Male Mahadeshwara: ಮಲೆ ಮಹದೇಶ್ವರನಿಗೆ ತಟ್ಟಲ್ಲ ಯಾವುದೇ ಗ್ರಹಣ – ಇದರ ರಹಸ್ಯ ಗೊತ್ತಾದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ!!

Share the Article

Male Mahadeshwara: ಇಂದು ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ದೇವಾಲಯಗಳ ಬಾಗಿಲನ್ನು ಮುಚ್ಚಲಾಗಿದೆ. ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಇಂದು ನಿಷೇಧ ಹೇರಲಾಗಿದೆ. ಆದರೆ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಮಲೆಮಹದೇಶ್ವರ ಸ್ವಾಮಿಗೆ ಇಂದಿನ ಚಂದ್ರಗ್ರಹಣ ಮಾತ್ರವಲ್ಲ ಯಾವುದೇ ರೀತಿಯ ಗ್ರಹಣಗಳ ಎಫೆಕ್ಟ್ ಆಗುವುದಿಲ್ಲ ಎಂಬುದು ನಿಮಗೆ ಗೊತ್ತೇ? ಇದಕ್ಕೆ ಕಾರಣವೂ ಕೂಡ ಇದೆ. ಹಾಗಿದ್ದರೆ ಏನು ಆ ರಹಸ್ಯ?

ಹೌದು, ರಾಜ್ಯಾದ್ಯಂತ ಪ್ರಮುಖ ದೇವಾಲಯಗಳು ಗ್ರಹಣದ ಎಫೆಕ್ಟ್​ಗೆ ಬಂದ್ ಆಗಲಿದೆ. ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಮಲೆ ಮಹದೇಶ್ವರನ ಬೆಟ್ಟದಲ್ಲಿ ಮಾತ್ರ ಎಂದಿನಂತೆ ಪೂಜಾ ಕೈಂಕರ್ಯ ನಡೆಯಲಿದೆ. ಮಾದಪ್ಪನಿಗೆ ಮಾತ್ರ ಏಕೆ ಈ ಗ್ರಹಣ ತಟ್ಟುವುದಿಲ್ಲ ಅಂತ ನೋಡುವುದಾದರೆ, ಮಾದಪ್ಪ ಶಿವನ ಒಂದು ಅವತಾರ, ಪವಾಡ ಪುರುಷ. ಈತನಿಗೆ ಮುಟ್ಟು-ಮೈಲಿಗೆ ಅನ್ನೋದಿಲ್ಲ, ಹಾಗಾಗಿ ಯಾವುದೇ ಗ್ರಹಣದಲ್ಲೂ ಮಲೆ ಮಹದೇಶ್ವರನ ದರ್ಶನ ಭಾಗ್ಯ ತಪ್ಪುವುದಿಲ್ಲ.

ಇದನ್ನೂ ಓದಿ:Lunar eclipse: ಚಂದ್ರಗ್ರಹಣ ಬರಿ ಕಣ್ಣಿನಲ್ಲಿ ನೋಡಬಹುದೇ? ಭೌತವಿಜ್ಞಾನಿ ಹೇಳಿದ್ದೇನು?!

Comments are closed.