Amith Shah: ಹಿಂದಿ ದೇಶದ ನ್ಯಾಯಾಂಗ, ಆಡಳಿತ ಹಾಗೂ ವಿಜ್ಞಾನದ ಭಾಷೆಯಾಗಬೇಕು- ಗೃಹ ಸಚಿವ ಅಮಿತ್ ಶಾ!

Amith Shah: ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಹಿಂದಿ ಕೇವಲ ಮಾತನಾಡುವ ಭಾಷೆಯಾಗಿ ಮಾತ್ರ ಸೀಮಿತವಾಗಬಾರದು, ಬದಲಿಗೆ, ವಿಜ್ಞಾನ, ತಂತ್ರಜ್ಞಾನ, ನ್ಯಾಯಾಂಗ ಹಾಗೂ ಪೊಲೀಸ್ ಸಂವಹನ ಭಾಷೆಯಾಗಬೇಕು ಎಂದು ಒತ್ತಿ ಹೇಳಿದ್ದಾರೆ.

ಗಾಂಧಿನಗರದಲ್ಲಿ ನಡೆಯುತ್ತಿರುವ ರಾಜ್ಯಭಾಷಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು ಹಿಂದಿಯಲ್ಲಿ ಆಡಳಿತ, ನ್ಯಾಯಾಂಗ, ಪೊಲೀಸ್, ವಿಜ್ಞಾನ ತಂತ್ರಜ್ಞಾನದ ಸಂವಹನ ಸಾಧ್ಯವಾದರೆ ದೇಶದಾದ್ಯಂತ ಸಾರ್ವಜನಿಕ ಸಂಪರ್ಕ ಸುಲಭವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಈ ಮೂಲಕ ಹಿಂದಿ ಭಾಷೆ – ಭಾರತೀಯ ಭಾಷೆ ಚರ್ಚೆಗೆ ಅಮಿತ್ ಶಾ ಅವರು ಮತ್ತೆ ನಾಂದಿ ಹಾಡಿದ್ದಾರೆ.
ಅಲ್ಲದೆ ರಾಜ್ಯಭಾಷೆಗಳೊಂದಿಗೆ ಹಿಂದಿ ಸಂಘರ್ಷ ಹೊಂದಲು ಬಯಸುವುದಿಲ್ಲ. ದೇಶದ ಅನೇಕ ಮಹನಿಯರು ಹಿಂದಿ ಭಾಷೆಯ ಮಹತ್ವ ಅರ್ಥ ಮಾಡಿಕೊಂಡು ಅದನ್ನು ಮುನ್ನೆಲೆಗೆ ತಂದರು. ಮನೆಯಲ್ಲಿ ತಂದೆ-ತಾಯಿ, ಪೋಷಕರು ಮಕ್ಕಳೊಂದಿಗೆ ತಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಬೇಕು. ಆ ಮೂಲಕ ಭಾಷೆಗಳನ್ನು ಅಮರವಾಗಿಸಬೇಕು’ ಎಂದು ಅಮಿತ್ ಶಾ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:K L Rahul: ಕೇರಳದ ದೇಗುಲಕ್ಕೆ ಕ್ರಿಕೆಟಿಗ ಕೆಎಲ್ ರಾಹುಲ್ರಿಂದ ಯಾಂತ್ರಿಕ ಆನೆ ಉಡುಗೊರೆ
ದೇಶದಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಭಾಷಾ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ. ಭಾಷಾ ವಿವಾದ ಹಾಗೂ ಹಿಂದಿ ಹೇರಿಕೆ ವಿಚಾರವಾಗಿ ದೇಶದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ದೇಶದ ವಿವಿಧ ಕ್ಷೇತ್ರಗಳ ಭಾಷೆಯಾಗಬೇಕು ಎಂದಿದ್ದಾರೆ.
Comments are closed.