಳಿಸುವ ಮೂಲಕ ಉತ್ತರ ಪ್ರದೇಶವು ಮೊದಲ ಸ್ಥಾನದಲ್ಲಿ ವಿರಾಜಮಾನವಾಗಿದೆ.
ಇದನ್ನೂ ಓದಿ;Mangalore: ವಿದ್ಯುತ್ ಮಾರ್ಗ ಕಾಮಗಾರಿ: ಡಿ.15 ರವರೆಗೆ ಹಗಲು ರೈಲು ಇಲ್ಲ
ಇನ್ನು ದೇಶದ 16 ರಾಜ್ಯಗಳು ತಮ್ಮ ವೆಚ್ಚಕ್ಕಿಂತ ಹೆಚ್ಚಿನ ಆದಾಯ ಗಳಿಸಿವೆ. ಈ ಪಟ್ಟಿಯಲ್ಲಿ ಕರ್ನಾಟಕವು ₹13,496 ಕೋಟಿ ಹೆಚ್ಚುವರಿ ಆದಾಯದೊಂದಿಗೆ 5ನೇ ಸ್ಥಾನದಲ್ಲಿದೆ. ಕರ್ನಾಟಕದ ನಂತರದ ಸ್ಥಾನಗಳಲ್ಲಿ ಛತ್ತೀಸ್‌ಗಢ (₹8,592 ಕೋಟಿ), ತೆಲಂಗಾಣ (₹5,944 ಕೋಟಿ), ಉತ್ತರಾಖಂಡ (₹5,310 ಕೋಟಿ), ಮತ್ತು ಮಧ್ಯಪ್ರದೇಶ (₹4,091 ಕೋಟಿ) ಸ್ಥಾನ ಪಡೆದಿವೆ. ಗಮನಾರ್ಹವಾಗಿ, ಈ 16 ರಾಜ್ಯಗಳ ಪೈಕಿ 10 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿರುವುದು ವಿಶೇಷ.
Comments are closed.