Mangaluru : ಪಿಯುಸಿ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರಗೈದು ವಿಡಿಯೋ ರೆಕಾರ್ಡ್ – ಅಪ್ರಾಪ್ತ ಸೇರಿ 8 ಮಂದಿ ಅರೆಸ್ಟ್

Mangaluru : ಮಂಗಳೂರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಪಿಯುಸಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ಸುಮಾರು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೌದು, ಸೋಶಿಯಲ್ ಮಿಡಿಯಾದಲ್ಲಿ ಪರಿಚಯವಾದ ವಿಧ್ಯಾರ್ಥಿನಿಯ ಲೈಂಗಿಕವಾಗಿ ಬಳಸಿಕೊಂಡು ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಯುವಕರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.ಕಾರ್ತಿಕ್, ರಾಕೇಶ್ ಸಲ್ಡಾನಾ, ಜೀವನ್, ಸಂದೀಪ್, ರಕ್ಷಿತ್, ಶ್ರವಣ್, ಸುರೇಶ್ ಬಂಧಿತರು. ಬಾಲಕನನ್ನು ಬಾಲಾಪರಾಧಗೃಹಕ್ಕೆ ಸೇರಿಸಲಾಗಿದೆ.
‘ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಕಾರ್ತಿಕ್ ಜೊತೆ, ಬಾಲಕಿ ಆಗಾಗ ಸಂದೇಶ ವಿನಿಮಯ ಮಾಡಿಕೊಳ್ಳುವ ಜೊತೆಗೆ ಕಾಲ್ ಮಾಡಿ ಮಾತನಾಡುತ್ತಿದ್ದಳು. ಪರಿಚಯ ಪ್ರೀತಿಗೆ ತಿರುಗಿದ್ದು ಕಳೆದ ಜೂನ್ ತಿಂಗಳಲ್ಲಿ ವಿದ್ಯಾರ್ಥಿನಿಯನ್ನು ಪುಸಲಾಯಿಸಿದ ಕಾರ್ತಿಕ್, ಆಕೆಯನ್ನು ಅಡ್ಯಾರ್ ಫಾಲ್ಸ್ ಬಳಿ ಇರುವ ಕಾಡಿಗೆ ಕರೆದೊಯ್ದಿದ್ದು ಅಲ್ಲಿಯೇ ಅತ್ಯಾಚಾರ ಎಸಗಿದ್ದ.
ಸ್ಥಳದಲ್ಲಿ ಆಕೆಯ ಸ್ನೇಹಿತ ರಾಕೇಶ್ ಸಲ್ಡಾನ್ಹಾ ಎಂಬಾತನೂ ಇದ್ದು, ಆತನೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಇದನ್ನು ಕಾರ್ತಿಕ್ ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದ, ಅದನ್ನು ಸ್ನೇಹಿತರು ನೋಡಿದ್ದು, ಬಳಿಕ ವೈರಲ್ ಆಗಿತ್ತು. ಈ ವಿಚಾರ ತಿಳಿಯುತ್ತಲೇ ಆ. 16ರಂದು ಸಂತ್ರಸ್ತ ಯುವತಿ ಬಜಪೆ ಠಾಣೆಗೆ ದೂರು ನೀಡಿದ್ದಳು. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Comments are closed.