Sameer MD: ನನ್ನ ಜೊತೆಗಿದ್ದವರೇ ನನಗೆ ಉಲ್ಟಾ ಹೊಡೆದರು – ವಿಡಿಯೋ ಮಾಡಿ ಅಳಲು ತೋಡಿಕೊಂಡ ಸಮೀರ್ ಎಂಡಿ!!

Share the Article

Sameer MD: ಧರ್ಮಸ್ಥಳದಲ್ಲಿ ನಡೆದಿದೆ ಹಿನ್ನಲಾದ ಸಾಮೂಹಿಕ ಹತ್ಯೆ ಪ್ರಕರಣವನ್ನು ಹಾಗೂ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣವನ್ನು ಎಐ ವಿಡಿಯೋ ಮೂಲಕ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದ ಯೂಟ್ಯೂಬರ್ ಸಮೀರ್ ಎಂಡಿಗೆ ಇತ್ತೀಚಿಗಷ್ಟೇ ಬೆಳ್ತಂಗಡಿ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಈ ಬೆನ್ನಲ್ಲೇ ಸಾಕಷ್ಟು ಬೆಳವಣಿಗೆಗಳು ನಡೆದದ್ದು ಎಲ್ಲರಿಗೂ ತಿಳಿದಿದೆ. ಇದಲ್ಲದರ ನಡುವೆ ಇದೀಗ ಸಮೀರ್ ಹೊಸ ವಿಡಿಯೋ ಮಾಡಿ ನನ್ನ ಜೊತೆಗಿದ್ದವರೇ ನನಗೆ ಉಲ್ಟಾ ಹೊಡೆದರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹೌದು, ವಿಚಾರಣೆ ಬಳಿಕ ಇದೇ ಮೊದಲ ಹೊಸ ವಿಡಿಯೋ ಮಾಡಿದ್ದಾನೆ. ಧರ್ಮಸ್ಥಳ ತಲೆ ಬುರುಡೆ ಕೇಸ್, ಪೊಲೀಸ್ ವಿಚಾರಣೆ, ಸುಜಾತ ಭಟ್ ಕೇಸ್, ಬಾಡಿಗೆ ಮನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮೀರ್ ಮಾತನಾಡಿದ್ದಾನೆ. ಅದರಲ್ಲಿ ನನ್ನ ಜೊತೆಯಲ್ಲಿದ್ದವರೇ ಉಲ್ಟಾ ಹೊಡೆದಿದ್ದಾರೆ, ಅಲ್ಲದೆ ನನಗೆ ಸಪೋರ್ಟ್ ಮಾಡುವ ಜನ ಕಡಿಮೆಯಾದರು ಎಂದು ಹೇಳಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ಅವರು ‘ಆ ಸುಜಾತ ಭಟ್ ತಾಯಿಯ ಕಣ್ಣೀರನ್ನ ನೋಡಿ ವಿಡಿಯೋ ಮಾಡಿದ್ದೆ. ಸುಜಾತ ಭಟ್​ರ ಇಂಟರ್​ವೀವ್ ನೋಡಿ ಕಣ್ಣೀರು ನೋಡಿ ಅದರ ಬಗ್ಗೆ ವಿಡಿಯೋ ಮಾಡಿದ್ದೆ. ಈಗ ಆ ಕಣ್ಣೀರೇ ಸುಳ್ಳು ಅಂದ್ರೆ ನಾನು ಏನು ಮಾಡಲಿ? ನನ್ನ ವಿಡಿಯೋ ಸುಳ್ಳು ಅಂತ ಹೇಳುತ್ತಿದ್ದಾರೆ. ಪೊಲೀಸರ ಯುಡಿಆರ್ ರಿಪೋರ್ಟ್​ ಸುಳ್ಳಾ? ಸೌಜನ್ಯಾ, ಪದ್ಮಾಲತಾರನ್ನ ಸಾಯಿಸಿದ್ದು ಯಾರು?’ ಲಾಡ್ಜ್ಗಳಲ್ಲಿ ಅಪರಿಚಿತ ಶವ ಸಿಗುತ್ತದೆ ಎಂದರೆ ಅದು ಹೇಗೆ ಸಾಧ್ಯ. ರೂಮ್ ಕೊಡುವಾಗ ಗೌರ್ಮೆಂಟ್ ಇನ ಯಾವುದಾದರೂ ಒಂದು ಐಡಿ ಪ್ರೂಫ್ ಅನ್ನು ಪಡೆದಿರುತ್ತಾರೆ ಅಲ್ಲವೇ? ಎಂದು ಹೇಳಿದ್ದಾರೆ. ಅಲ್ಲದೆ ಯಾವಾಗಲೂ ಸ್ಟುಡಿಯೋದಲ್ಲಿ ಕ್ಯಾಮರಾ ಮುಂದೆ ಕೂತ್ಕೊಂಡು ವಿಡಿಯೋ ಮಾಡ್ತಿದ್ದೆ. ಆದರೆ ಇವತ್ತು ಕಾರಲ್ಲಿ ಕೂತ್ಕೊಂಡು ವಿಡಿಯೋ ಮಾಡ್ತಿದ್ದೇನೆ ಅಂತ ಸಮೀರ್ ಕಾರಿನಲ್ಲಿ ಕುಳಿತು ಹೇಳಿದ್ದಾನೆ.

ಇದನ್ನೂ ಓದಿ:CM Siddaramiah : ಕ್ರಿಶ್ಚಿಯನ್ ಗೆ ದಲಿತ, ಕುರುಬ ಎಂಬ ಹಿಂದೂ ಪಂಗಡಗಳ ಕಾಲಂ ಯಾಕೆ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ

ಅಲ್ಲದೆ ನನಗೆ ವಿದೇಶದಿಂದ ಫಂಡ್​ ಬಂದಿದೆ ಎಂದು ಆರೋಪ ಮಾಡುತ್ತಿದ್ದಾರೆ. ನನಗೆ ಯಾವುದೇ ಫಂಡ್ ಬಂದಿಲ್ಲ. ಹಣ ತಗೊಂಡಿದ್ದರೆ ತನಿಖೆಯಿಂದ ಎಲ್ಲಾ ಹೊರಗೆ ಬರ್ತಿತ್ತು. ಪೊಲೀಸರಿಗೆ ಎಲ್ಲಾ ಬ್ಯಾಂಕ್ ದಾಖಲೆ ನೀಡಿದ್ದೇನೆ. ಪೊಲೀಸರು ತನಿಖೆ ಮಾಡಲಿ, ನನ್ನತ್ರ ಎರಡು ಬ್ಯಾಂಕ್ ಅಕೌಂಟ್ ಗಳಿವೆ ಅದನ್ನು ಕೂಡ ಪೊಲೀಸರಿಗೆ ನೀಡುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನಗೆ ಗೊತ್ತು ನನ್ನ ಮನಸಾಕ್ಷಿಗೆ ಗೊತ್ತು, ನಾನು ಏನು ತಪ್ಪು ಮಾಡಿಲ್ಲವೆಂದು. ನನ್ನ ಮೇಲೆ ಸುಳ್ಳು ಆರೋಪ ಮಾಡುವವರನ್ನ ಯಾರೂ ಪ್ರಶ್ನೆ ಮಾಡಲ್ಲ’ ಎಂದು ಸಮೀರ್ ಹೇಳಿದ್ದಾರೆ.

Comments are closed.