Asia cup: T20 ನಲ್ಲಿ 100 ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ‘ಅರ್ಷ್ದೀಪ್ ಸಿಂಗ್’

Share the Article

Asia cup: 2025 ಸಾಲಿನ ಏಷ್ಯಾ ಕಪ್ (Asia cup) ಕ್ರಿಕೆಟ್ನಲ್ಲಿ (cricket) 100 ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಆರ್ಷ್ದೀಪ್ ಸಿಂಗ್ ಪಾತ್ರರಾಗಿದ್ದಾರೆ.

ಹೌದು, ಈ ಮೊದಲು ಆರ್ಷ್ದೀಪ್ ಸಿಂಗ್ ಅವರು 63 ಪಂದ್ಯಗಳಲ್ಲಿ 99 ವಿಕೆಟ್ ಗಳನ್ನು ಉರುಳಿಸಿದ್ದರು. ಇದೀಗ ಏಷ್ಯಾ ಕಪ್ 2025 ರಲ್ಲಿ ಒಮಾನ್ ವಿರುದ್ಧ, ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಪ್ರೀಮಿಯರ್ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ವಿರಾಮ ನೀಡಲು ನಿರ್ಧರಿಸಿದ ಕಾರಣ ಇದರಿಂದ ಅರ್ಷ್ದೀಪ್ ಗೆ ಅವಕಾಶ ದೊರಕಿತು.

ಇದನ್ನೂ ಓದಿ:Dasara: ಮೈಸೂರು ದಸರಾಗೆ ಡ್ರೋನ್‌, 30,814 ಸಿಸಿ ಟಿವಿ ಕ್ಯಾಮರಾ ಕಾವಲು

ಮುಖ್ಯವಾಗಿ ಅರ್ಷ್ದೀಪ್ ಸಿಂಗ್ ಅವರು ಎಡಗೈ ವೇಗಿ ವಿನಾಯಕ್ ಶುಕ್ಲಾ ಅವರನ್ನು ಕೊನೆಯ ಓವರ್ ನಲ್ಲಿ ಔಟ್ ಮಾಡುವ ಮೂಲಕ T20 ನಲ್ಲಿ 100 ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು ಮಾಡಿದರು. ಹೌದು, ಒಮಾನ್ ವಿರುದ್ಧದ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಅರ್ಷ್ದೀಪ್ ಬಳಸಿಕೊಂಡು ಇತಿಹಾಸ ನಿರ್ಮಿಸಿದರು. ಅಲ್ಲದೇ ಒಮಾನ್ ತಂಡದ ಅಂತಿಮ ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸಿದೆ.

Comments are closed.