Diet Tips: ತೂಕ ಇಳಿಸಲು ಜೋಳದ ರೊಟ್ಟಿ, ರಾಗಿ ರೊಟ್ಟಿಯಲ್ಲಿ ಯಾವುದು ಬೆಸ್ಟ್?

Share the Article

Diet Tips: ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಅವರೆಲ್ಲರಿಗೂ ಕೂಡ ತಾವು ಚಂದವಾಗಿ ಕಾಣಬೇಕು, ಸ್ಮಾರ್ಟ್ ಆಗಿ ಕಾಣಬೇಕು ಎಂಬ ಆಸೆ. ಆದರೆ ಏನು ಮಾಡೋದು, ಅವರಿರುವ ಎತ್ತರ, ವಿಪರೀತವಾಗಿ ಬೆಳೆದ ಬೊಜ್ಜು, ದಡೂತಿ ದೇಹ ಇದೆಲ್ಲದಕ್ಕೂ ಅಡ್ಡಿ ಬರುತ್ತದೆ. ಹೀಗಾಗಿ ಸಣ್ಣಗಾಗಲು ಅನೇಕರು ಹಲವು ವಿಧಧ ಪ್ರಯೋಗ ಮಾಡುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ರಾಗಿ ರೊಟ್ಟಿ ಹಾಗೂ ಜೋಳದ ರೊಟ್ಟಿಯನ್ನು ಅನೇಕರು ಡಯಟ್ ಫುಡ್ ಆಗಿ ಬಳಸುತ್ತಿದ್ದಾರೆ.

ಹೌದು, ಒಂದು ಕಾಲದಲ್ಲಿ ಚಪಾತಿ ಡಯಟ್ ಫುಡ್ ಎಂದೆ ಎಲ್ಲೆಡೆ ಖ್ಯಾತಿ ಹೊಂದಿತ್ತು. ಅನೇಕರು ರಾತ್ರಿಯ ವೇಳೆ ಬರಿ ಚಪಾತಿಯನ್ನು ತಿಂದು ಮಲಗುತ್ತಿದ್ದರು. ಇನ್ನು ಕೆಲವರು ಮೂರು ಹೊತ್ತು ಕೂಡ ಚಪಾತಿಯನ್ನು ಮಾತ್ರ ಮೆಲ್ಲುತ್ತಿದ್ದರು. ಆದರೆ ಇಂದು ಟ್ರೆಂಡ್ ಬದಲಾಗಿದ್ದು ಹಲವಾರು ರೀತಿಯ ಡಯಟ್ ಫುಡ್ ಗಳು ನಮಗೆ ಲಭ್ಯವಿದೆ. ಇದೀಗ ಜೋಳದ ರೊಟ್ಟಿ ಹಾಗೂ ರಾಗಿ ರೊಟ್ಟಿ ಕೂಡಾ ಅನೇಕರ ಅತಿಪ್ರಿಯದ ಡಯಟ್ ಫುಡ್ ಆಗಿದೆ. ಹಾಗಾದರೆ ತೂಕ ಇಳಿಸಲು ಇವುಗಳಲ್ಲಿ ಯಾವುದು ಬೆಸ್ಟ್ ಗೊತ್ತಾ?

ಇದನ್ನೂ ಓದಿ:Karnataka: ಸೆ.22 ರಿಂದ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ

ತೂಕ ಇಳಿಕೆ ಎಂದಾಗ ರಾಗಿ ರೊಟ್ಟಿ ಹಾಗೂ ಜೋಳದ ರೊಟ್ಟಿ ಇವೆರಡರಲ್ಲಿ ಯಾವುದು ಉತ್ತಮ ಎನ್ನುವ ಪ್ರಶ್ನೆ ಮೂಡುತ್ತದೆ. ಕೆಲವರು ರಾಗಿ ರೊಟ್ಟಿ ಉತ್ತಮ ಆಯ್ಕೆ ಎಂದುಕೊಳ್ಳುತ್ತಾರೆ. ಇದಕ್ಕೆ ಹೋಲಿಸಿದ್ರೆ ಜೋಳದ ರೊಟ್ಟಿ ಬೆಸ್ಟ್ ಎನ್ನಬಹುದು. ಇದರಲ್ಲಿ ಕ್ಯಾಲೋರಿ ಕಡಿಮೆಯಿದ್ದು ಬೇಗನೇ ಜೀರ್ಣವಾಗುತ್ತದೆ. ಹೀಗಾಗಿ ತೂಕ ಇಳಿಕೆ ಮಾಡುವವರು ರಾಗಿ ರೊಟ್ಟಿಗಿಂತ ಜೋಳದ ರೊಟ್ಟಿ ಸೇವನೆ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿದೆ.

Comments are closed.