Child Care: ಮಕ್ಕಳಿಗೆ ಡೈಪರ್ ಹಾಕಿದ್ರೆ ದದ್ದುಗಳು ಆಗ್ತಿದ್ರೆ ಏನು ಮಾಡಬೇಕು?

Share the Article

Child Care: ಇತ್ತೀಚಿಗೆ ಮಕ್ಕಳ ಆರೈಕೆಯಲ್ಲೂ ಡೈಪರ್ ಪಾತ್ರ ಬಹಳವಾಗಿದೆ. ಮಕ್ಕಳ ಜೊತೆ ಹೊರಗಡೆ ಹೋಗುವ ಸಂದರ್ಭದಲ್ಲಿ, ರಾತ್ರಿ ನಿದ್ದೆ ಸಂದರ್ಭದಲ್ಲಿ ಡೈಪರ್ ಜೊತೆಗೆ ಇರಲೇಬೇಕು. ಆದರೆ, ಅವುಗಳನ್ನು ಸರಿಯಾಗಿ ಬಳಸದಿದ್ದರೆ, rashes ದದ್ದುಗಳು, ಚರ್ಮದ ಉರಿಮತ್ತು ಇತರ ಆರೋಗ್ಯ (Child Care) ಸಮಸ್ಯೆಗಳು ಕಾಣಿಸಬಹುದು. ಡೈಪರ್ ನಿಂದ ಆಗುವ ಈ ಸಮಸ್ಯೆಗೆ ಇಲ್ಲಿದೆ ಪರಿಹಾರ.

ಮಕ್ಕಳಿಗೆ ಡೈಪರ್ ಹಾಕಿದ್ರೆ ದದ್ದುಗಳು ಆಗ್ತಿದ್ರೆ ಏನು ಮಾಡಬೇಕು?

ಎಷ್ಟು ಬಾರಿ ಬದಲಾಯಿಸಬೇಕು?

ಮಕ್ಕಳಿಗೆ ಡೈಪರ್ ಅನ್ನು ಪ್ರತಿ ಮೂರು ಗಂಟೆಗಳಿಗೊಮ್ಮೆ ಬದಲಾಯಿಸಬೇಕು. ಮಕ್ಕಳಿಗೆ 18-20 ತಿಂಗಳ ವಯಸ್ಸಿನವರೆಗೆ ಡೈಪರ್ ಬಳಸಬಹುದು.

ಗಾಳಿಗೆ ಅವಕಾಶ ನೀಡಿರಿ: ಡೈಪರ್ ತೆಗೆದ ನಂತರ ಮಕ್ಕಳ ಅಂಗಗಳನ್ನು ಸ್ವಲ್ಪ ಸಮಯ ಗಾಳಿ ಮತ್ತು ಬೆಳಕಿಗೆ ಒಡ್ಡುವುದು ಉತ್ತಮ.

ತೊಳೆಯುವ ವಿಧಾನ: ಹತ್ತಿ ಬಟ್ಟೆಯನ್ನು ಬಿಸಿ ನೀರಿನಲ್ಲಿ ಒದ್ದೆ ಮಾಡಿ ಒರಸಿ. ವೈಪ್ ಬಳಕೆ ಕಡಿಮೆ ಮಾಡಿ.

ಕ್ರೀಮ್ ಬಳಕೆ: ದದ್ದು ಅಥವಾ ಚರ್ಮದ ರೋಗಗಳ ತಡೆಗೆ ಬೇಬಿ ಕ್ರೀಮ್ ಹಚ್ಚಬೇಕು.

ಗುಣಮಟ್ಟದ ಡೈಪರ್: ಕಾಟನ್ ಡೈಪರ್ ಹಾಕಬೇಕು. ಆದರೆ ತುಂಬಾ ಸಡಿಲ ಅಥವಾ ತುಂಬಾ ಬಿಗಿಯಾದ ಡೈಪರ್ ಹಾಕಬಾರದು.

ಇದನ್ನೂ ಓದಿ:Asia Cup: ಭಾರತ-ಪಾಕಿಸ್ತಾನ ಪಂದ್ಯ, 140 ಕೋಟಿ ಭಾರತೀಯರಿಗೆ ನಾಳೆ ಸೂಪರ್‌ ಸಂಡೇ- ಸೂರ್ಯಕುಮಾರ್‌

Comments are closed.