Actor Darshan: ನಟ ದರ್ಶನ್‌ ಮಡದಿ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನ

Share the Article

Actor Darshan: ನಟ ದರ್ಶನ್‌ ಅವರ ಮಡದಿ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನ ಆಗಿದೆ ಎಂದು ವರದಿಯಾಗಿದೆ. ಬರೋಬ್ಬರಿ 3 ಲಕ್ಷ ರೂಪಾಯಿ ಹಣವನ್ನು ದೋಚಲಾಗಿದೆ. ಈ ಕುರಿತು ದೂರು ದಾಖಲಾಗಿದೆ.

ವಿಜಯಲಕ್ಷ್ಮೀ ಅವರು ಹೊಸಕೆರೆಹಳ್ಳಿಯ ಪ್ರೆಸ್ಟೇಜ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದು, ಹಣ ಕಳ್ಳತನ ಆಗಿದೆ. ಈ ಕುರಿತು ವಿಜಯಲಕ್ಷ್ಮೀ ಮ್ಯಾನೇಜರ್‌ ನಾಗರಾಜ್‌ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ:Water bottle: ನೀರಿನ ಬಾಟಲಿಯ ಮುಚ್ಚಳ ನುಂಗಿ 1 ವರ್ಷದ ಮಗು ದಾರುಣ ಸಾವು!

ವಿಜಯಲಕ್ಷ್ಮೀ ಅವರು ಮನೆ ಕೆಲಸದವರ ಮೇಲೆ ಅನುಮಾನ ಹೊರ ಹಾಕಿದ್ದಾರೆ. ಮನೆ ಕೆಲಸದವರ ಮೇಲೆ ದೂರನ್ನು ದಾಖಲು ಮಾಡಲಾಗಿದೆ. ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ.

Comments are closed.