GST ಕಡಿತವಾಗಿ ಬೆಲೆ ಕಮ್ಮಿಯಾದ್ರೂ ಕಾರು ಮಾರಾಟದಲ್ಲಿ ಭಾರೀ ಕುಸಿತ !! ಕಾರು ಖರೀದಿಸ್ಬೇಕು ಅಂತಿದ್ರೆ ತಪ್ಪದೆ ಕಾರಣ ಗಮನಿಸಿ

Share the Article

GST: ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಷ್ಕರಣೆ ಮಾಡಿದ ಬಳಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಕೆಲವು ಕಂಪನಿಗಳ ಕಾರು ಹಾಗೂ ಬೈಕ್ ಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಾರು ಕಂಪನಿಗಳು ತಮ್ಮ ಇಳಿಕೆಯ ಮೊತ್ತವನ್ನು ಘೋಷಿಸಿಕೊಳ್ಳುತ್ತಿವೆ. ಆದರೂ GST ಕಡಿತ ಘೋಷಿಸಿದ್ರೂ ಆಗಸ್ಟ್‌ನಲ್ಲಿ ವಾಹನ ಮಾರಾಟ ಭಾರಿ ಕುಸಿತ ಕಂಡಿದೆಯಂತೆ.

ಹೌದು, ಬೇಡಿಕೆ ಕುಸಿತದಿಂದಾಗಿ, ಮಾರುತಿ ಸುಜುಕಿ (Maruti Suzuki), ಹುಂಡೈ, ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್‌ನಂತಹ ಪ್ರಮುಖ ಆಟೋಮೊಬೈಲ್ ಕಂಪನಿಗಳ ಸಗಟು ಮಾರಾಟ ಗಣನೀಯವಾಗಿ ಕುಸಿದಿದೆ. ಇದಕ್ಕೆ ಕಾರಣ ಸಿಂಪಲ್. ಅದೇನೆಂದರೆ ಕೇಂದ್ರ ಸರ್ಕಾರ GST ಪರಿಷ್ಕರಣೆ ಮಾಡಿದರೂ ಕೂಡ ಅದು ಜಾರಿಯಾಗುವುದು ಸೆ. 22ರಿಂದ.

ಹೀಗಾಗಿ ಅನೇಕ ಸಂಭಾವ್ಯ ಖರೀದಿದಾರರು ಜಿಎಸ್‌ಟಿ ದರಗಳ ಪರಿಷ್ಕರಣೆಗಾಗಿ ಕಾಯುತ್ತಿರುವುದರಿಂದ ಮತ್ತು ತಮ್ಮ ಖರೀದಿಯನ್ನು ಮುಂದೂಡುತ್ತಿರುವುದರಿಂದ ವಾಹನ ಮಾರಾಟದಲ್ಲಿ ಈ ಕುಸಿತ ಕಂಡುಬಂದಿದೆ. ಹಾಗಿದ್ದರೆ ಸೆ. 22ರ ಬಳಿಕ ಯಾವ ಕಾರುಗಳ ಬೆಲೆಯಲ್ಲಿ ಎಷ್ಟು ಕಮ್ಮಿಯಾಗಲಿದೆ? ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ.

ಟಾಟಾ ಮೋಟಾರ್ಸ್ ನಲ್ಲಿ ಎಷ್ಟು ಇಳಿಕೆ!

ಟಿಯಾಗೊ : 75,000 ರೂ.

ಟಿಗೋರ್ : 80,000 ರೂ.

ಆಲ್ಟ್ರೋಜ್ : 1.10 ಲಕ್ಷ ರೂ.

ಪಂಚ್ : 85,000 ರೂ.

ನೆಕ್ಸಾನ್ : 1.55 ಲಕ್ಷ ರೂ.

ಹ್ಯಾರಿಯರ್ : 1.40 ಲಕ್ಷ ರೂ.

ಸಫಾರಿ : 1.45 ಲಕ್ಷ ರೂ.

ಮಹೀಂದ್ರಾ ಕರುಗಳಲ್ಲಿ ಎಷ್ಟು ಇಳಿಕೆ.!

ಬೊಲೆರೊ ನಿಯೋ : 1.27 ಲಕ್ಷ ರೂ.ಗಳವರೆಗೆ ರಿಯಾಯಿತಿ

XUV 3XO : ಪೆಟ್ರೋಲ್ ಮೇಲೆ 1.40 ಲಕ್ಷ ರೂ., ಡೀಸೆಲ್ ಮೇಲೆ 1.56 ಲಕ್ಷ ರೂ. ರಿಯಾಯಿತಿ.

ಥಾರ್ : 1.35 ಲಕ್ಷ ರೂ.ಗಳವರೆಗೆ ರಿಯಾಯಿತಿ

ಥಾರ್ ರಾಕ್ಸ್ : 1.33 ಲಕ್ಷ ರೂ. ರಿಯಾಯಿತಿ

ಸ್ಕಾರ್ಪಿಯೋ ಕ್ಲಾಸಿಕ್ : 1.01 ಲಕ್ಷದವರೆಗೆ ರಿಯಾಯಿತಿ

ಸ್ಕಾರ್ಪಿಯೋ ಎನ್ : 1.45 ಲಕ್ಷ ರೂ. ರಿಯಾಯಿತಿ

UV700: ರೂ. 1.43 ಲಕ್ಷ ರಿಯಾಯಿತಿ

ಹುಂಡೈ ಕಾರುಗಳು!

ಗ್ರ್ಯಾಂಡ್ ಐ10 ನಿಯೋಸ್ : 73,808 ರೂ. ರಿಯಾಯಿತಿ

ಆರಾ : 78,465 ರೂ. ರಿಯಾಯಿತಿ

ಎಕ್ಸೆಟರ್ : 89,209 ರೂ. ರಿಯಾಯಿತಿ

i20 : 98,053 ರೂ. ರಿಯಾಯಿತಿ

i20 N-ಲೈನ್ : 1.08 ಲಕ್ಷ ರೂ. ರಿಯಾಯಿತಿ

ಬೆಲೆ : 1.23 ಲಕ್ಷ ರೂ. ರಿಯಾಯಿತಿ (ಎನ್-ಲೈನ್‌ಗೆ ರೂ. 1.19 ಲಕ್ಷ ರಿಯಾಯಿತಿ)

ವೆರ್ನಾ : 60,640 ರೂ. ರಿಯಾಯಿತಿ

ಕ್ರೆಟಾ : 72,145 ರೂ. ರಿಯಾಯಿತಿ

ಕ್ರೆಟಾ ಎನ್-ಲೈನ್ : 71,762 ರೂ. ರಿಯಾಯಿತಿ

ಅಲ್ಕಾಜರ್ : 75,376 ರೂ. ರಿಯಾಯಿತಿ

ಟಕ್ಸನ್ : 2.4 ಲಕ್ಷ ರೂ. ರಿಯಾಯಿತಿ

ಟೊಯೋಟಾ ವಾಹನಗಳ ಮೇಲೆ ರಿಯಾಯಿತಿ.!

ಫಾರ್ಚೂನರ್ : 3.49 ಲಕ್ಷ ರೂ.

ಲೆಜೆಂಡರ್: ರೂ.3.34 ಲಕ್ಷ ಕಡಿಮೆ

ಹೈಲಕ್ಸ್ : 2.52 ಲಕ್ಷ ರೂ.

ವೆಲ್‌ಫೈರ್ : 2.78 ಲಕ್ಷ ರೂ.

ಕ್ಯಾಮ್ರಿ : 1.01 ಲಕ್ಷ ರೂ.

ಇನ್ನೋವಾ ಕ್ರಿಸ್ಟಾ : 1.80 ಲಕ್ಷ ರೂ.

ಇನ್ನೋವಾ ಹೈಕ್ರಾಸ್ : 1.15 ಲಕ್ಷ ರೂ.

ಇತರ ಮಾದರಿಗಳು : 1.11 ಲಕ್ಷ ರೂ.

ಕಿಯಾ ಕಾರುಗಳ ಬೆಲೆ ಎಷ್ಟು ಇಳಿಕೆ?

ಸೋನೆಟ್ – ರೂ.1.64 ಲಕ್ಷ

ಸೈರಸ್ – ರೂ.1.86 ಲಕ್ಷ

ಸೆಲ್ಟೋಸ್ – ರೂ.75,000

ಕ್ಯಾರೆನ್ಸ್ – ರೂ.48,000

ಕ್ಯಾರೆನ್ಸ್ ಕ್ಲಾವಿಸ್ – ರೂ.78,000

ಕಾರ್ನೀವಲ್ – ರೂ.4.48 ಲಕ್ಷ

Comments are closed.