Health Tips: ಸಕ್ಕರೆ ತ್ಯಜಿಸಿದರೆ ದೇಹದಲ್ಲಿ ಈ ಬದಲಾವಣೆ ಕಾಣಬಹುದು : ಮುಖದ ಮೇಲೆ ಕಾಂತಿ ಬರುತ್ತೆ – ತೂಕ ಬೇಗ ಕಡಿಮೆಯಾಗುತ್ತೆ

Health Tips: ಸಕ್ಕರೆ ನಮ್ಮ ಆಹಾರದ ಪ್ರಮುಖ ಅಂಶವಾಗಿದೆ. ಟೀ-ಕಾಫಿ, ಸಿಹಿತಿಂಡಿಗಳು ಅಥವಾ ಯಾವುದೇ ಪ್ಯಾಕೆಟ್ ಆಹಾರ, ಬೇಕರಿ ಉತ್ಪನ್ನಗಳಲ್ಲಿ ಸಕ್ಕರೆ ಇದ್ದೇ ಇರುತ್ತದೆ. ಆದರೆ, ಈ ಸಕ್ಕರೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದು ಗೊತ್ತಿದ್ದರೂ ಸಕ್ಕರೆ ಸೇವನೆಯನ್ನು ನಿಯಂತ್ರಿಸಲು ಕಷ್ಟ. ಆದರೆ, ಒಮ್ಮೆ ಸಕ್ಕರೆ ಸೇವನೆಯನ್ನು ನಿಯಂತ್ರಿಸಿಕೊಂಡರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಖಂಡಿತಾ ದೂರವಿಡಬಹುದು.

ಕೇವಲ ಮಧುಮೇಹ ಅಥವಾ ಬೊಜ್ಜು ಸಮಸ್ಯೆ ಇರುವವರು ಸಕ್ಕರೆಯನ್ನು ಬಿಡಬೇಕು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ, ಸದ್ಯ ಯಾವ ಕಾಯಿಲೆಯೂ ಇಲ್ಲದಿರುವವರು ಸಹ ಆರೋಗ್ಯವಾಗಿರಲು ಸಕ್ಕರೆ ಸೇವನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಸಕ್ಕರೆ ಮತ್ತು ಮೈದಾ ಈ ಎರಡು ಪದಾರ್ಥಗಳನ್ನು ನಿಮ್ಮ ಆಹಾರದಿಂದ ತೆಗೆದು ಹಾಕಿದರೆ ನೀವು ಅನಾರೋಗ್ಯದ ವಿರುದ್ಧ ಯುದ್ಧವನ್ನು ಅರ್ಧ ಗೆದ್ದಂತೆಯೆ!
ಸಕ್ಕರೆ ತ್ಯಜಿಸುವುದರಿಂದ ದೇಹಕ್ಕೆ ಆಗುವ ಅದ್ಭುತ ಪ್ರಯೋಜನಗಳನ್ನು ನೋಡೋಣ
1. ನಿಮ್ಮ ದೇಹದಲ್ಲಿ ಸಶಕ್ತತೆಯ ಅನುಭವವಾಗುತ್ತದೆ. ಆಹಾರದಲ್ಲಿ ಸಕ್ಕರೆ ಇಲ್ಲದಿರುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಹೆಚ್ಚಿನ ಏರಿಳಿತಗಳು ಇರುವುದಿಲ್ಲ. ಇದರಿಂದ ಯಾವಾಗಲೂ ಸಬಲತೆಯ ಅನುಭವವಾಗುತ್ತದೆ.
2. ಬೆಳಗಿನ ಉಪಾಹಾರ, ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ನೀವು ಹೆಚ್ಚು ಸಕ್ಕರೆಯನ್ನು ಸೇವಿಸದ ಕಾರಣ ನಿಮಗೆ ಗೊತ್ತಿಲ್ಲದೆಯೇ ನೀವು ಅನಾವಶ್ಯಕವಾದ ತೂಕವನ್ನು ಕಳೆದುಕೊಳ್ಳುತ್ತೀರಿ. ಊಟ ಅಥವಾ ತಿಂಡಿಗಳ ನಡುವೆ ನಾವು ಸಿಹಿ ಆಹಾರಗಳನ್ನು ಸೇರಿಸುತ್ತೇವೆ. ಆದರೆ, ಈ ಮಧ್ಯಾಹ್ನದ ಸಿಹಿತಿಂಡಿಗಳನ್ನು ನಿಲ್ಲಿಸುವುದರಿಂದ ತಿಳಿಯದೆ ತೂಕ ನಷ್ಟವಾಗುತ್ತದೆ.
3. ನೀವು ಬೆಳಿಗ್ಗೆ ಎದ್ದಾಗ ಇದು ನಿಮಗೆ ಅರಿವಿಲ್ಲದೆ ತುಂಬಾ ತಾಜಾತನವನ್ನು ಅನುಭವಿಸಲು ಸಹಾಯ ಮಾಡುತ್ತದೆ. ಸಕ್ಕರೆಯಿಂದಾಗಿ ದೇಹದಲ್ಲಿ ನಿಯೋಪೆಪ್ಟೈಡ್ ಹೆಚ್ಚಾಗುತ್ತದೆ ಮತ್ತು ಅದು ನಮಗೆ ದಣಿವು ಅಥವಾ ಆಲಸ್ಯವನ್ನುಂಟು ಮಾಡುತ್ತದೆ. ಆದರೆ ಸಕ್ಕರೆ ನಿಲ್ಲಿಸಿದರೆ ಈ ಘಟಕಾಂಶವು ಹೆಚ್ಚಾಗುವುದಿಲ್ಲ ಮತ್ತು ತಾಜಾತನವನ್ನು ಅನುಭವಿಸಲು ಸಹಾಯ ಮಾಡುತ್ತದೆ.
4. ಸಕ್ಕರೆಯ ಪ್ರಮಾಣವು ಕಡಿಮೆಯಾದಂತೆ, ಇದು ನಿದ್ರೆಯ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಇದು ಬೇಗನೆ ಮತ್ತು ಉತ್ತಮ ಆಳವಾದ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಮಗುವು ಆಳವಾಗಿ ನಿದ್ರಿಸುವಂತೆಯೇ, ಆಳವಾದ ನಿದ್ರೆಯು ಹೆಚ್ಚು ತೃಪ್ತಿಕರವಾಗಿರುತ್ತದೆ.
5. ಸಕ್ಕರೆಯನ್ನು ತಿನ್ನದಿರುವ ಇನ್ನೊಂದು ಪ್ರಮುಖ ಪರಿಣಾಮವೆಂದರೆ ಸೌಂದರ್ಯವನ್ನು ಹೆಚ್ಚಿಸುವುದು. ಸಕ್ಕರೆಯನ್ನು ತಪ್ಪಿಸುವುದು ಹೊಳೆಯುವ ಮತ್ತು ನಯವಾದ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಸಕ್ಕರೆಯನ್ನು ತ್ಯಜಿಸುವುದರಿಂದ ಮಧುಮೇಹ, ಬಿಪಿ, ಥೈರಾಯ್ಡ್ ಮುಂತಾದ ಕಾಯಿಲೆಗಳನ್ನು ತಡೆಯಬಹುದು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.
ವಾಸ್ತವದಲ್ಲಿ ಸಕ್ಕರೆಯೂ ಯಾರ ಮನೆಯಲ್ಲಿ ಎಂದಿಗೂ ಕಂಡು ಬರಬಾರದಂತ ಪದಾರ್ಥ ಆದರೆ ಇದು ಎಲ್ಲರ ಮನೆಯಲ್ಲೂ ಯಾವಾಗಲೂ ಇದ್ದೇ ಇರುತ್ತದೆ ಕೆಲವೊಮ್ಮೆ ದಿನಸಿ ಪದಾರ್ಥಗಳು ಇಲ್ಲದೆ ಇರಬಹುದು ಆದರೆ ಸಕ್ಕರೆ ಮಾತ್ರ ಇದ್ದೇ ಇರುತ್ತದೆ!
ಇದನ್ನೂ ಓದಿ:Weather Report: ಇವತ್ತು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ : 11 ರಾಜ್ಯಗಳಿಗೆ ಭಾರಿ ಮಳೆ ಎಚ್ಚರಿಕೆ
ನೀವು ಯಾವುದೇ ಕಾಯಿಲೆಯನ್ನು ಹೊಂದಿದ್ದರೂ ಅದರಿಂದ ಪರಿಹಾರ ಪಡೆಯುವ ನಿರೀಕ್ಷೆಯಲ್ಲಿದ್ದರೆ ನೀವು ಮಾಡಬೇಕಾದ ಮೊಟ್ಟ ಮೊದಲ ಕೆಲಸ “ಸಕ್ಕರೆಯ ಮತ್ತು ಮೈದಾಯುಕ್ತ ಪದಾರ್ಥಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು!” ಇಷ್ಟು ಮಾಡಿದರೂ ನಿಮ್ಮ ಆರೋಗ್ಯದಲ್ಲಿ ಖಂಡಿತವಾಗಿ ಕೆಲವು ಸಕಾರಾತ್ಮಕ ಬೆಳವಣಿಗೆಗಳನ್ನು ನೀವು ಅನುಭವಿಸುತ್ತೀರಿ!!
– ಡಾ. ಪ್ರ. ಅ. ಕುಲಕರ್ಣಿ
Comments are closed.