Karnataka Gvt: ರಾಜ್ಯದ ರೈತರಿಗೆ ಗುಡ್ ನ್ಯೂಸ್ – ಬೆಳೆ ಪರಿಹಾರ ಹೆಚ್ಚಿಸಲು ಸರ್ಕಾರ ನಿರ್ಧಾರ, ಈಗ ಎಕರೆಗೆ ಎಷ್ಟಿದೆ ಪರಿಹಾರ?

Share the Article

Karnataka Gvt : ರಾಜ್ಯದ ರೈತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು ಬೆಳೆ ನಷ್ಟ ಪರಿಹಾರವನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಹಾಗಾದರೆ ಪರಿಹಾರ ಎಷ್ಟು ಹೆಚ್ಚಾಗುತ್ತದೆ? ಈಗೆಷ್ಟು ಪರಿಹಾರವನ್ನು ನೀಡಲಾಗುತ್ತಿದೆ? ಇಲ್ಲಿದೆ ನೋಡಿ ಡಿಟೇಲ್ಸ್.

ಹೌದು, ರಾಜ್ಯದಲ್ಲಿ ಅಂದಾಜು 5.20 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವನ್ನು ಅಂದಾಜು ಮಾಡಲಾಗಿದೆ. ಈ ಬೆನ್ನಲ್ಲೇ ಎಸ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಸಧ್ಯ ನೀಡುವ ಪರಿಹಾರ ಏನೇನೂ ಸಾಲದು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಸುಮಾರು 5 ವರ್ಷಗಳ ಬಳಿಕ ಬೆಳೆ ನಷ್ಟ ಪರಿಹಾರ ಪರಿಷ್ಕರಣೆಗೆ ಸರಕಾರ ಮುಂದಾಗಿದೆ.

ಈ ಕುರಿತಾಗಿ ಮಾತನಾಡಿರುವ ಸಿದ್ದರಾಮಯ್ಯ ಅವರು ”ಮಳೆಯಿಂದ ರಾಜ್ಯದ ಬಹುಭಾಗಗಳಲ್ಲಿ ವ್ಯಾಪಕವಾಗಿ ಬೆಳೆ ಹಾನಿಯಾಗಿದ್ದು, ರೈತರಿಗೆ ಎಸ್‌ಡಿಆರ್‌ಎಫ್‌ ಮಾರ್ಗಸೂಚಿಗಿಂತ ಹೆಚ್ಚಿನ ಪರಿಹಾರ ನಿಗದಿ ಮಾಡುವ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು,” ಎಂದು ಹೇಳಿದ್ದಾರೆ.

ಸದ್ಯ ನೀಡುವ ಬೆಳೆ ನಷ್ಟ ಪರಿಹಾರ ಎಷ್ಟು?
ವಿಪತ್ತು ನಿರ್ವಹಣಾ ಮಾರ್ಗಸೂಚಿಯಂತೆ ಪ್ರಸ್ತುತ ಗರಿಷ್ಠ 2 ಹೆಕ್ಟೇರ್‌ ಪ್ರದೇಶದ ಮಿತಿಗೊಳಪಟ್ಟು ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಣೆ ಮಾಡಲಾಗುತ್ತಿದೆ.
ಮಳೆಯಾಶ್ರಿತ ಬೆಳೆ – 8,500 ರೂ.
ನೀರಾವರಿ ಪ್ರದೇಶದ ಬೆಳೆ – 17,000 ರೂ.
ದೀರ್ಘಾವಧಿ (ತೋಟಗಾರಿಕೆ) ಬೆಳೆ – 22,500 ರೂ.

ಮನೆ ಹಾನಿಗೆ ಪ್ರಸ್ತುತ ಎಷ್ಟು ಪರಿಹಾರ?
ಸಣ್ಣ ಪ್ರಮಾಣದ ಹಾನಿ – 6,500 ರೂ.
ಶೇ. 20 ರಿಂದ ಶೇ. 50ರಷ್ಟು ಹಾನಿ – 30 ಸಾವಿರ ರೂ.
ಶೇ.50 ರಿಂದ ಶೇ. 75 ರಷ್ಟು ಹಾನಿ – 50 ಸಾವಿರ ರೂ.
ಸಂಪೂರ್ಣ ಮನೆ ಹಾನಿ – 1 ಲಕ್ಷ 20 ಸಾವಿರ ರೂ.

ಅಂದಹಾಗೆ ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರ ಮೊತ್ತ ಹೆಚ್ಚಳ ಮಾಡಲಾಗಿತ್ತು. ಇದರ ಬಳಿಕ ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಬೆಳೆ ಪರಿಹಾರದ ಪರಿಷ್ಕರಣಿಗೆ ಮುಂದಾಗಿ ರೈತರಿಗೆ ಸಿಹಿ ಸುದ್ದಿ ನೀಡಿದೆ.

Comments are closed.