FIR: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ‘ಚೈತನ್ಯಾನಂದ ಸರಸ್ವತಿ ಸ್ವಾಮೀಜಿ’ ವಿರುದ್ಧ FIR

FIR: 17 ದೆಹಲಿ ಬಾಬಾ ಎಂದೇ ಖ್ಯಾತಿಯಾಗಿದ್ದ ‘ಚೈತನ್ಯಾನಂದ ಸರಸ್ವತಿ ಸ್ವಾಮೀಜಿ’ (Swami Chaitanyananda Saraswati) ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ, ಎಫ್‌ಐಆರ್(FIR) ದಾಖಲಾಗಿದೆ.

ಸ್ವಾಮಿ ಪಾರ್ಥಸಾರಥಿ, ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್-ರಿಸರ್ಚ್ ಕಾಲೇಜು ನಡೆಸುತ್ತಿರುವ ಸ್ವಾಮೀಜಿ ಸ್ಕಾಲರ್‌ಶಿಪ್ ಹೆಸರಿನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ ನೀಡುತ್ತಿದ್ದ ಎಂಬ ಆರೋಪ ಬಂದ ಹಿನ್ನಲೆ ವಿಚಾರಣೆಯ ವೇಳೆ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್‌ನಲ್ಲಿ ಇಡಬ್ಲ್ಯೂಎಸ್ ವಿದ್ಯಾರ್ಥಿವೇತನ ಪಡೆಯುತ್ತಿದ್ದ 32 ವಿದ್ಯಾರ್ಥಿನಿಯರ ಹೇಳಿಕೆಯಂತೆ “ಸ್ವಾಮೀಜಿ ನಿಂದನೀಯ ಭಾಷೆ, ಅಶ್ಲೀಲ ವಾಟ್ಸಾಪ್ ಮೆಸೇಜ್ ಮತ್ತು ಅನಗತ್ಯ ದೈಹಿಕ ಸಂಪರ್ಕ ಹೊಂದಿದ್ದರು” ಎಂದು 17 ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಇದನ್ನೂ ಓದಿ:Canara Bank: ಪದವಿ ಪಾಸಾದವರಿಗೆ ಕೆನರಾ ಬ್ಯಾಂಕ್‌ನಲ್ಲಿ 3500 ಹುದ್ದೆಗಳಿವೆ: ಈ ಕೂಡಲೇ ಅರ್ಜಿ ಹಾಕಿ
ವಿದ್ಯಾರ್ಥಿನಿಯರ ದೂರಿನ ಅನ್ವಯ ವಸಂತ್ ಕುಂಜ್ ನಾರ್ತ್ ಪೊಲೀಸ್ (police) ಠಾಣೆಯಲ್ಲಿ 75(2)/79/351(2) ಬಿಎನ್‌ಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಸಿಸಿಟಿವಿ(CC TV) ಸೇರಿದಂತೆ ಇತರೆ ಆಧಾರಗಳನ್ನು ವಶಕ್ಕೆ ಪಡೆದಿದ್ದಾರೆ.
Comments are closed.