Suicide: ಈ ‘ಇಂಜೆಕ್ಷನ್’ ಕೊಟ್ಟರೆ ‘ಆತ್ಮಹತ್ಯೆ’ ಯೋಚನೆಯೇ ಸುಳಿಯಲ್ಲ!

Share the Article

Suicide: ಇತ್ತೀಚಿಗೆ ಸಣ್ಣ ಸಣ್ಣ ವಿಚಾರಗಳಿಗೆ ಮಕ್ಕಳಿಂದ ಹಿಡಿದು ದೊಡ್ಡವರು ಕೂಡಾ ಆತ್ಮಹತ್ಯೆ ಮಾಡಿಕೊಳ್ಳುವುದು ಗೊತ್ತಿರುವ ವಿಚಾರ. ಆದ್ರೆ ಈ ರೀತಿ ಸಣ್ಣ ವಿಚಾರಗಳಿಗೆ ಆತ್ಮಹತ್ಯೆಯ (Suicide) ಯೋಚನೆ ಬಂದವರಿಗೆ, ಆತ್ಮಹತ್ಯೆಯ ಪ್ರಯತ್ನ ಮಾಡಿ ಬದುಕಿ ಉಳಿದವರಿಗೆ ಮತ್ತೆ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವ ಹೊಸ ಇಂಜೆಕ್ಷನ್ (injection) ಕಂಡುಹಿಡಿಯಲಾಗಿದೆ.

ಹೌದು, ಆತ್ಮಹತ್ಯೆ ತಡೆಯಲು ಇಂಜೆಕ್ಷನ್ ಕಂಡುಹಿಡಿಯಲಾಗಿದ್ದು, ಸದ್ಯ ಇದೀಗ ಇಂಜೆಕ್ಷನ್ ರಾಜ್ಯ ವಿವಿಧ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಆದ್ರೆ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಬರುವ ರೋಗಿಗಳನ್ನ ವಿವಿಧ ಮಾನಸಿಕ ಮತ್ತು ದೈಹಿಕ ಪ್ರಯೋಗ, ಚಿಕಿತ್ಸೆಗಳಿಗೆ ಒಳಡಿಸಿದ ಬಳಿಕ ಈ ಇಂಜೆಕ್ಷನ್ ನಿಡಲಾಗುತ್ತದೆ. ಡಾ ರೂಪೇಶ್ ಕುಮಾರ್ ಪ್ರಕಾರ, ಒಮ್ಮೆ ಈ ಇಂಜೆಕ್ಷನ್ ತೆಗೆದುಕೊಂಡವರು ಮತ್ತೊಮ್ಮೆ ಆತ್ಮಹತ್ಯೆ ಯೋಚನೆ ಮಾಡವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:Digital ration card: ಡಿಜಿಟಲ್‌ ರೇಷನ್‌ ಕಾರ್ಡ್‌ ಪಡೆಯಲು ಈ ರೀತಿ ಮಾಡಿ

ಇನ್ನು ಆತ್ಮಹತೆ ಮಾಡಲು ಯತ್ನಿಸಿ ಬಂದವರಿಗೆಲ್ಲಾ ಇಂಜೆಕ್ಷನ್ ಕೊಡಲ್ಲ, ಅದಕ್ಕೂ ಮೊದಲು ಆ ವ್ಯಕ್ತಿಗೆ ಕೆಲವೊಂದು ಪರೀಕ್ಷೆ ಮಾಡಿದ ಬಳಿಕ ಅವರಿಗೆ ಆ ಇಂಜೆಕ್ಷನ್ ಅಗತ್ಯವಿದ್ರೆ ಮಾತ್ರ ಅವರಿಗೆ ಗೊತ್ತಾಗದ ಹಾಗೆ ಗ್ಲೂಕೋಸ್ ಮೂಲಕ ನೀಡಲಾಗುತ್ತದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಬೆಲೆ 15ರಿಂದ 20 ಸಾವಿರ ಇದೆ. ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತವಾಗಿ ನೀಡಲಾಗುತ್ತದೆಯಂತೆ.

Comments are closed.