Plane: ವಿಮಾನಗಳಿಗೆ ಬಿಳಿ ಬಣ್ಣ ಹಚ್ಚೋದು ಯಾಕೆ ಗೊತ್ತಾ?

Plane: ನಮಗೆ ಎಲ್ಲರಿಗೂ ತಿಳಿದಿರುವಂತೆ ವಿಮಾನದ ಬಣ್ಣ ಬಿಳಿಯಾಗಿರುತ್ತದೆ. ಆದರೆ ಈ ವಿಮಾನಗಳಿಗೆ (Plane) ಯಾಕೆ ಬಿಳಿ ಬಣ್ಣವನ್ನೇ ಹೆಚ್ಚಾಗಿ ಬಳಸುತ್ತಾರೆ? ಹಾಗಿದ್ರೆ ಇದರ ಹಿಂದೆ ಏನಾದರೂ ಕಾರಣವಿದ್ಯಾ? ಎಂಬ ಪ್ರಶ್ನೆ ನಿಮಗೆ ಯಾವತ್ತಾದರೂ ಕಾಡಿದ್ದರೆ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದು ವೈಜ್ಞಾನಿಕ, ಸುರಕ್ಷತಾ ದೃಷ್ಟಿಯಿಂದಾಗಿ ಎನ್ನಲಾಗಿದೆ. ವಿಮಾನದ ಸುರಕ್ಷತೆಯನ್ನು ಕಾಪಾಡುವುದು, ಜೊತೆಗೆ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಹಾಗೂ ಇನ್ನಿತರ ಕೆಲವು ಲಾಭಕ್ಕಾಗಿ ಬಿಳಿ ಬಣ್ಣವನ್ನು ಬಳಸುತ್ತಾರೆ.
ಇನ್ನು ಬಿಳಿ ಬಣ್ಣವನ್ನು ಸಾಮನ್ಯ ಬಣ್ಣ ಎಂದು ನೀವು ಅಂದುಕೊಂಡಿರಬಹುದು. ಆದ್ರೆ ಈ ಬಿಳಿ ಬಣ್ಣ ವಿಮಾನವನ್ನು ಸೂರ್ಯನ ಬೆಳಕಿನಿಂದ ರಕ್ಷಣೆ ಮಾಡುತ್ತದೆ. ರನ್ ವೇಯಲ್ಲಿ ವಿಮಾನಗಳ ಸುರಕ್ಷಿತ ಸಂಚಾರಕ್ಕಾಗಿ ಸಹಾಯ ಮಾಡುತ್ತದೆ. ಜೊತೆಗೆ ವಿಮಾನದ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ. ಇನ್ನು ವಿಮಾನಯಾನ ಸಂಸ್ಥೆಗಳು ತಮ್ಮ ಗುರುತನ್ನು ಪ್ರದರ್ಶಿಸಲು ಸಹಾಯ ಮಾಡುತ್ತೆ. ಅಲ್ಲದೆ ತಜ್ಞರು ಹೇಳುವ ಪ್ರಕಾರ ಅಪಘಾತಗಳ ಸಂಖ್ಯೆಯನ್ನು ಕೂಡ ಇದು ಕಡಿಮೆ ಮಾಡುವಲ್ಲಿ ಉಪಯುಕ್ತವಾಗುತ್ತದೆ ಎನ್ನಲಾಗಿದೆ.
ಪ್ರಮುಖವಾಗಿ ವಿಮಾನಕ್ಕೆ ಬಿಳಿ ಬಣ್ಣ ಬಳಿಯಲು ಕಾರಣವೆಂದರೆ ಅವುಗಳ ಗೋಚರತೆ ಸುಲಭವಾಗಿ ಎದ್ದು ಕಾಣಬೇಕು ಎಂಬುದಾಗಿರುತ್ತದೆ.
ವಿಮಾನದ ಪರಿಶೀಲನೆ ವೇಳೆ ವಿಮಾನದ ಮೇಲಿನ ಬಿರುಕುಗಳು, ತುಕ್ಕು ಹಿಡಿದಿರುವುದು ಹಾಗೂ ತೈಲ ಸೋರಿಕೆಯಾಗುತ್ತಿರುವ ಕುರಿತು ಪತ್ತೆ ಹಚ್ಚಲು ಇದು ಸುಲಭವಾಗುತ್ತದೆ.
ತಜ್ಞರು ಹೇಳುವ ಪ್ರಕಾರ ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದರಿಂದ ಪಕ್ಷಿ ಡಿಕ್ಕಿ ಆಗುವುದು ಕೂಡಾ ಕಡಿಮೆಯಾಗುತ್ತದೆ. ಯಾಕೆಂದರೆ ಬಿಳಿ ಬಣ್ಣ ಅಥವಾ ತಿಳಿಯಾದ ಬಣ್ಣವನ್ನ ಪಕ್ಷಿಗಳು ನೋಡಿದಾಗ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಹೀಗಾಗಿ ಪಕ್ಷಿ ಡಿಕ್ಕಿ ಆಗುವುದು ಕಡಿಮೆಯಾಗುತ್ತದೆ ಎನ್ನಲಾಗಿದೆ.
ವಿಮಾನವನ್ನು ರನ್ ವೇಯ ಮೇಲೆ ಬಿಳಿ ಬಣ್ಣ ತಂಪಾಗಿರುತ್ತದೆ. ಏಕೆಂದರೆ ತೀವ್ರ ಬಿಸಿಲಿನಿಂದಾಗಿ ಕಾದ ರನ್ ವೇನಲ್ಲಿ ವಿಮಾನ ಚಲಿಸಿದಾಗ ಅದರ ಶಾಖ ಇದಕ್ಕೆ ಪೂರ್ಣ ಪ್ರಮಾಣದಲ್ಲಿ ತಗುಲುವುದಿಲ್ಲ.
ಬಿಳಿ ಬಣ್ಣ ವಿಮಾನಕ್ಕೆ ಮಾತ್ರ ಪ್ರಯೋಜನವಾಗದೆ ಪ್ರಯಾಣಿಕರಿಗೂ ಸಹಾಯ ಮಾಡುತ್ತದೆ. ವಿಮಾನಯಾನದ ಸಮಯದಲ್ಲಿ ಸೂರ್ಯನ ಬೆಳಕು ವಿಮಾನದ ಮೇಲೆ ಬಿದ್ದಾಗ ಸೂರ್ಯನ ಕಿರಣಗಳನ್ನು ದೂರ ಸರಿಸುತ್ತವೆ.
ಇನ್ನು ವಿಮಾನದ ಹೊರ ಭಾಗದಲ್ಲಿರುವ ಆನ್ ಬೋರ್ಡ್ ವ್ಯವಸ್ಥೆಗಳು ಶಾಖದಿಂದ ಹಾನಿಯಾಗುವುದನ್ನು ಬಿಳಿ ಬಣ್ಣ ರಕ್ಷಿಸುತ್ತದೆ.
Comments are closed.