Jio: ‘ಜಿಯೋ’ ಬಳಕೆದಾರರ ಸಂಖ್ಯೆ ರಿವಿಲ್ ಮಾಡಿದ ರಿಲಯನ್ಸ್ – ಇತರ ಟೆಲಿಕಾಂ ಗಳಿಗೆ ಎಷ್ಟಿದ್ದಾರೆ ಬಳಕೆದಾರರು?

Jio: ಹುಟ್ಟಿಕೊಂಡ ಕೆಲವೇ ಸಮಯಗಳಲ್ಲಿ ದೇಶಾದ್ಯಂತ ತನ್ನ ವ್ಯಾಪ್ತಿಯನ್ನು ಪಸರಿಸಿದ ಜಿಯೋ ಸಂಸ್ಥೆ ಇದೀಗ ತನ್ನ ಒಟ್ಟು ಗ್ರಾಹಕರ ಸಂಖ್ಯೆಯನ್ನು ರಿವಿಲ್ ಮಾಡಿದೆ. ಹಾಗಿದ್ರೆ ಜಿಯೋ ಜೊತೆಗೆ ಏರ್‌ಟೆಲ್, ಬಿಎಸ್‌ಎನ್‌ಎಲ್ ಸೇರಿದಂತೆ ಟೆಲಿಕಾಂ ಕಂಪನಿಗಳ ಗ್ರಾಹಕರು ಎಷ್ಟಿದ್ದಾರೆ ಗೊತ್ತಾ?

ಭಾರತದಲ್ಲಿ ಏರ್ಟೆಲ್ 33.65% (39.1 ಕೋಟಿ ಬಳಕೆದಾರರು) ಹೊಂದಿದ್ದರೆ, ವೊಡಾಫೋನ್ ಐಡಿಯಾ 17.52% (20.38 ಕೋಟಿ ಬಳಕೆದಾರರು) ಹೊಂದಿದೆ. ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಒಟ್ಟಾಗಿ 7.79% ಪಾಲನ್ನು ಹೊಂದಿವೆ. ಈ ಮೂಲಕ ಜಿಯೋ ಮೊದಲ ಸ್ಥಾನದಲ್ಲಿದ್ದರೆ ಉಳಿದ ಟೆಲಿಕಾಂ ನೆಟ್‌ವರ್ಕ್ ನಂತರದ ಸ್ಥಾನದಲ್ಲಿದೆ.
ಅಂದಹಾಗೆ ರಾಷ್ಟ್ರೀಯವಾಗಿ, ಜಿಯೋ ಜುಲೈ ತಿಂಗಳಲ್ಲಿ ಒಟ್ಟು 4.82 ಲಕ್ಷ ಚಂದಾದಾರರನ್ನು ಸೇರಿಸಿಕೊಂಡಿದೆ. ಒಟ್ಟು ಬಳಕೆದಾರರ ಸಂಖ್ಯೆಯನ್ನು 47.75 ಕೋಟಿಗೆ ಹೆಚ್ಚಿಸಿಕೊಂಡಿದೆ ಮತ್ತು 41.04% ಮಾರುಕಟ್ಟೆ ಪಾಲನ್ನು ಹೊಂದಿರುವ ಮೊಬೈಲ್ ವಿಭಾಗದಲ್ಲಿ ಮುಂಚೂಣಿಯಲ್ಲಿದೆ.
ರಾಷ್ಟ್ರೀಯ ಮಟ್ಟದಲ್ಲಿ, ಜಿಯೋ 64,45,929 ಲಕ್ಷಕ್ಕೂ ಹೆಚ್ಚು ಚಂದಾದಾರರೊಂದಿಗೆ 76% ಪಾಲನ್ನು ಹೊಂದಿದ್ದು, ಎಫ್‌ಡಬ್ಲ್ಯೂಎ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ. ಇನ್ನು ರಾಜ್ಯದಲ್ಲಿ ಸಕ್ರಿಯ ಜಿಯೋ ಏರ್‌ಫೈಬರ್ ಬಳಕೆದಾರರ ಸಂಖ್ಯೆ ಜುಲೈನಲ್ಲಿ 3,51,817 ಕ್ಕೆ ಏರಿದೆ. ಇದು 2025 ರ ಜೂನ್‌ನಲ್ಲಿ 3,39,981 ರಷ್ಟಿತ್ತು.
Comments are closed.