S L Bhairappa : ಸೈದ್ಧಾಂತಿಕವಾಗಿ ವಿರೋಧಿಗಳಾಗಿದ್ರೂ S L ಭೈರಪ್ಪ, ಪ್ರೊ. ಭಗವಾನ್ ಎದುರು-ಬದುರು ಮನೆಯ ಆಪ್ತ ಸ್ನೇಹಿತರು !!

S L Bhairappa : ನಾಡಿನ ಹೆಸರಾಂತ ಸಾಹಿತಿ, ಕಾದಂಬರಿಗಳ ನೇತಾರ, ಕನ್ನಡ ಸಾರಸ್ವತ ಲೋಕದ ಬರಹ ಮಾಂತ್ರಿಕ ಎಸ್ ಎಲ್ ಬೈರಪ್ಪನವರು ಇದೀಗ ನಮ್ಮೆಲ್ಲರನ್ನು ಅಗಲಿದ್ದಾರೆ. ತಮ್ಮ ಅಪಾರ ಅಭಿಮಾನಿ ಬಳಗಕ್ಕೆ ವಿದಾಯ ಹೇಳಿ ಹೊರಟಿದ್ದಾರೆ. ತಮ್ಮ ನೆಚ್ಚಿನ ಸಾಹಿತಿಯ ನಿಧನಕ್ಕೆ ನಾಡಿನ ಜನ ಕಂಬನಿ ಮಿಡಿದಿದ್ದಾರೆ. ಭೈರಪ್ಪ ತಮ್ಮ ಕಾದಂಬರಿಗಳ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ತತ್ವಶಾಸ್ತ್ರವನ್ನು ಆಳವಾಗಿ ಶೋಧಿಸಿದರೆ ಮತ್ತೊಂದು ಕಡೆ, ಅದೇ ಪರಂಪರೆಯ ಕಟು ವಿಮರ್ಶಕರಾಗಿ, ತರ್ಕಬದ್ಧ ವಿಚಾರವಾದವನ್ನು ಪ್ರತಿಪಾದಿಸಿದವರು ಪ್ರೊ. ಕೆ.ಎಸ್. ಭಗವಾನ್. ಸಾರ್ವಜನಿಕ ವೇದಿಕೆಗಳಲ್ಲಿ ಇವರು ವಿದ್ಯಾರ್ಥಿಕವಾಗಿ ಬದ್ಧ ವೈರಿಗಳಾಗಿದ್ದರೆ ವೈಯಕ್ತಿಕ ಬದುಕಿನಲ್ಲಿ ಎದುರುಬದುರು ಮನೆಯವರಾಗಿ, ಆಪ್ತ ಸ್ನೇಹಿತರಾಗಿದ್ದರು.

ಹೌದು, ಎಸ್ ಎಲ್ ಭೈರಪ್ಪ ಹಾಗೂ ಪ್ರೊಫೆಸರ್ ಕೆಎಸ್ ಭಗವಾನ್ ಅವರು ಎದುರು ಬದರು ಮನೆಯ ಆತ್ಮೀಯ ಸ್ನೇಹಿತರಾಗಿದ್ದರು. ಎಡಪಂಥೀಯ ಹಾಗೂ ಬಲಪಂಥೀಯ ವಿಚಾರಧಾರೆಗಳು ಒಬ್ಬೊಬ್ಬರಲ್ಲಿ ಹೊದುಗಿದ್ದರು ಕೂಡ ಅವರೆಂದು ಆ ವಿಚಾರಗಳ ಕುರಿತು ಚರ್ಚಿಸಲೇ ಇಲ್ಲ. ಒಟ್ಟಿಗೆ ವಾಕಿಂಗ್ ಹೋಗುವುದು, ಒಟ್ಟಿಗೆ ಹರಟುವುದು, ಒಬ್ಬರಿಗೊಬ್ಬರ ವಿಚಾರಧಾರೆಗಳನ್ನು ಒಬ್ಬರು ಗೌರವಿಸುವುದು ಹೀಗೆ ಸಾಕಷ್ಟು ರೀತಿಯಲ್ಲಿ ಇಬ್ಬರ ನಡುವೆ ಒಡನಾಟವಿತ್ತು. ಬೈರಪ್ಪನವರು ಅಸುನಹಿಸಿದ ಬಳಿಕ ಭಗವಾನ್ ಅವರು ತಮ್ಮ ಆತ್ಮೀಯ ಬೆಳಗಿನ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಸ್ನೇಹ ಸಂಬಂಧದ ಕುರಿತು ತೆರೆದಿಟ್ಟಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಭಗವಾನ್, ಭೈರಪ್ಪನವರು ನಮ್ಮನ್ನು ಆಗಲಿ ತುಂಬಾ ದುಃಖಕ್ಕೆ ಈಡು ಮಾಡಿದ್ದಾರೆ. ನಾನು ಅವರು ಒಳ್ಳೆಯ ಸ್ನೇಹಿತರು. ಅವರೊಬ್ಬ ಹೆಸರಾಂತ ಕಾದಂಬರಿಕಾರರು. ಜೀವನದ ಎಲ್ಲಾ ಮಗ್ಗಲುಗಳನ್ನು ಕಷ್ಟಗಳನ್ನು ಕಾದಂಬರಿಯಲ್ಲಿ ಬರೆಯುತ್ತಿದ್ದರು. ಅವರಂತಹ ಜನಪ್ರಿಯ ಕಾದಂಬರಿಕಾರರು ಸದ್ಯಕ್ಕೆ ಯಾರು ಇಲ್ಲ. ಬಹಳ ಪ್ರೀತಿಯಿಂದ ನಮ್ಮ ಜೊತೆ ಇದ್ದರು. ಈಗ ಹಿರಿಯ ಆತ್ಮಿಯ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದಿದ್ದಾರೆ.
ತಮ್ಮ ಆತ್ಮೀಯ ಸ್ನೇಹ ಸಂಬಂಧದ ಕುರಿತು ಮಾತನಾಡಿದವರು “ನಾವಿಬ್ಬರು ಎದುರು ಬದರು ಮನೆಯಲ್ಲಿ ಇದ್ದವರು. ನಮ್ಮ ಮನೆಗೆ ಅವರು ಬರುತ್ತಿದ್ದರು. ನಾನು ಸಹ ಅವರ ಮನೆಗೆ ಹೋಗುತ್ತಿದ್ದೆ. ಭೇಟಿಯಾದಾಗ ಸಾಹಿತ್ಯ, ತತ್ವಜ್ಞಾನದ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಅವರ ಅಭಿಪ್ರಾಯ ಅವರಿಗೆ ನಮ್ಮ ಅಭಿಪ್ರಾಯ ನಮಗಿತ್ತು ಅಷ್ಟೇ. ಅವರದು ಸಂಪ್ರದಾಯಿಕ ಬರವಣಿಗೆ ನನ್ನದೇ ಬೇರೆ ತರಹದ ಬರವಣಿಗೆ. ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಯಿಂದ ಕಾಣುತ್ತಿದ್ದೇವು. ಇಬ್ಬರು ಸಾಹಿತ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಅವರ ಬರವಣಿಗೆ ನನ್ನ ಬರವಣಿಗೆ ಬಗ್ಗೆ ವಿಮರ್ಶೆ ಮುನ್ನುಡಿ ಎಲ್ಲವನ್ನು ಚರ್ಚೆ ಮಾಡುತ್ತಿದ್ದೆವು. ನಾನು ಮೈಸೂರಿಗೆ 1975 ರಲ್ಲಿ ಬಂದಿದ್ದೆ. ಬಳಿಕ ಒಂದು ವರ್ಷ ನಂತರ ಭೈರಪ್ಪ ಇಲ್ಲಿಗೆ ಬಂದರು. ಕಳೆದ 6 ತಿಂಗಳ ಹಿಂದೆ ಅವರ ಜೊತೆ ಮಾತನಾಡಿದ್ದೆ. ಅವರು ಬರೆದ ವಂಶವೃಕ್ಷ, ದಾಟು ನನ್ನ ನೆಚ್ಚಿನ ಕಾದಂಬರಿ ಎಂದು ಹೇಳಿದ್ದಾರೆ.
ಅಲ್ಲದೆ ವೈಚಾರಿಕ ಮೌನದ ಮೌಲ್ಯಈ ಗೆಳೆತನದ ಮೂಲ ರಹಸ್ಯವೆಂದರೆ ಅವರಿಬ್ಬರೂ ಮಾಡಿಕೊಂಡಿದ್ದ ಒಂದು ಅಲಿಖಿತ ‘ಮೌನದ ಒಪ್ಪಂದ.’ ತಮ್ಮ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವ ಯಾವುದೇ ಸೂಕ್ಷ್ಮ ವಿಷಯಗಳನ್ನು ಅವರು ತಮ್ಮ ವೈಯಕ್ತಿಕ ಮಾತುಕತೆಯಲ್ಲಿ ತರುತ್ತಿರಲಿಲ್ಲ. ಪ್ರೊನಾವು ಒಟ್ಟಿಗೆ ವಾಕಿಂಗ್ ಹೋಗುತ್ತಿದ್ದೆವು, ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದೆವು. ಸಾಹಿತ್ಯ, ಜಗತ್ತಿನ ವಿದ್ಯಮಾನಗಳು, ಆರೋಗ್ಯ, ಕುಟುಂಬ ಹೀಗೆ ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೆವು. ಆದರೆ ರಾಮ, ಕೃಷ್ಣ, ಧರ್ಮ, ದೇವರು, ಜಾತಿ, ರಾಜಕೀಯ ಇತ್ಯಾದಿ ವಿಷಯಗಳು ನಮ್ಮ ಚರ್ಚೆಗೆ ಬರುತ್ತಿರಲಿಲ್ಲ. ಈ ನಿಯಮದಿಂದಾಗಿ ನಮ್ಮ ಸ್ನೇಹದಲ್ಲಿ ಎಂದಿಗೂ ಬಿರುಕು ಮೂಡಲಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ:Mangalore: ವಿದ್ಯುತ್ ಮಾರ್ಗ ಕಾಮಗಾರಿ: ಡಿ.15 ರವರೆಗೆ ಹಗಲು ರೈಲು ಇಲ್ಲ
ಒಟ್ಟಿನಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಈ ಇಬ್ಬರು ದಿಗ್ಗಜರು ಪರಸ್ಪರರ ಪಾಂಡಿತ್ಯ ಮತ್ತು ಕೃತಿಗಳನ್ನು ಗೌರವಿಸುತ್ತಿದ್ದರು. ಭಗವಾನ್ ಅವರು ಭೈರಪ್ಪನವರನ್ನು ಕನ್ನಡದ ಶ್ರೇಷ್ಠ ಕಾದಂಬರಿಕಾರರೆಂದು ಪರಿಗಣಿಸಿದರೆ, ಭೈರಪ್ಪ ಅವರು ಭಗವಾನ್ ಅವರ ಅಧ್ಯಯನಶೀಲತೆ ಮತ್ತು ವಿದ್ವತ್ತನ್ನು ಪ್ರಶಂಸಿಸುತ್ತಿದ್ದರು. ವೈಯಕ್ತಿಕ ನಿಂದನೆಗಳಿಗೆ ಅವಕಾಶವೇ ಇರದ ಅವರ ಸ್ನೇಹದಲ್ಲಿ, ಸಾಹಿತ್ಯವೇ ಕೇಂದ್ರಬಿಂದುವಾಗಿತ್ತು.
Comments are closed.