Home News Bigg Boss-12: ಬಿಗ್ ಬಾಸ್ ಕನ್ನಡ ವೀಕ್ಷಕರಿಗೆ ಗುಡ್ ನ್ಯೂಸ್ – ಜಸ್ಟ್ ಹೀಗೆ ಮಾಡಿ,...

Bigg Boss-12: ಬಿಗ್ ಬಾಸ್ ಕನ್ನಡ ವೀಕ್ಷಕರಿಗೆ ಗುಡ್ ನ್ಯೂಸ್ – ಜಸ್ಟ್ ಹೀಗೆ ಮಾಡಿ, ಬಂಗಾರದ ನಾಣ್ಯ ಗೆಲ್ಲಿ

Hindu neighbor gifts plot of land

Hindu neighbour gifts land to Muslim journalist

Bigg Boss-12: ಕನ್ನಡಿಗರ ಬಹು ನಿರೀಕ್ಷೆಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಇನ್ನೇನು ಕೆಲವೇ ವಾರಗಳಲ್ಲಿ ಶುರುವಾಗಲಿದೆ. ಈಗಾಗಲೇ ಕಲರ್ಸ್ ಕನ್ನಡ ಒಂದರ ಮೇಲೊಂದು ಅಪ್ ಡೇಟ್ ಗಳನ್ನು ನೀಡುತ್ತಲೇ ಬಂದಿದೆ. ಈಗ ತಾನೆ ಬಹಳ ಕುತೂಹಲಕರವಾದ ಪ್ರೊಮೊ ರಿಲೀಸ್ ಕೂಡ ಆಗಿದೆ. ಈ ಬೆನ್ನಲ್ಲೇ ಬಿಗ್ ಬಾಸ್ ವೀಕ್ಷಕರಿಗೆ ಸಿಹಿ ಸುದ್ದಿ ದೊರೆತಿದೆ.

ಹೌದು, ಇದೇ ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಸೀಸನ್ 12 ಆರಂಭವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ. ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ರಾತ್ರಿ 9 ಗಂಟೆಗೆ ಕಿಚ್ಚ ಸುದೀಪ್‌ ಆಗಮನವಾಗಲಿದೆ. ಇನ್ನು, ಈ ಬಾರಿ ಬಿಗ್‌ಬಾಸ್‌ ತಂಡ ವೀಕ್ಷಕರಿಗೆ ಬಂಗಾರದ ನಾಣ್ಯ ಗೆಲ್ಲುವ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ.

ಇದನ್ನೂ ಓದಿ:Transfer: ರಾಜ್ಯ ಸರ್ಕಾರದಿಂದ ಮತ್ತೆ 6 ಮಂದಿ `DySP’ ಗಳ ವರ್ಗಾವಣೆ ಆದೇಶ

ಅಂದಹಾಗೆ ಬಿಗ್‌ಬಾಸ್‌ ಮನೆಯೊಳಗೆ ನಡೆಯುವ ವಿಚಾರಗಳನ್ನು ಪ್ರತಿ ಕ್ಷಣವು ಜಿಯೋ ಹಾಟ್‌ಸ್ಟಾರ್‌ನಲ್ಲಿ 24ಗಂಟೆ ನೇರ ಪ್ರಸಾರದಲ್ಲಿ ನೋಡಬಹುದಾಗಿದೆ. ಇದರ ಜೊತೆಗೆ ವೀಕ್ಷಕರಿಗೆ ಆಡುವ ಮಜಾ ನೀಡುವುದಕ್ಕಾಗಿ ‘ಜೀತೋ ಧನ್ ಧನಾ ಧನ್’ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಎಪಿಸೋಡ್ ಪ್ರಸಾರವಾಗುವ ವೇಳೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಕೇಳುವ ಸರಳ ಪ್ರಶ್ನೆಗಳಿಗೆ ಉತ್ತರಿಸಿದರೆ ಚಿನ್ನದ ನಾಣ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು. ಫ್ಯಾನ್‌ ಝೋನ್‌ನಲ್ಲಿ ಸಕ್ರಿಯರಾಗಿದ್ದರೆ ಸೀಸನ್ ಅಂತ್ಯದಲ್ಲಿ ನಡೆಯುವ ಫಿನಾಲೆಯಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಅವಕಾಶವನ್ನು ಪಡೆಯಬಹುದು.