ಬೆಳ್ತಂಗಡಿ: ಕರೆಂಟ್ ಶಾಕ್’ಗೆ ಒಂದು ಕೈ, ಕಾಲು ಕಳಕೊಂಡ ವ್ಯಕ್ತಿಗೆ ಗಣೇಶ್ ಗೌಡ ಕಲಾಯಿ ಸಹಾಯ- 3 ಲಕ್ಷ ವೀಕ್ಷಣೆ ಪಡೆದ ವೈರಲ್ ವೀಡಿಯೋ!

ಬೆಳ್ತಂಗಡಿ: ಕಷ್ಟದಲ್ಲಿ ಇರುವವರನ್ನು ಕಂಡು ಮರುಗಿ ಸಹಾಯಕ್ಕೆ ಧಾವಿಸುವ ಜನರು ಇದ್ದೇ ಇರ್ತಾರೆ ಅನ್ನೋದಕ್ಕೆ ಇದೊಂದು ತಾಜಾ ಸಾಕ್ಷಿ ಅನ್ನಿಸುವಂತೆ ಕಾಣುವ ಘಟನೆ. 10 ದಿನಗಳ ಹಿಂದೆ ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಗಣೇಶ್ ಗೌಡ ಕಲಾಯಿಯವರು ಸಹಾಯ ಮಾಡಿದ ವೀಡಿಯೊ ಅನ್ನು Riding Jodi ಯವರು ತಮ್ಮ ಇನ್ಸ್ಟಾಗ್ರಾಮಿನಲ್ಲಿ ವ್ಯಕ್ತಿಯೊಬ್ಬರ ಕರುಣ ಜನಕ ಕಥೆಯನ್ನು ಹಂಚಿಕೊಂಡಿದ್ದರು.

ಜತೆಗೆ ಅವರ ಕುಟುಂಬಕ್ಕೆ ಒಂದಷ್ಟು ಸಹಾಯ ಹಸ್ತ ನೀಡಿದ್ದರು. ಈ ವಿಡಿಯೋ ಕೇವಲ 10 ದಿನದಲ್ಲಿ 3 ಲಕ್ಷ ವೀಕ್ಷಣೆ ಪಡೆದು ಎಲ್ಲರ ಗಮನ ಸೆಳೆದಿದೆ. ಕಳೆದ ವರ್ಷ ತೋಟತ್ತಾಡಿ ಗಣೇಶ್ ಗೌಡರು ಕರೆಂಟ್ ಶಾಕ್ ನಿಂದ ಒಂದು ಕೈ ಹಾಗು ಒಂದು ಕಾಲು ಕಳೆದುಕೊಂಡಿದ್ದರು, ಇವರಿಗೆ ಗಣೇಶ್ ಗೌಡ ಕಲಾಯಿ ಇವರು 2 ತಿಂಗಳ ರೇಷನ್ ಹಾಗೂ ಇತರ ಆರ್ಥಿಕ ಸಹಾಯ ನೀಡಿದ್ದು, ಈ ಸಂಬಂಧಿತ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇನ್ನಷ್ಟು ಹೆಚ್ಚಿನ ಸಹಾಯ ಹಸ್ತ ಈ ಅಂಗವಿಕಲ ವ್ಯಕ್ತಿಗೆ ಸಿಗಲಿ ಎಂಬುವುದು ಅವರ ಉದ್ದೇಶವಾಗಿತ್ತು. ಕೆಲ ದಿನಗಳ ಹಿಂದೆ Riding ಜೋಡಿ ಎನ್ನುವ ರೀಲ್ ಕಂಟೆಂಟ್ ಕ್ರಿಯೇಟರ್ ಗಳ ಜೊತೆ ಅವರ ಮನೆಗೆ ಕೂಡಾ ಹೋಗಿ ಸಹಾಯ ಮಾಡಿದ್ದರು. ರೈಡಿಂಗ್ ಜೋಡಿ ಎನ್ನುವ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ರೀಲ್ಸ್ ತಂಡ ವಿಡಿಯೋ ಅಪ್ಲೋಡ್ ಮಾಡಿದ್ದರು. ಈಗ ಇದು ಸುಮಾರು 3 ಲಕ್ಷ ವೀಕ್ಷಣೆ ಪಡೆದು ಕೊಂಡಿದೆ. ಈ ವಿಡಿಯೋ ನೋಡಿ ಹಲವಾರು ಇನ್ನಷ್ಟು ದಾನಿಗಳು ಮುಂದೆ ಬಂದು ಅವರಿಗೆ ಸಹಾಯ ಮಾಡುವಂತಾಗಲಿ ಅನ್ನುವ ಉದ್ದೇಶ ಫಲಿಸುತ್ತಿದೆ. ವೈರಲ್ ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ಬಡ ಅಂಗವಿಕಲ ವ್ಯಕ್ತಿಗೆ ನಿಮ್ಮ ಕೈಲಾದ ಸಹಾಯ ಹಸ್ತ ನೀಡಿರಿ.
Comments are closed.