Home News Karnataka: 10 ತಾಲೂಕಿನಲ್ಲಿ ಯೋಗ, ಪ್ರಕೃತಿ ಚಿಕಿತ್ಸಾ ಕೇಂದ್ರ ತೆರೆಯಲು ಸರ್ಕಾರ ಆದೇಶ

Karnataka: 10 ತಾಲೂಕಿನಲ್ಲಿ ಯೋಗ, ಪ್ರಕೃತಿ ಚಿಕಿತ್ಸಾ ಕೇಂದ್ರ ತೆರೆಯಲು ಸರ್ಕಾರ ಆದೇಶ

Hindu neighbor gifts plot of land

Hindu neighbour gifts land to Muslim journalist

Karnataka: 10 ತಾಲೂಕಿನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲು ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ.

ಪ್ರಸ್ತಾವನೆ ಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಆಯುಷ್ ಅಭಿಯಾನ ಯೋಜನೆಯಡಿ ಈ ಕೆಳಕಂಡ 10 ಯೋಗ ಮತ್ತು ಪುಕೃತಿ ಚಿಕಿತ್ಸಾ ಕೇಂದ್ರಗಳನ್ನು (ಸದರಿ ಕೇಂದ್ರಗಳಿಗೆ ಅವಶ್ಯವಾಗುವ ಅನುದಾನಕ್ಕೆ ಸಂಬಂಧಿಸಿದಂತೆ) ರಾಜ್ಯ ಸರ್ಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ಕೋರಬಾರದೆಂಬ ಷರತ್ತುಗಳಿಗೊಳಪಟ್ಟು ತೆರೆಯಲು ಅನುಮತಿ ನೀಡಿ ಆದೇಶಿಸಿದೆ.

 

ಯಾವ ಜಿಲ್ಲೆಯ ಯಾವ ತಾಲ್ಲೂಕಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಓಪನ್ ಆಗುತ್ತೆ?

ಬೆಳಗಾವಿ- ನಿಪ್ಪಾಣಿ

ಬೆಳಗಾವಿ- ಬೈಲಹೊಂಗಲ

ಬಾಗಲಕೋಟೆ- ಬಾದಾಮಿ

ಬಾಗಲಕೋಟೆ – ಮುಧೋಳ

ಗದಗ- ಗಜೇಂದ್ರಗಡ

ಕೊಪ್ಪಳ- ಕೂಕನೂರು

ಹಾವೇರಿ – ರಾಣೆಬೆನ್ನೂರು

ವಿಜಯಪುರ- ಬಸವನ ಬಾಗೇವಾಡಿ

ಬೆಂಗಳೂರು ಗ್ರಾಮಾಂತ- ದೇವನಹಳ್ಳಿ

ಮೈಸೂರು – ಹೆಚ್.ಡಿ ಕೋಟೆ

ಇತರೆ 10 ಕೇಂದ್ರಗಳಿಗೆ ಸಂಬಂಧಿಸಿದಂತೆ ಇನ್ನೊಂದು ಪ್ರತ್ಯೇಕವಾಗಿ ಆದೇಶ ಹೊರಡಿಸಲಾಗುವುದು.

ಈ ಆದೇಶವನ್ನು ಆರ್ಥಿಕ ಇಲಾಖೆಯು ಟಿಪ್ಪಣಿ ಸಂಖ್ಯೆ:ಆಇ 321 ವೆಚ್ಚ-5/2025, ದಿನಾಂಕ:01.09.2025ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

ಇದನ್ನೂ ಓದಿ:LPG Cylinder Price: ಸೆಪ್ಟೆಂಬರ್ 22 ರಿಂದ ಎಲ್‌ಪಿಜಿ ಸಿಲಿಂಡರ್‌ಗಳು ಅಗ್ಗವಾಗುತ್ತವೆಯೇ? ಜಿಎಸ್‌ಟಿ ದರ ಕಡಿತದ ಪರಿಣಾಮವೇನು?