Cars: ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಕಾರುಗಳಲ್ಲಿ ಯಾವುದು ಬೆಸ್ಟ್? ಯಾವುದನ್ನು ಕೊಂಡ್ರೆ ಉತ್ತಮ?

Share the Article

Cars: ತಂತ್ರಜ್ಞಾನ ಬದಲಾದಂತೆ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಕಾರುಗಳ ಜೊತೆಗೆ ಇಂದು ಸ್ವಯಂಚಾಲಿತ ಗೇರ್‌ಬಾಕ್ಸ್ ಹೊಂದಿರುವ ಕಾರುಗಳು ಮಾರುಕಟ್ಟೆಗೆ ಬಂದಿವೆ. ಕೆಲವು ಎಕ್ಸ್ಪರ್ಟ್ ಗಳು ಮ್ಯಾನುವಲ್ ಕಾರು ಬೆಸ್ಟ್ ಎಂದರೆ ಇನ್ನು ಕೆಲವರು ಸ್ವಯಂಚಾಲಿತ ಕಾರುಗಳು ಬೆಸ್ಟ್ ಎನ್ನುತ್ತಾರೆ. ಹಾಗಿದ್ರೆ ಯಾವ ಕಾರು ಬೆಸ್ಟ್?

ನಗರ ಪ್ರದೇಶಗಳಲ್ಲಿ ಸ್ವಯಂಚಾಲಿತ ಕಾರುಗಳು ಜನಪ್ರಿಯವಾಗಿದ್ದರೂ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಸ್ತಚಾಲಿತ ಕಾರುಗಳು ಕಂಡುಬರುತ್ತವೆ. ಪ್ರತಿಯೊಂದೂ ತನ್ನದೇ ಆದ ಅನುಕೂಲಗಳನ್ನು ಹೊಂದಿದೆ ಮತ್ತು ಉತ್ತಮ ಸವಾರಿ ಮತ್ತು ಸೌಕರ್ಯವನ್ನು ನೀಡುತ್ತದೆ. ಸ್ವಯಂಚಾಲಿತ ಅಂದರೆ ಅಟೋಮ್ಯಾಟಿಕ್ ಕಾರುಗಳ ಬೆಲೆ ಮ್ಯಾನುವಲ್ ಕಾರುಗಳಿಗಿಂತ ವ್ಯತ್ಯಾಸ ಇರುತ್ತದೆ. ಬೆಲೆಯಲ್ಲಿ, ಇಂಧನ ಕ್ಷಮತೆಯಲ್ಲಿ, ಓಡಿಸುವ ಚಾಲಕನ ಅನುಭವದಲ್ಲಿ, ರಿಪೇರಿ ಅಥವಾ ಮೆಂಟೆನನ್ಸ್ ಖರ್ಚಿನಲ್ಲಿ ಇವುಗಳೆರಡಕ್ಕೆ ಹಲವಾರು ವ್ಯತ್ಯಾಸವನ್ನು ಕಾಣುತ್ತೇವೆ. ಅದರ ಬಗ್ಗೆ ತಿಳಿಯೋಣ ಬನ್ನಿ.

ಮ್ಯಾನುಯಲ್ ಗೇರ್ ಬಾಕ್ಸ್

ಹೆಚ್ಚು ನಿಯಂತ್ರಣ : ಮ್ಯಾನುವಲ್ ಗೇರ್‌ಬಾಕ್ಸ್‌ನ ದೊಡ್ಡ ಪ್ರಯೋಜನವೆಂದರೆ ಬಹುತೇಕ ಎಲ್ಲರಿಗೂ ಅದರ ಪರಿಚಯವಿರುತ್ತದೆ ಮತ್ತು ಈ ಕಾರುಗಳನ್ನು ಓಡಿಸಲು ಸುಲಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಕಾರುಗಳನ್ನು ಚಾಲನೆ ಮಾಡುವುದು ಹೆಚ್ಚು ಖುಷಿ ನೀಡುತ್ತದೆ. ಮ್ಯಾನುಯಲ್ ಗೇರ್‌ಬಾಕ್ಸ್ ಚಾಲಕನಿಗೆ ವಾಹನದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ. ಇದರ ಅನಾನುಕೂಲವೆಂದರೆ ನೀವು ಪ್ರತಿ ಬಾರಿ ಗೇರ್‌ಗಳನ್ನು ಬದಲಾಯಿಸಿದಾಗ ಕ್ಲಚ್ ಅನ್ನು ಒತ್ತಬೇಕಾಗುತ್ತದೆ. ಭಾರೀ ಟ್ರಾಫಿಕ್‌ನಲ್ಲಿ ಕಾರನ್ನು ಚಾಲನೆ ಮಾಡುವಾಗ ಈ ಕೆಲಸವು ಹೆಚ್ಚು ಬೇಸರದ ಮತ್ತು ತೊಂದರೆದಾಯಕವೆಂದು ತೋರುತ್ತದೆ.

ಇಂಧನ ದಕ್ಷತೆ – ಕಡಿಮೆ ವೆಚ್ಚ: ಕೆಲವು ಸಂದರ್ಭಗಳಲ್ಲಿ, ಹಸ್ತಚಾಲಿತ ಕಾರುಗಳು ಅಟೋಮೆಟಿಕ್ ಕಾರುಗಳಿಗಿಂತ ಸ್ವಲ್ಪ ಹೆಚ್ಚು ಮೈಲೇಜ್ ನೀಡುತ್ತದೆ. ಸರಿಯಾದ ಡ್ರೈವಿಂಗ್ ತಂತ್ರ ಅನುಸರಿಸಿದರೆ ಮ್ಯಾನುಯಲ್ ಕಾರಿನಿಂದ ಉತ್ತಮ ಮೈಲೇಜ್ ಪಡೆಯಬಹುದು. ಹಸ್ತಚಾಲಿತ ವಾಹನಗಳು ಆಫ್-ರೋಡಿಂಗ್ ಅಥವಾ ಕಷ್ಟಕರವಾದ ರಸ್ತೆಗಳಲ್ಲಿ ಬೆಸ್ಟ್ ಎಂದು ಸಾಬೀತಾಗಿದೆ.

ಸ್ವಯಂಚಾಲಿತ ಗೇರ್ ಬಾಕ್ಸ್

ಸುಲಭ ಚಾಲನೆ- ಟ್ರಾಫಿಕ್‌ನಲ್ಲಿ ಬೆಸ್ಟ್ : ಸ್ವಯಂಚಾಲಿತ ಕಾರುಗಳ ದೊಡ್ಡ ಪ್ರಯೋಜನವೆಂದರೆ ಅವು ಚಾಲನೆ ಮಾಡಲು ಸುಲಭ, ವಿಶೇಷವಾಗಿ ವಾಹನ ದಟ್ಟನೆ ಇರುವ ಪ್ರದೇಶಗಳಲ್ಲಿ. ಏಕೆಂದರೆ ಕ್ಲಚ್ ಅನ್ನು ಮತ್ತೆ ಮತ್ತೆ ಒತ್ತುವ ತೊಂದರೆ ಇರುವುದಿಲ್ಲ. ಸ್ವಯಂಚಾಲಿತ ಕಾರುಗಳಲ್ಲಿ ನೀವು ಆಗಾಗ ಗೇರ್ ಬದಲಾಯಿಸುವ ಅಗತ್ಯವಿಲ್ಲ. ಕಾರು ಸ್ವಯಂಚಾಲಿತವಾಗಿ ಗೇರ್‌ಗಳನ್ನು ಬದಲಾಯಿಸುತ್ತದೆ. ನಗರಗಳ ದಟ್ಟಣೆಯ ಟ್ರಾಫಿಕ್‌ನಲ್ಲಿ, ಆಗಾಗ್ಗೆ ಕಾರನ್ನು ನಿಲ್ಲಿಸಿ ಗೇರ್ ಬದಲಾಯಿಸಬೇಕು. ಈ ಸಂದರ್ಭ ಅಟೋಮೆಟಿಕ್ ಗೇರ್‌ಬಾಕ್ಸ್ ಮಹಿಳೆಯರಿಗೆ ಹೆಚ್ಚು ಅನುಕೂಲಕರವಾಗಿದೆ. ಈಗ ಸ್ವಯಂಚಾಲಿತ ಎಸ್‌ಯುವಿಗಳು ಮತ್ತು 4×4 ವಾಹನಗಳು ಸಹ ಅತ್ಯುತ್ತಮ ಆಫ್-ರೋಡಿಂಗ್ ಆಯ್ಕೆಗಳನ್ನು ನೀಡುತ್ತಿವೆ.

ಇದನ್ನೂ ಓದಿ:Pregnancy: ಗರ್ಭಧಾರಣೆಗೆ ಸರಿಯಾದ ವಯಸ್ಸು ಯಾವುದು? ಮಹಿಳೆಯರಿಗೆ – ಪುರುಷರಿಗೆ ವೈದ್ಯರು ನೀಡೋ ಟಿಪ್ಸ್ ಏನು?

ಕಡಿಮೆ ಆಯಾಸ: ದೀರ್ಘಕಾಲ ಚಾಲನೆ ಮಾಡುವಾಗ, ಅಟೋಮೆಟಿಕ್ ಕಾರಿನಲ್ಲಿ ಚಾಲಕನಿಗೆ ಹೆಚ್ಚು ಸುಸ್ತಾಗುವುದಿಲ್ಲ. ಏಕೆಂದರೆ ಕ್ಲಚ್ ಮತ್ತು ಗೇರ್ ಅನ್ನು ಬದಲಾಯಿಸುವ ಅಗತ್ಯವಿಲ್ಲ. ಗೇರ್‌ಗಳನ್ನು ಬದಲಾಯಿಸುವ ಅಗತ್ಯವಿಲ್ಲದ ಕಾರಣ ಸುಗಮ ಮತ್ತು ಹೆಚ್ಚು ಆರಾಮದಾಯಕವಾಗಿ ಡ್ರೈವಿಂಗ್ ಮಾಡಬಹುದು.

ಹೆಚ್ಚಿನ ಮೂಲ ಬಂಡವಾಳ: ಸ್ವಯಂಚಾಲಿತ ಅಂದರೆ ಅಟೋಮ್ಯಾಟಿಕ್ ಕಾರುಗಳ ಬೆಲೆ ಮ್ಯಾನುವಲ್ ಕಾರುಗಳಿಗಿಂತ ಸ್ವಲ್ಪ ಹೆಚ್ಚಾಗಿದೆ. ನೀವು ಓಡಿಸಲು ಸುಲಭವಾದ ಕಾರನ್ನು ಬಯಸಿದರೆ ಅಥವಾ ನಗರದಲ್ಲಿ ಚಾಲನೆ ಮಾಡಲು ಕಾರನ್ನು ಖರೀದಿಸುತ್ತಿದ್ದರೆ, ನೀವು ಸ್ವಯಂಚಾಲಿತ ಕಾರನ್ನು ಖರೀದಿಸಬಹುದು. ಆದಾಗ್ಯೂ, ನೀವು ಕಡಿಮೆ ಬಜೆಟ್ ಕಾರು ಬಯಸಿದರೆ ಅಥವಾ ಉತ್ತಮ ಚಾಲನಾ ಅನುಭವವನ್ನು ಬಯಸಿದರೆ, ಮ್ಯಾನುವಲ್ ಕಾರು ಉತ್ತಮವಾಗಿರುತ್ತದೆ.

ಸ್ವಯಂಚಾಲಿತ ಕಾರು ಮಹಿಳೆಯರ ಆಯ್ಕೆ: ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದೀಗ ಆಟೋಮ್ಯಾಟಿಕ್ ಅಥವಾ ಗೇರ್ ಲೆಸ್ ಕಾರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಗೇರ್ ಬದಲಿಸುವ ಜಂಜಡ ಇಲ್ಲ ಅನ್ನೋದೇ ಇದಕ್ಕೆ ಮೂಲ ಕಾರಣ. ಹೆಚ್ಚಿನ ಮಹಿಳೆಯರು ಗೇರ್ ಬದಲಿಸುವ ಕಾರು ಇದೀಗ ಇಷ್ಟ ಪಡುತ್ತಿಲ್ಲ.

ವಿಶೇಷ ಸೂಚನೆ: ಮುಂದಿನ ಸಲ ಕಾರು ಕೊಳ್ಳುವ ಮೊದಲು, ನಿಮ್ಮ ಬಜೆಟ್ ಅನ್ನು ನೋಡುತ್ತಲೇ, ಮನ್ಯುವಲ್ ಮತ್ತು ಆಟೋಮ್ಯಾಟಿಕ್ ಕಾರುಗಳ ಲಾಭ ನಷ್ಟ ಮತ್ತು ಬಳಸಲು ಅನುಕೂಲ ಯಾವುದು ಎನ್ನುವುದರ ಅಧ್ಯಯನ ನಡೆಸಿ. ಈಚೆಗೆ, ಟೆಕ್ನಾಲಜಿ ಮುಂದುವರೆದಂತೆ ಆಟೋಮ್ಯಾಟಿಕ್ ಕಾರುಗಳು ಕೂಡಾ ತಮ್ಮ ಬೆಲೆಯನ್ನು ತಗ್ಗಿಸಿಕೊಳ್ಳುತ್ತಿವೆ. ಅಧ್ಯಯನದ ನಂತರವೇ ಮುಂದಿನ ನಿಮ್ಮ ಕಾರು ಖರೀದಿ ನಡೆಯಲಿ.

Comments are closed.