Bank Loan: ಅಗತ್ಯತೆಗಳ ಈಡೇರಿಕೆಗೆ ಸಾಲ ತೆಗೆಯಬೇಕೇ? ಕಡಿಮೆ ಬಡ್ಡಿಗೆ ಸಾಲ ನೀಡುವ ಬ್ಯಾಂಕ್ ಗಳಿವು

Bank Loan: ಮನುಷ್ಯನು ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಇಂದು ಹಣದ ಹಿಂದೆ ಹೋಗುವುದು ಸಾಮಾನ್ಯ. ಆದರೆ ತನ್ನ ಅಗತ್ಯತೆಗಳನ್ನು ಈಡೇರಿಸಿಕೊಳ್ಳಲು ಆತನಿಗೆ ಹಣದ ಕೊರತೆ ಉಂಟಾಗುತ್ತದೆ. ಇಂಥ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿ ಲೋನ್ ಮೊರೆ ಹೋಗುವುದು ಸಾಮಾನ್ಯ. ಆದರೆ ಇಂದು ಕೆಲವು ಬ್ಯಾಂಕುಗಳು ಅಧಿಕ ಬಡ್ಡಿಯನ್ನು ವಿಧಿಸುವ ಮೂಲಕ ಹೆಚ್ಚು ಹೊರೆಯಾಗುತ್ತಿದೆ. ಆದರೆ ಚಿಂತೆ ಬೇಡ. ಈ ಕೆಳಗಿನ ಬ್ಯಾಂಕುಗಳಲ್ಲಿ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಹಾಗಿದ್ದರೆ ಆ ಬ್ಯಾಂಕುಗಳು ಯಾವುವು? ಎಷ್ಟು ಬಡ್ಡಿಗೆ ಸಾಲ ಸಿಗುತ್ತದೆ ಎಂಬ ಡೀಟೇಲ್ಸ್ ಇಲ್ಲಿದೆ

ಇದನ್ನೂ ಓದಿ:FD: ಒಂದು ವರ್ಷಕ್ಕೆ FD ಇಡಲು ಯೋಚಿಸುತ್ತಿದ್ದೀರಾ? 6 ರಿಂದ 7% ಬಡ್ಡಿ ನೀಡುವ ಬ್ಯಾಂಕ್ ಗಳಿವು
* ಕ್ಯಾನರಾ ಬ್ಯಾಂಕ್: ಬಡ್ಡಿದರ ಶೇಕಡ 9.95ರಿಂದ ಶೇಕಡ 15.40ರ ವರೆಗೆ, ಪ್ರೊಸೆಸಿಂಗ್ ಶುಲ್ಕ ಶೇಕಡ 1ರಷ್ಟು ಇರುತ್ತದೆ.
* ಆಕ್ಸಿಸ್ ಬ್ಯಾಂಕ್: ಬಡ್ಡಿದರ ಶೇಕಡ 9.99ರಿಂದ ಶೇಕಡ 22.00ರವರೆಗೆ, ಪ್ರೊಸೆಸಿಂಗ್ ಶುಲ್ಕ ಶೇಕಡ 2ರ ವರೆಗೆ ಇರುತ್ತದೆ.
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಬಡ್ಡಿದರ ಶೇಕಡ 10.35ರಿಂದ ಶೇಕಡ 14.45ರ ವರೆಗೆ, ಪ್ರೊಸೆಸಿಂಗ್ ಶುಲ್ಕ ಶೇಕಡ 1ವರೆಗೆ ಇರುತ್ತದೆ.
* ಬ್ಯಾಂಕ್ ಆಫ್ ಬರೋಡಾ: ಬಡ್ಡಿದರ ಶೇಕಡ 10.40ರಿಂದ ಶೇಕಡ 18.20ರ ವರೆಗೆ, ಪ್ರೊಸೆಸಿಂಗ್ ಶುಲ್ಕ ₹1,000 ಅಥವಾ ಶೇಕಡ 1ವರೆಗೆ ಇರಲಿದೆ.
* ಐಸಿಐಸಿಐ ಬ್ಯಾಂಕ್: ಬಡ್ಡಿದರ ಶೇಕಡ 10.60ರ ವರೆಗೂ ಇರಲಿದೆ. ಪ್ರಾಸೆಸಿಂಗ್ ಶುಲ್ಕ ಶೇಕಡ 2ಕ್ಕೂ ಅಧಿಕ ತೆರಿಗೆ ಇರಲಿದೆ.
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಬಡ್ಡಿದರ ಶೇಕಡ 10.10ರಿಂದ ಶೇಕಡ 15.10ರಷ್ಟು ಇರಲಿದೆ, ಪ್ರೊಸೆಸಿಂಗ್ ಶುಲ್ಕ ಶೇಕಡ 1ರ ವರೆಗೆ ಇರಲಿದೆ.
* ಎಚ್ಡಿಎಫ್ಸಿ ಬ್ಯಾಂಕ್: ಬಡ್ಡಿದರ ಶೇಕಡ 10.90ರಿಂದ 24.00ರವರೆ ಇರಲಿದೆ. ಪ್ರೋಸೆಸಿಂಗ್ ಶುಲ್ಕ ₹6,500 ವರೆಗೆ ಇರಲಿದೆ.
* ಕೋಟಕ್ ಮಹೀಂದ್ರಾ ಬ್ಯಾಂಕ್: ಬಡ್ಡಿದರ ಶೇಕಡ 10.99ರಿಂದ ಆರಂಭ ಆಗಲಿದೆ. ಪ್ರಾಸೆಸಿಂಗ್ ಶುಲ್ಕ ಶೇಕಟ 2ರ ವರೆಗೆ ಇರಲಿದೆ.
Comments are closed.