IPhone: ಇಂದಿನಿಂದ ಭಾರತದಲ್ಲಿ ಐಫೋನ್ 17 ಮಾರಾಟ ಶುರು- ಭರ್ಜರಿ ಡಿಸ್ಕೌಂಟ್, ಆಫರ್ ಘೋಷಿಸಿದ ಆ್ಯಪಲ್

IPhone : ಕೆಲವು ದಿನಗಳ ಹಿಂದಷ್ಟೇ ಆಪಲ್ ಕಂಪೆನಿಯು. ಐಫೋನ್ 17, ಐಫೋನ್ 17 ಪ್ರೊ, ಐಫೋನ್ 17 ಪ್ರೊ ಮ್ಯಾಕ್ಸ್ ಮತ್ತು ಐಫೋನ್ ಏರ್ ಶ್ರೇಣಿಯನ್ನು ಬಿಡುಗಡೆಗೊಳಿಸಿತ್ತು. ಇಂದಿನಿಂದ ಭಾರತದಲ್ಲೂ ಐಫೋನ್ 17 ಮಾರಾಟ ಆರಂಭವಾಗಲಿದ್ದು ಭರ್ಜರಿ ಡಿಸ್ಕೌಂಟ್ ಆಫರ್, ಎಲ್ಲಾ ಲಭ್ಯವಿದೆ. ಅಷ್ಟೇ ಅಲ್ಲ ರಿಟೇಲ್ ಔಟ್ಲೆಟ್, ಇ ಕಾಮರ್ಸ್ ಮೂಲಕವೂ ಫೋನ್ ಖರೀದಿಗೆ ಲಭ್ಯವಿದೆಯಂತೆ.

ಹೌದು, ಇಂದಿನಿಂದ ಆಯಪಲ್ ಸ್ಟೋರ್, ರಿಟೇಲ್ ಶಾಪ್, ಇ ಕಾಮರ್ಸ್ ಮೂಲಕ ಆಯಪಲ್ 17 ಖರೀದಿಸಲು ಸಾಧ್ಯವಿದೆ. ಐಫೋನ್ 17, ಐಫೋನ್ 17 ಪ್ರೋ, ಐಫೋನ್ 17 ಪ್ರೋ ಮ್ಯಾಕ್ಸ್, ಐಫೋನ್ ಏರ್ ಫೋನ್ಗಳು ನಾಳೆಯಿಂದ ಲಭ್ಯವಿದೆ. ಅಂದಾಹಾಗೆ ಐಫೋನ್ 17ಗೆ ಭಾರತದಲ್ಲಿ 82,900 ರೂ., ಐಫೋನ್ ಏರ್ಗೆ 1,19,900 ರೂ., 17 ಪ್ರೋಗೆ 1,34,900 ರೂ. , 17 ಪ್ರೋ ಮ್ಯಾಕ್ಸ್ 1,49,900 ರೂ. ದರವನ್ನು ನಿಗದಿ ಮಾಡಲಾಗಿದೆ. ಆದರೆ ಇದೀಗ ಆಪಲ್ ವೆಬ್ಸೈಟ್ ಮೂಲಕ ಐಫೋನ್ 17 ಖರೀದಿಸುವ ಗ್ರಾಹಕರಿಗೆ ಕ್ಯಾಶ್ಬ್ಯಾಕ್ ಆಫರ್, ನೋ ಕಾಸ್ಟ್ ಇಎಂಐ, ಎಕ್ಸ್ಚೇಂಜ್ , ಕ್ರೆಡಿಟ್ ಆಫರ್ ನೀಡಲಾಗಿದೆ.
ಯಾವೆಲ್ಲಾ ಆಫರ್ ಘೋಷಣೆ?
ಐಫೋನ್ 17 ಖರೀದಿಸವು ಗ್ರಾಹಕರಿಗೆ ಪ್ರಮುಖ ಬ್ಯಾಂಕ್ಗಳಿಂದ ನೋ ಕಾಸ್ಟ್ ಇಎಂಐ ಸೌಲಭ್ಯ ನೀಡುತ್ತಿದೆ.
10,000 ರೂಪಾಯಿ ವರೆಗೆ ಇನ್ಸ್ಟ್ಯಾಂಟ್ ಕ್ಯಾಶ್ಬ್ಯಾಕ್ ಆಫರ್ ನೀಡಲಾಗಿದೆ. ಅಮೆರಿಕನ್ ಎಕ್ಸ್ಪ್ರೆಸ್, ಆಯಕ್ಸಿಸ್ ಬ್ಯಾಂಕ್ ಹಾಗೂ ಐಸಿಸಿ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ಈ ಆಫರ್ ಅನ್ವಯವಾಗಲಿದೆ.
ಐಫೋನ್ ಏರ್ ಫೋನ್ 19,150 ರೂಪಾಯಿ ತಿಂಗಳಿಗೆ ಜೊತೆಗೆ ಇನ್ಸ್ಟಾಂಗ್ ಕ್ಯಾಶ್ಬ್ಯಾಕ್ ಆರ್ ಹಾಗೂ ನೋ ಕಾಸ್ಟ್ ಇಎಂಐ ಅಥವಾ 1,19,900 ರೂಪಾಯಿ ಆಫರ್.
ಐಫೋನ್ 17 ತಿಂಗಳಿಗೆ 12,983 ರೂಪಾಯಿ ಜೊತೆಗೆ ಇನ್ಸ್ಟಾಂಟ್ ಕ್ಯಾಶ್ಬ್ಯಾಕ್ ಆಫರ್ ಹಾಗೂ ನೋ ಕಾಸ್ಟ್ ಇಎಂಐ ಅಥವಾ 82,900 ಆಫರ್.
ಆಯಪಲ್ ಟ್ರೇಡ್ ಮೂಲಕ ಗರಿಷ್ಠ 64,000 ರೂಪಾಯಿ ಉಳಿತಾಯ ಮಾಡಬಹುದು. ಎಕ್ಸ್ಚೇಂಜರ್ ಮೂಲಕ ಈ ಉಳಿತಾಯ ಮಾಡಿಕೊಳ್ಳಬಹುದು.
ಕ್ರೋಮಾ ಈಗಾಗಲೇ ಫ್ಲ್ಯಾಟ್ 6,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಆಫ್ಲೈನ್ ಹಾಗೂ ಆನಲೈನ್ ಎರಡಲ್ಲೂ ಲಭ್ಯವಿದೆ.
ಐಫೋನ್ 17 ಆವೃತ್ತಿಗಳ ವೈಶಿಷ್ಟಗಳು:
ಐಫೋನ್ 17
ಡಿಸ್ಪ್ಲೇ- 6.3 ಇಂಚಿನ LTPO Super Retina XDR OLED ಸ್ಕ್ರೀನ್, 1206 x 2622 ಪಿಕ್ಸೆಲ್, ~460 ಪಿಪಿಐ
ಪ್ಲಾಟ್ಫಾರಂ- ಐಓಎಸ್ 26, ಆಪಲ್ ಎ19 ಚಿಪ್, ಹೆಕ್ಸಾಕೋರ್ ಪ್ರೊಸೆಸರ್ ಆಪಲ್ ಜಿಪಿಯು(5 ಕೋರ್ ಗ್ರಾಫಿಕ್ಸ್)
ಮೆಮೋರಿ- ಹೆಚ್ಚುವರಿ ಮೆಮೋರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ. 256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ್ಯಾಮ್, 512 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ್ಯಾಮ್.
ಕ್ಯಾಮೆರಾ:- ಡ್ಯುಯಲ್ ಕ್ಯಾಮೆರಾ 48 MP, f/1.6, 26mm (wide), 1/1.56″, 1.0µm, dual pixel PDAF, sensor-shift OIS 48 MP, f/2.2, 13mm, 120˚ (ultrawide), 1/2.55″, 0.7µm, PDAF
ಬ್ಯಾಟರಿ – ಲಿಯಾನ್ 3692 mAh ಬ್ಯಾಟರಿ.
ಐಫೋನ್ 17
ಪ್ರೋ ಡಿಸ್ಪ್ಲೇ- 6.3 ಇಂಚಿನ LTPO Super Retina XDR OLED ಸ್ಕ್ರೀನ್, 1206 x 2622 ಪಿಕ್ಸೆಲ್, ~460 ಪಿಪಿಐ
ಪ್ಲಾಟ್ಫಾರಂ-ಐಓಎಸ್ 26, ಆಪಲ್ ಎ19 ಚಿಪ್, ಹೆಕ್ಸಾಕೋರ್ ಪ್ರೊಸೆಸರ್ ಆಪಲ್ ಜಿಪಿಯು(6 ಕೋರ್ ಗ್ರಾಫಿಕ್ಸ್)
ಮೆಮೋರಿ-ಹೆಚ್ಚುವರಿ ಮೆಮೋರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ. 256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ್ಯಾಮ್, 512 ಜಿಬಿ/ 12 ಜಿಬಿ ರ್ಯಾಮ್, 1 ಟಿಬಿ ಆಂತರಿಕ ಮೆಮೊರಿ/ 12 ಜಿಬಿ ರ್ಯಾಮ್
ಕ್ಯಾಮೆರಾ:-ಟ್ರಿಪಲ್ ಕ್ಯಾಮೆರಾ 48 MP, f/1.6, 24mm (wide), 1/1.28″, 1.22µm, dual pixel PDAF, sensor-shift OIS 48 MP, f/2.8, 100mm (periscope telephoto), 1/2.55″, 0.7µm, PDAF, 3D sensor‑shift OIS, 4x optical zoom 48 MP, f/2.2, 13mm, 120˚ (ultrawide), 1/2.55″, 0.7µm, PDAF TOF 3D LiDAR scanner (depth)
ಸಿಂಗಲ್ 18 ಎಂಪಿ multi-aspect, f/1.9, (wide), PDAF, OIS, SL 3D, (depth/biometrics sensor)
ಬ್ಯಾಟರಿ-ಲಿಯಾನ್ 3988 mAh (ನ್ಯಾನೋ ಸಿಮ್ ಮಾಡೆಲ್), ಲಿಯಾನ್ 4252 mAh(ಇ ಸಿಮ್)
ಐಫೋನ್ ಏರ್
ಡಿಸ್ಪ್ಲೇ- 6.5 ಇಂಚಿನ LTPO Super Retina XDR OLED ಸ್ಕ್ರೀನ್, 1260 x 2736 ಪಿಕ್ಸೆಲ್, ~460 ಪಿಪಿಐ
ಪ್ಲಾಟ್ಫಾರಂ-ಐಓಎಸ್ 26, ಆಪಲ್ ಎ19 ಚಿಪ್, ಹೆಕ್ಸಾಕೋರ್ ಪ್ರೊಸೆಸರ್ ಆಪಲ್ ಜಿಪಿಯು(5 ಕೋರ್ ಗ್ರಾಫಿಕ್ಸ್)
ಮೆಮೋರಿ:-ಹೆಚ್ಚುವರಿ ಮೆಮೋರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ. 256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ್ಯಾಮ್, 512 ಜಿಬಿ/ 12 ಜಿಬಿ ರ್ಯಾಮ್, 1 ಟಿಬಿ ಆಂತರಿಕ ಮೆಮೊರಿ/ 12 ಜಿಬಿ ರ್ಯಾಮ್
ಕ್ಯಾಮೆರಾ:-ಸಿಂಗಲ್ ಕ್ಯಾಮೆರಾ 48 MP, f/1.6, 26mm (wide), 1/1.56″, 1.0µm, dual pixel PDAF, sensor-shift OIS
ಸಿಂಗಲ್ 18 ಎಂಪಿ multi-aspect, f/1.9, (wide), PDAF, OIS, SL 3D, (depth/biometrics sensor)
ಬ್ಯಾಟರಿ-ಲಿಯಾನ್ 3149 ಮಹೇಶ್
ಇನ್ನು ಇವುಗಳಲ್ಲಿ ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಚಲನಚಿತ್ರ ನಿರ್ಮಾಪಕರು ಮತ್ತು ಕಂಟೆಂಟ್ ಕ್ರಿಯೇಟರ್ಗಳಿಗಾಗಿ ನಿರ್ಮಿಸಲಾದ ಇಂಡಸ್ಟ್ರೀ ಫಸ್ಟ್ ವಿಡಿಯೊ ವೈಶಿಷ್ಟ್ಯಗಳನ್ನು ಹೊಂದಿವೆ. ಇದರಲ್ಲಿ ಪ್ರೊರೆಸ್ ರಾ, ಆ್ಯಪಲ್ ಲಾಗ್ 2 ಮತ್ತು ಜೆನ್ಲಾಕ್ ಸೇರಿವೆ. ಎರಡೂ ಮಾದರಿಯ ಐಫೋನ್ಗಳು ಹಿಂಭಾಗದಲ್ಲಿ ಸೆರಾಮಿಕ್ ಶೀಲ್ಡ್ ಮತ್ತು ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ 2 ಅನ್ನು ಸಹ ಹೊಂದಿವೆ.
ಇದನ್ನೂ ಓದಿ:Nandini : GST ಪರಿಷ್ಕರಣೆ – ನಂದಿನಿ ಮೊಸರು, ತುಪ್ಪದ ದರದಲ್ಲಿ ಭಾರೀ ಇಳಿಕೆ !!
Comments are closed.