Ukraine: ಭಾರತದಿಂದ ಡೀಸೆಲ್‌ ಖರೀದಿ ನಿಲ್ಲಿಸಿದ ಉಕ್ರೇನ್‌!!

Share the Article

Ukraine: ಇನ್ನು ಮುಂದೆ ಉಕ್ರೇನ್‌ (Ukraine) ಭಾರತದಿಂದ (Indian) ಡೀಸೆಲ್ (Diesel) ಖರೀದಿ ಮಾಡುವುದನ್ನ ನಿಲ್ಲಿಸಲಿದೆ ಎಂದು ಉಕ್ರೇನ್‌ನ ಇಂಧನ ಸಲಹಾ ಸಂಸ್ಥೆ ಎನ್‌ಕೋರ್ ಸೋಮವಾರ ತಿಳಿಸಿದೆ.

ಹೌದು, ಆಗಸ್ಟ್ ನಲ್ಲಿ ಉಕ್ರೇನ್ 1,19,000 ಟನ್‍ ಗಳಷ್ಟು ಭಾರತೀಯ ಡೀಸೆಲ್ ಇಂಧನವನ್ನು ಆಮದು ಮಾಡಿಕೊಂಡಿದ್ದು ಇದು ಉಕ್ರೇನ್‍ನ ಒಟ್ಟು ಡೀಸೆಲ್ ಆಮದಿನ 18%ದಷ್ಟಾಗಿದೆ’ ಎಂದು ಎನ್‍ಕೋರ್ ಹೇಳಿದೆ. ಆದರೆ ಈಗ ಉಕ್ರೇನ್ ಭಾರತದಿಂದ ಡೀಸೆಲ್ ಖರೀದಿಸುವುದನ್ನ ನಿಲ್ಲಿಸಲಿದೆ ಎಂದು ಉಕ್ರೇನ್‌’ನ ಇಂಧನ ಸಲಹಾ ಸಂಸ್ಥೆ ಎನ್‌ಕೋರ್ ಸೋಮವಾರ ಹೇಳಿದೆ. ಸಂಸ್ಥೆಯ ಪ್ರಕಾರ, ಅಕ್ಟೋಬರ್ 1ರಿಂದ ಉಕ್ರೇನ್ ಭಾರತದಿಂದ ಉತ್ಪಾದಿಸುವ ಡೀಸೆಲ್ ಇಂಧನ ಆಮದನ್ನ ನಿಷೇಧಿಸಲಿದೆ.

ಇದನ್ನೂ ಓದಿ:CBSE Board Exam 2025: ಸಿಬಿಎಸ್‌ಇಯಿಂದ ಮಹತ್ವದ ನಿರ್ಧಾರ, 75% ಹಾಜರಾತಿ ಮತ್ತು ಆಂತರಿಕ ಮೌಲ್ಯಮಾಪನವಿಲ್ಲದೆ ಬೋರ್ಡ್ ಪರೀಕ್ಷೆಗಳಿಗೆ ಪ್ರವೇಶವಿಲ್ಲ!

ಭಾರತ ರಷ್ಯಾದಿಂದ ತೈಲವನ್ನ ಖರೀದಿ ಮಾಡುತ್ತಿರುವುದರಿಂದ ಉಕ್ರೇನ್‌ ಈ ನಿಷೇಧ ನಿರ್ಧಾರವನ್ನ ಮಾಡಿದೆ ಎನ್ನಲಾಗುತ್ತಿದೆ. ಈ ತಿಂಗಳ ಆರಂಭದಲ್ಲಿ ಉಕ್ರೇನಿಯನ್‌’ನ ಪ್ರಮುಖ ತೈಲ ಸಂಸ್ಕರಣಾಗಾರವನ್ನು ಮುಚ್ಚಬೇಕಾಯಿಗಿ ಬಂದಿತ್ತು. ಈ ಸಂಸ್ಕರಣಾಗಾರ ಮುಚ್ಚಿದ ಕಾರಣ, ಉಕ್ರೇನಿಯನ್ ವ್ಯಾಪಾರಿಗಳು ಭಾರತದಿಂದ ಡೀಸೆಲ್ ಇಂಧನವನ್ನ ಆಮದು ಮಾಡಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿತ್ತು. ಅಲ್ಲದೇ, ಈ ಸಮಯದಲ್ಲಿ ಉಕ್ರೇನಿಯನ್ ರಕ್ಷಣಾ ಸಚಿವಾಲಯ ಸಹ ಭಾರತದಿಂದ ಇಂಧನವನ್ನ ಖರೀದಿ ಮಾಡಲಾಗಿದ್ದು, ಅದರ ಗುಣಮಟ್ಟ ತುಂಬಾ ಚೆನ್ನಾಗಿದೆ ಎಂದು ಹೇಳಿತ್ತು. ಆದರೆ ಈಗ ಭಾರತದಿಂದ ಆಮದಾಗುವ ಡೀಸೆಲ್ ಇಂಧನದಲ್ಲಿ ರಶ್ಯದ ಘಟಕಾಂಶಗಳ ಉಪಸ್ಥಿತಿಯನ್ನು ಪರಿಶೀಲಿಸಲು ಎಲ್ಲಾ ಸರಕುಗಳನ್ನೂ ಪ್ರಯೋಗಾಲಯದ ವಿಶ್ಲೇಷಣೆಗೆ ಒಳಪಡಿಸಬೇಕು ಎಂದು ಉಕ್ರೇನ್‍ನ ಭದ್ರತಾ ಸಂಸ್ಥೆಗಳು ಆದೇಶಿಸಿವೆ.

Comments are closed.