Hassan Tragedy: ಬಿಜಿಎಸ್ ಆಸ್ಪತ್ರೆಯಿಂದ ಟ್ರಕ್ ಚಾಲಕ ಡಿಸ್ಚಾರ್ಜ್, ಪೊಲೀಸರಿಂದ ವಶಕ್ಕೆ, ಕೂಡಲೇ ಕಾಣಿಸಿಕೊಂಡ ಎದೆನೋವು

Hassan: ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ನಡೆದ ಅವಘಡದಿಂದ 10 ಜನ ಸಾವಿಗೀಡಾಗಿದ್ದು, ಟ್ರಕ್ ಚಾಲಕನನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಈತನ ಡಿಸ್ಚಾರ್ಜ್ ಮಾಲಾಗಿದ್ದು, ಚಾಲಕ ಭುವನೇಶ್‌ನನ್ನು ಶನಿವಾರ ರಾತ್ರಿಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

ಪೊಲೀಸರು ಇಂದು (ಸೆ.14) ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ನಿರ್ಧಾರ ಮಾಡಿದ್ದರು. ಭುವನೇಶ್‌ಗೆ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಪೆಟ್ಟಾಗಿತ್ತು. ನಾಗಮಂಗಲದ ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯ ಚೇತರಿಕೆ ಕಂಡ ಕಾರಣ ಡಿಸ್ಚಾರ್ಜ್ ಮಾಡಲಾಗಿತ್ತು.
ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ಕೂಡಲೇ ಆತ ಎದೆನೋವು, ಆರೋಗ್ಯದ ಸಮಸ್ಯೆ ಎಂದು ಹೇಳಿದ್ದಾನೆ. ಕೂಡಲೇ ಆತನನ್ನು ಹಿಮ್ಸ್ ಆಸ್ಪತ್ರೆಗೆ ಪೊಲೀಸರು ದಾಖಲು ಮಾಡಿದ್ದಾರೆ.
ಚಾಲಕ ಭುವನೇಶ್ ಮದ್ಯಪಾನ ಮಾಡಿ ಟ್ರಕ್ ಚಾಲನೆ ಮಾಡಿದ್ದಾನೆಯೇ ಎನ್ನುವುದಕ್ಕೆ ರಕ್ತದ ಮಾದರಿ ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ರಕ್ತ ಪರೀಕ್ಷೆಯ ವರದಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
Comments are closed.