Bantwala: ಕೆ.ಎಸ್.ಆರ್.ಟಿ.ಸಿ ಬಸ್-ಕಾರು ಅಪಘಾತ: ಚಾಲಕ ಸೇರಿ ಇಬ್ಬರು ಪ್ರಯಾಣಿಕರಿಗೆ ಗಾಯ

Bantwala: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ಮಧ್ಯೆ ಡಿಕ್ಕಿಯಾಗಿದ್ದು, ಚಾಲಕ ಸಹಿತ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಮಣಿನಾಲ್ಕೂರು ಗ್ರಾಮದ ಉಜಿರಂಡಿ ಪಲ್ಕೆಯ ಪಲ್ಲದಲ್ಲಿ ಸೆ.20 ರ ಶನಿವಾರ ನಡೆದಿದೆ.

ಕಾರು ಚಾಲಕ ಕಾವಳಮೂಡೂರು ಗ್ರಾಮದ ಮಾದಡ್ಕ ನಿವಾಸಿ ಧನುಷ್ ಹಾಗೂ ಪರಾರ್ದೊಟ್ಟು ನಿವಾಸಿ ದೀಕ್ಷಿತ್ ಗಾಯಗೊಂಡ ವ್ಯಕ್ತಿ. ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ:Fenugreek Seeds for Hair Growth: ಮೆಂತ್ಯ ಬೀಜಗಳಿಂದ ಉದ್ದ ಕೂದಲು ಪಡೆಯಲು ಇಲ್ಲಿದೆ 5 ಮಾರ್ಗಗಳು
ಸರಕಾರಿ ಬಸ್ನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯವಾಗಿಲ್ಲ. ಬಸ್ನ ಮುಂಭಾಗದ ಗಾಜು ಅಪಘಾತದಿಂದ ಸಂಪೂರ್ಣ ಹುಡಿಯಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬಂಟ್ವಾಳ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Comments are closed.