Vehicle: ವಾಹನದ ನಂಬರ್ ಪ್ಲೇಟ್ನಲ್ಲಿ ಹೆಸರು, ಲಾಂಛನ ಹಾಕಿಸಿದ್ರೆ ಬೀಳುತ್ತೆ ಭಾರಿ ದಂಡ

Vehicle: ಬೆಂಗಳೂರಿನಲ್ಲಿ (Bangalore) ಕಾರು, ಬೈಕ್ ನಂಬರ್ ಪ್ಲೇಟ್ ಮೇಲೆ ಸಂಘ-ಸಂಸ್ಥೆಗಳ ಹುದ್ದೆಗಳ ಹೆಸರು, ಲಾಂಛನ ಹಾಕಿ ಪೋಸ್ ನೀಡ್ತಿದ್ದ ಪುಂಡರಿಗೆ ಮೊದಲ ಸಲ 500 ರೂ. ಎರಡನೇ ಸಲ 1000 ರೂಪಾಯಿ ದಂಡ ವಿಧಿಸಲು ಮುಂದಾಗಿದೆ.

ನಿಯಮಗಳ ಪ್ರಕಾರ ಕಾರು, ಬೈಕ್ ಅಥವಾ ಇತರ ವಾಹನಗಳ (Vehicle) ನಂಬರ್ ಪ್ಲೇಟ್ ಮೇಲೆ ಯಾವುದೇ ಸಂಘ ಸಂಸ್ಥೆಗಳ ಹೆಸರು, ಲಾಂಛನ ಹಾಕುವಂತಿಲ್ಲ. ಸರ್ಕಾರದ ಅಧಿಕೃತ ವಾಹನಗಳಲ್ಲಿ ಮಾತ್ರ ಹೆಸರು ಹಾಗೂ ಲಾಂಛನ ಬಳಸಬಹುದಾಗಿದೆ.
ಒಂದು ವೇಳೆ ವಾಹನಗಳ ನಂಬರ್ ಪ್ಲೇಟ್ (Number plate) ಮೇಲೆ, ನಾನು ಆ ಸಂಘದ ಅಧ್ಯಕ್ಷ, ಈ ಸಂಘದ ಅಧ್ಯಕ್ಷ ಎಂದು ಬರೆಸಿಕೊಂಡು ಬಿಲ್ಡಪ್ ಕೊಟ್ಟರೆ ಇನ್ಮುಂದೆ ಆರ್ಟಿಒ (RTO) ಅಧಿಕಾರಿಗಳು ದಂಡ ವಿಧಿಸಲಿದ್ದಾರೆ.
ನಂಬರ್ ಪ್ಲೇಟ್ ಮೇಲೆ ಯಾರಾದರೂ ಸಂಘ ಸಂಸ್ಥೆಗಳ ಲಾಂಛನ ಹಾಕಿ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ಅದರ ಫೋಟೊ (photo) ತೆಗೆದು ಸಾರ್ವಜನಿಕರೂ ಆರ್ಟಿಒಗೆ ದೂರು ನೀಡಬಹುದಾಗಿದೆ. ವಾಹನಗಳ ಫೋಟೋಗಳನ್ನು ಸಾರ್ವಜನಿಕರು ಆರ್ಟಿಒ ವಾಟ್ಸಾಪ್ (whatapp) ಸಂಖ್ಯೆ 9449863459 ಇದಕ್ಕೆ ಕಳುಹಿಸಬೇಕು. ಇದರ ಆಧಾರದಲ್ಲಿ ತಪಾಸಣೆ ನಡೆಸಿ ಆರ್ಟಿಒ (RTO) ಅಧಿಕಾರಿಳು ದಂಢ ವಿಧಿಸಲಿದ್ದಾರೆ.
Comments are closed.